ಅಂಧ ಮಕ್ಕಳೊಂದಿಗೆ ಎಸ್ ಎಂ ಶಿವಪ್ರಕಾಶ್ ಹುಟ್ಟು ಹಬ್ಬ

ಮೈಸೂರು:5 ಜನವರಿ 2022

ನಂದಿನಿ

ಎಸ್ ಎಂ ಪಿ ಫೌಂಡೇಶನ್ ಅಧ್ಯಕ್ಷರು ಹಾಗೂ ಎಸ್ ಎಂ ಪಿ ಡೆವೆಲಪ್ಪರ್ಸ್ ಮಾಲೀಕರಾದ ಎಸ್ ಎಂ ಶಿವಪ್ರಕಾಶ್ ರವರ ಹುಟ್ಟು ಹಬ್ಬವನ್ನ ಅಂಧ ಮಕ್ಕಳಿಗೆ ಸಮವಸ್ತ್ರ ನೀಡುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮೈಸೂರಿನ ತಿಲಕ್ ನಗರದಲ್ಲಿರುವ ಅಂಧ ಮಕ್ಕಳ ಶಾಲೆಯಲ್ಲಿ ಬಂಡಿಪಾಳ್ಯದ ಹಣ್ಣು ಮತ್ತು ತರಕಾರಿ ದಲ್ಲಾಳರಾದ ದಪ್ಪ ಮೆಣಸಿನಕಾಯಿ ರವಿ , ಬಂಡಿಪಾಳ್ಯ ಹಾಗೂ ಎ ಪಿ ಎಂ ಸಿ ವರ್ತಕರು ಮತ್ತು ಬಂಡಿಪಾಳ್ಯ ಯುವಕರು ಮೈಸೂರು ಇವರ ನೇತೃತ್ವದಲ್ಲಿ ಅಯೋಜನೆಗೊಂಡ ಕಾರ್ಯಕ್ರಮದಲ್ಲಿ ಎಸ್.ಎಂ.ಶಿವಪ್ರಕಾಶ್ ರವರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ
ರಾಮೇಗೌಡ ಮಾತನಾಡಿ ಡಾ.ರಾಜ್ ಕುಮಾರ್ ನೇತ್ರದಾನ ಮಾಡಿದ್ರು.ಅವರ ಆದಿಯಲ್ಲಿಯೇ ಪುನೀತ್ ರಾಜ್ ಕುಮಾರ್ ರವರು ನಿಧನರಾದಾಗ ತಮ್ಮ ಕಣ್ಣು ದಾನ ಮಾಡಿ ನಾಲ್ಕು ಜನರಿಗೆ ದೃಷ್ಠಿ ಕೊಟ್ಟಿದ್ದಾರೆ.ಇಂದು ನೂರಾರು ಮಂದಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ.ಮುಂದಿನ ದಿನದಲ್ಲಿ ಅಂಧ ಮಕ್ಕಳಿಗೂ ದೃಷ್ಠಿ ಸಿಗಲಿದೆ.ಶಿವಪ್ರಕಾಶ್ ಹಲವಾರು ಸಮಾಜಮುಖಿ ಸೇವಾ ಮಾಡಿದ್ದಾರೆ.ಶಿವಪ್ರಕಾಶ್ ರವರು ಎಂ ಎಲ್ ಎ ಆಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ದಪ್ಪ ಮೆಣಸಿನಕಾಯಿ ರವಿ ಮಾತನಾಡಿ ಪ್ರತಿ ವರ್ಷ ಬಂಡಿಪಾಳ್ಯದಲ್ಲಿ ದುಂದು ವೆಚ್ಚ ಮಾಡಿ ಹುಟ್ಟು ಹಬ್ಬ ಆಚರಿಸುತ್ತಿದ್ದೇವು.ಈ ವರ್ಷ ಅಂಧ ಮಕ್ಕಳ ಜೊತೆ ಶಿವಪ್ರಕಾಶ್ ರವರ ಹುಟ್ಟು ಹಬ್ಬ ಆಚರಿಸಲು ಮುಂದಾಗಿದ್ದು ಮಕ್ಕಳಿಗೆ ಸಮವಸ್ತ್ರ ಹಾಗೂ 15 ಸಾವಿರ ಹಣ ನೀಡಿದ್ದೇವೆ. ಇದು ನಮಗೆ ಖುಷಿ ತಂದಿದೆ.ಇನ್ನೂ ಈ ಶಾಲೆಗೆ ಅಗತ್ಯವಾದ ತರಕಾರಿಯನ್ನ ಉಚಿತವಾಗಿ ನೀಡುತ್ತೇನೆ ಎಂದರು.

ಶಿವಪ್ರಕಾಶ್ ಮಾತನಾಡಿ ಈ ವರ್ಷದ ಹುಟ್ಟು ಹಬ್ಬ ನನಗೆ‌ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಬಸವರಾಜು,
ಪಾಲಿಕೆ ಸದಸ್ಯ ಸುನೀಲ್,
ರಾಮೇಗೌಡ ಮಾದಾಪುರ,
ದಿನೇಶ್,ವೇಣು, ವೇದ ಮೂರ್ತಿ,
ಪೈಲ್ವಾನ್ ಮಂಜುನಾಥ್ ಸಿಂಗ್,ಅಂಧ ಮಕ್ಕಳ ಶಾಲೆಯ ಅಧೀಕ್ಷಕರಾದ ಸತೀಶ್,ವೇಣು, ಸಂತೋಷ್,ಸದಾಶಿವ,ಹೊನ್ನೇಗೌಡ,ಮಂಜು ,ರವಿ ,ಪುನೀತ್ ಸೇರಿದಂತೆ
ಶಾಲೆಯ ಮಕ್ಕಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *