ಸಿಗ್ಮಾ ಆಸ್ಪತ್ರೆಯಲ್ಲಿ ಅಂತರ ರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ

ನಂದಿನಿ ಮೈಸೂರು

ಅಂತರ ರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯ ಅಂಗವಾಗಿ ಸಿಗ್ಮಾ ಆಸ್ಪತ್ರೆಯಲ್ಲಿ ಶುಶ್ರೂಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್. ಜ್ಞಾನಶಂಕರ್ ಮಾತನಾಡಿ ಸಮಾಜದಲ್ಲಿನ ರೋಗಿಗಳು ಆಸ್ಪತ್ರೆಗೆ ಬಂದಾಗ ವೈದ್ಯರ ಮತ್ತು ಶುಶೂಷಕರ ಪಾತ್ರ ಅಮೂಲ್ಯವಾದದ್ದು, ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶಶೂಷಕರಿಲ್ಲದಿದ್ದರೆ ಅದು ಆಸ್ಪತ್ರೆಯೇ ಆಗುವುದಿಲ್ಲ ಅವರ ಪರಸ್ಪರ ಹೊಂದಾಣಿಕೆಗಳು ರೋಗಿಗಳ ಗುಣಮುಖವಾಗುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸುತ್ತಾ ಎಲ್ಲರಿಗೂ ಶುಶೂಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ವಿಶ್ವಶಾಂತಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಹಾಲಿಂಗಯ್ಯನವರು ಮಾತನಾಡಿ ವಿಶ್ವದಲ್ಲಿ ಶಾಂತಿ ಹೇಗೆ ಮುಖ್ಯವೋ ಅದೇ ರೀತಿ ಆಸ್ಪತ್ರೆಯಲ್ಲಿ ಶುಶೂಷಕರ ಪಾತ್ರವೂ ಅಷ್ಟೇ ಮುಖ್ಯ ಎಂದು ತಿಳಿಸಿದರು.

ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್‌ರವರು ಮಾತನಾಡಿ ಈ ಆಸತ್ರೆಯಲ್ಲಿ ಶುಶೂಷಕರ ಸೇವೆಯ ಜೊತೆಗೆ ಅವರ ಪದವಿ ಶಿಕ್ಷಣವನ್ನು ಸಹ ನೀಡುತ್ತಾ ಬಂದಿದ್ದು ಶುಶೂಷಕರ ಸೇವೆ ಮತ್ತು ತರಬೇತಿ ಜೊತೆಜೊತೆಯಲ್ಲೇ ನಡೆಯುತ್ತಿದೆ ಎಂದು ತಿಳಿಸಿದರು.

ಆಸ್ಪತ್ರೆಯ ಶುಶೂಷಕರ ಮೇಲ್ವಿಚಾರಕರಾದ ದಮಯಂತಿ, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ವಿಶ್ವಶಾಂತಿ ಸಂಸ್ಥೆಯ ಕಾರ್ಯದರ್ಶಿಗಳದ ಮಹಾಲಿಂಗಯ್ಯ ಎನ್.ಬಿ. ವ್ಯವಸ್ಥಾಪಕ ನಿರ್ದೇಶಕರಾದ ಎಸ್‌. ಜ್ಞಾನಶಂಕರ್, ನಿರ್ದೇಶಕರಾದ ಡಾ| ಕೆ.ಎಂ. ಮಾದಪ್ಪ, ಡಾ| ರಾಜೇಶ್ವರಿಮಾದಪ್ಪ ಹಾಗೂ ಆಸ್ಪತ್ರೆಯ ಕಿಡ್ನಿ ನಿರ್ವಹಣಾ ವಿಭಾಗದ ವೈದ್ಯರಾದ ಡಾ|| ಅನಿಕೇತ್ ಪ್ರಭಾಕರ್ ಮತ್ತು ಇತರೆ ಶುಶ್ರೂಕರನ್ನು ಕಾಣಬಹುದು.

Leave a Reply

Your email address will not be published. Required fields are marked *