ಸರಗೂರು:5 ಜನವರಿ 2021
ವಿಕಲಚೇತನ ಕುಟುಂಬಕ್ಕೆ ಸೇರಿದ ಹುಲ್ಲಿನ ಮೆದೆಗೆ ಬೆಂಕಿಯಿಟ್ಟು ಕಿಡಿಕೇಡಿಗಳು ವಿಕೃತಿ ಮೆರೆದಿದ್ದರೂ, ಅನ್ನದಾತ ನೆನ್ನೆ ಕಣ್ಣೀರಿಟ್ಟಿದ್ದ ಇಂದು
ನೊಂದ ಕುಟುಂಬಕ್ಕೆ ಭೂಮಿಪುತ್ರ,ರೈತಮಿತ್ರ ಸಂಸ್ಥೆ
ವೈಯಕ್ತಿಕ ಸಹಾಯಧನ- ಪಡಿತರ ವಿತರಣೆ ನೀಡಿ ಸಾಂತ್ವನ ಹೇಳಿದೆ.
ನೆನ್ನೇ ಸರಗೂರು ತಾಲೂಕಿನ ಕೆ ಬೆಳತೂರು ಗ್ರಾಮದ ರೈತ ವಿಕಲಚೇತನ ಸಿದ್ದನಾಯಕ ರವರ ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ರು.
ಭಾರತ್ ನ್ಯೂಸ್ ಟಿವಿ ವರದಿಗೆ ಸ್ಪಂದಿಸಿದ ಭೂಮಿಪುತ್ರ,ರೈತಮಿತ್ರ ಸಂಸ್ಥೆ
ಸಂಕಷ್ಟದಲ್ಲಿದ್ದ ವಿಶೇಷಚೇತನ ರೈತ ಸಿದ್ದನಾಯಕ ಅವರ ಕುಟುಂಬವನ್ನು ಭೇಟಿ ಮಾಡಿ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯಧನ ಹಾಗೂ 50. ಕೆಜಿ ಅಕ್ಕಿ ಸೇರಿದಂತೆ ಪಡಿತರವನ್ನು ವಿತರಿಸಿ,ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ನೀಡಿದರಲ್ಲದೇ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡಲಿದ್ದೇವೆ
ಭೂಮಿಪುತ್ರ,ರೈತಮಿತ್ರ ಸಂಸ್ಥೆ ಅನ್ನದಾತರ ನೆರವಿಗೆ ಸದಾ ಸಿದ್ದವಿದ್ದು,ಮುಂದಿನ ದಿನಗಳಲ್ಲಿ ರೈತರ ಕಲ್ಯಾಣಕ್ಕೆ ಶ್ರಮಿಸುವುದಾಗಿ ಸಂಸ್ಥಾಪಕ ಚಂದನ್ ಗೌಡ , ಹರೀಶ್. ಮೂರ್ತಿ. ಕಂದಸ್ವಾಮಿ(ಯಡಿಯಾಲ) ಮಣಿ ಭರವಸೆ ನೀಡಿದರು.ಸಹಾಯಕ್ಕೆ ಮುಂದಾದ ಭೂಮಿಪುತ್ರ,ರೈತಮಿತ್ರ ಸಂಸ್ಥೆಗೆ ವಿಕಲಚೇತನ ರೈತ ಕುಟುಂಬ ಧನ್ಯವಾದ ತಿಳಿಸಿದೆ.
ಇದು ಭಾರತ್ ನ್ಯೂಸ್ ಟಿವಿ ವರದಿ ಫಲ ಶೃತಿ ಅಲ್ಲ
ಭಾರತ್ ನ್ಯೂಸ್ ಸಹಾಯ ಹಸ್ತ ಅಭಿಯಾನಕ್ಕೆ ಸಿಕ್ಕ ಸ್ಪಂದನೆ
ಸಂಜಯ್ ಕೆ ಬೆಳತೂರು
ಜೊತೆ ನಂದಿನಿ ಮೈಸೂರು