ವಿಕಲತೆ ಎಂಬುದು ಕಾಯಿಲೆಯಲ್ಲ: ಡಾ. ಕುಮಾರ್

 

ಸರಗೂರು:5 ಜನವರಿ 2022

ಸಂಜಯ್ ಕೆ ಬೆಳತೂರು

ವಿಕಲತೆ ಎಂಬುದು ಕಾಯಿಲೆಯಲ್ಲ ಎಂದು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮಕ್ಕಳ ತಜ್ಞರು ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಮುಖ್ಯಾ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಕುಮಾರ್ ಅವರು ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಛೇರಿಯಲ್ಲಿ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಹದಲ್ಲಿನ ಸಾಮರ್ಥ್ಯ ಕಡಿಮೆಯಾಗುವುದಕ್ಕೆ ವಿಕಲತೆ ಎನ್ನುತ್ತಾರೆ ಹೊರೆತು. ವಿಕಲತೆ ಎಂಬುದು ಕಾಯಿಲೆಯಲ್ಲ ಎಂದು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಹೇಳಿದರು.

ವಂಶಪರಂಪರೆಯಾಗಿ ಬರುವಂತಹ ರೋಗಗಳಿಗೆ ಕಾರಣ ಹಾಗೂ ಪರಿಹಾರ ಕುರಿತು ಸಮುದಾಯದ ಪ್ರಶ್ನೆಗಳಿಗೆ ಉತ್ತರ ನೀಡಿದ ಡಾ.ಕುಮಾರ್ ಅವರು. ಕ್ರೋಮೋಸೋಮ್ ಸಮಸ್ಯೆಗಳಿಂದ ವಂಶಪರಂಪರೆಯ ರೋಗಗಳು ಬರುತ್ತವೆ ಎಂದರು.

ವಿಶೇಷ ಚೇತನರ ಮಕ್ಕಳ ಪೋಷಕರು ತಮ್ಮ ಮಕ್ಕಳ ಮೇಲೆ ಭರವಸೆ ಕಳೆದುಕೊಳ್ಳದೇ. ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಮುಂದಾಗಬೇಕು ಎಂದು ಹೇಳಿದರು.

ಮಾಗುಡಿಲು ಗ್ರಾಮದಿಂದ ನಾಗರಾಜು ಎಂಬುವವರು ಕರೆ ಮಾಡಿ ಔಷಧಿಯ ಅಡ್ಡ ಪರಿಣಾಮದಿಂದ ವಿಕಲತೆ ಬರಬಹುದೆ ಎಂದು ಪ್ರಶ್ನೆ ಕೇಳಿದರು.

ಇದಕ್ಕೆ ಮಕ್ಕಳ ತಜ್ಞರಾದ ಡಾ.ಕುಮಾರ್ ಅವರು ಔಷಧಿಯ ಅಡ್ಡ ಪರಿಣಾಮಗಳಿಂದ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

ಲಂಕೆ ಗ್ರಾಮದಿಂದ ದಯನಂದ ಎಂಬುವವರು ಕರೆ ಮಾಡಿ ಚಿಕ್ಕ ಮಕ್ಕಳಿಗೆ ಲಸಿಕೆ ಪಡೆದಿದ್ದರೂ ಸಹ ವಿಕಲತೆ ಹೊಂದುತ್ತಾರೆ. ಇದರ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದರು.

ಹಾಗೂ ವಿವಿಧ ಗ್ರಾಮಗಳಿಂದ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ವಿಕಲತೆ ಹಾಗೂ ವಿಕಲತೆಯನ್ನು ತಡೆಗಟ್ಟುವ ಬಗ್ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.

ಕಾರ್ಯಕ್ರಮವನ್ನು ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕರಾದ ನಿಂಗರಾಜು ಅವರು ನಡೆಸಿಕೊಟ್ಟರು.
ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಶಿವಲಿಂಗ್, ಸೋಮೇಶ್, ಶ್ರೀಕಾಂತ್, ಸಿದ್ಧಾರ್ಥ, ಸಂಜಯ್ ಇದ್ದರು.

Leave a Reply

Your email address will not be published. Required fields are marked *