ಅಶ್ವತ್ ನಾರಾಯಣ್ ಮೇಲೆ ಡಿ.ಕೆ.ಸುರೇಶ್ ಗಲಾಟೆ ಖಂಡಿಸಿ ಬಿಜೆಪಿ ಯುವ ಘಟಕ ಪ್ರತಿಭಟನೆ

ತಿ.ನರಸೀಪುರ:5 ಜನವರಿ 2022

ವರದಿ: ಶಿವು

ಕಾಂಗ್ರೆಸ್ ಪಕ್ಷವು ಗೂಂಡಾ ಸಂಸ್ಕೃತಿವುಳ್ಳ ಪಕ್ಷವಾಗಿದ್ದು,ಸೋಲಿನ ಹತಾಶೆ ಭಾವದಿಂದ ಕಾಂಗ್ರೆಸ್ ನಾಯಕರು ಸಂಯಮ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಟೀಕಿಸಿದರು.

ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಸಚಿವ ಅಶ್ವತ್ ನಾರಾಯಣ್ ರ ಮೇಲೆ ಕಾಂಗ್ರೆಸ್ ಸಂಸದ ಡಿ. ಕೆ.ಸುರೇಶ ಹಲ್ಲೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ಬಿಜೆಪಿ ಯುವ ಘಟಕವು ಪ್ರತಿಭಟನೆ ನಡೆಸಿತು.ದೇಶದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ,ಕಳೆದ 70 ವರ್ಷಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷ ದೇಶದ ಹಿತ ಕಾಯುವ ಬದಲು ಸ್ವಹಿತಾಸಕ್ತಿ ಕಾಪಾಡಿಕೊಳ್ಳಲು ಕಡೆ ಗಮನ ಕೇಂದ್ರಕರಿಸಿದೆ ಎಂದು ವಿಷಾದಿಸಿದರು.

ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು,ಜನಪರ ಯೋಜನೆಗಳಿಂದ ಬಿಜೆಪಿ ಪಕ್ಷ ಮತದಾರರ ಮನಸೂರೆಗೊಳ್ಳುತ್ತಿದೆ. ಹಾಗಾಗಿ ಬಿಜೆಪಿ ಪಕ್ಷದ ಏಳಿಗೆಯನ್ನು ಸಹಿಸದ ಹಲವು ಕಾಂಗ್ರೆಸ್ ಮುಖಂಡರು ಗೂಂಡಾ ಸಂಸ್ಕೃತಿಯ ಮುಖೇನ ಸರ್ಕಾರದ ಅಭಿವೃದ್ಧಿ ವಿಚಾರವನ್ನು ಮರೆಮಾಚಲು ತವಕಿಸುತ್ತಿದ್ದಾರೆ ಎಂದು ಕಟುಕಿದರು.
ರಾಮನಗರದಲ್ಲಿ ನಡೆದ ಘಟನೆ ಕಾಂಗ್ರೆಸ್ ಕೀಳು ರಾಜಕೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಡಿ. ಕೆ. ಸುರೇಶ ಒಬ್ಬ ರೌಡಿ ಎಂದು ವ್ಯಂಗವಾಡಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಾರೋಹಟ್ಟಿ ಮಹದೇವಯ್ಯ ಮಾತನಾಡಿ, ರಾಮನಗರದಲ್ಲಿ ನಡೆದ ಘಟನೆಯನ್ನು ರಾಜ್ಯ ಬಿಜೆಪಿ ಪಕ್ಷ ಖಂಡಿಸುತ್ತದೆ.ರೌಡಿ ಕೊತ್ವಾಲ್ ರಾಮಚಂದ್ರ ಗರಡಿಯಲ್ಲಿದ್ದ ಡಿ. ಕೆ. ಸಹೋದರರಿಂದ ಸೌಜನ್ಯಯುತ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.ಅಭಿವೃದ್ಹಿಯು ಒಂದು ಪಕ್ಷದ ಕಾರ್ಯಸೂಚಿಯಾಗಬೇಕು.ದುರ್ನಡತೆ ಮತ್ತು ಗುಂಪುಗಾರಿಕೆ ಅಭಿವೃದ್ಧಿಯನ್ನು ಮರೆಮಾಚುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವು ಅಭಿವೃದ್ಧಿಯ ಮುಖೇನ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದೆ ಎಂದರು.

ಬಿಜೆಪಿ ಮುಖಂಡ ಸಾಮ್ರಾಟ್ ಸುಂದರೇಶನ್, ವರುಣಾ ಬಿಜೆಪಿ ಪ್ರಧಾನ ಕಾರ್ಯದರ್ಶಿ,ಎಸ್. ಸಿ ಮೋರ್ಚಾದ ಶಿವಕುಮಾರ್ ಬಡ್ದು,ವರುಣಾ ಪ್ರಧಾನ ಕಾರ್ಯದರ್ಶಿ ರಂಗುನಾಯಕ್, ಯುವ ಘಟಕ ಅಧ್ಯಕ್ಷ ಕುರುಬೂರು ಶಿವು,ವರುಣಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಚೌಹಳ್ಳಿ ಸಿದ್ದರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *