ಎಲ್ಲಾ ಅಂದುಕೊಂಡತ್ತೆ ಆದ್ರೇ ನಟ ವಿಜಯ ಸೇತುಪತಿ ನಟನೆಯಲ್ಲಿ ಸಿದ್ದರಾಮಯ್ಯ ಬಯೋಪಿಕ್ , ಹುಲಿಯಾ ಎಸ್ ಅಂತಾರಾ? ನೋ ಅಂತಾರಾ?

ನಂದಿನಿ ಮೈಸೂರು

ಕೊಪ್ಪಳ :ಎಲ್ಲಾ ಅಂದುಕೊಂಡತ್ತೆ ಆದ್ರೇ ನಟ ವಿಜಯ ಸೇತುಪತಿ ನಟನೆಯಲ್ಲಿ ಸಿದ್ದರಾಮಯ್ಯ ಬಯೋಪಿಕ್ , ಹುಲಿಯಾ ಎಸ್ ಅಂತಾರಾ? ನೋ ಅಂತಾರಾ?

ರಾಜಕಾರಣ ಮತ್ತು ಚಿತ್ರರಂಗ ಒಂದೇ ಮುಖದ ಎರಡು ನಾಣ್ಯ ಇದ್ದಂತೆ.. ರಾಜಕಾರಣಿಗಳು ಅದೇಷ್ಟೋ ಬಯೋಪಿಕ್ ತೆರೆಗೆ ಬಂದಿವೆ. ಇದೀಗ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಜೀವನ ಆಧಾರಿತ ಬಯೋಪಿಕ್ ತೆರೆಗೆ ಬರಲು ಸಿದ್ದತೆ ನೆಡೆದಿದೆ.
ತಮಿಳು ಚಿತ್ರರಂಗದ ಖ್ಯಾತ ನಟರೊಬ್ಬರು ಸಿದ್ದರಾಮಯ್ಯ ಪಾತ್ರದಲ್ಲಿ ನಟಿಸಲ್ಲಿ ದ್ದಾರಂತೆ..ಇಷ್ಟಕ್ಕೂ ಯಾರೂ ಆ ಮಾಜಿ ಮುಖ್ಯಮಂತ್ರಿ..? ಮಾಜಿ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸುತ್ತಿರುವ ಆ ತಮಿಳು ನಟನಾದ್ರೂ ಯಾರು..? ಅಂತಿರಾ ಸಂಪೂರ್ಣ ಮಾಹಿತಿ ಮುಂದಿದೆ ನೋಡಿ.

ತೆಲುಗು ಚಿತ್ರರಂಗದಲ್ಲಿ ರಾಜಕಾರಣಿಗಳ ಬಯೋಪಿಕ್ ಬರೋದು ಕಾಮನ್.. ಆದರೆ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿಯ ಜೀವನ ಆಧಾರಿತ ಚಿತ್ರವೊಂದು ತೆರೆಗೆ ಬರಲು ಸದ್ದಿಲ್ಲದೆ ಸಿದ್ದತೆ ನೆಡಸಿರುವುದು ಇದೀಗ ಬಹಿರಂಗವಾಗಿದೆ.

ಕೊಪ್ಪಳದ ಕನಕಗಿರಿ ಕ್ಷೇತ್ರದ ಯುವ ಸಿದ್ದು ಅಭಿಮಾನಿಗಳು ಇಂತಹ ದೊಂದು ಚಿಂತನೆ ನೆಡಸಿದ್ದಾರೆ. ಇದಕ್ಕೆ ಗಂಗಾವತಿ ತಾಲೂಕಿನ ಕನಕಗಿರಿ ಕ್ಷೇತ್ರದ ಹೆಬ್ಬಾಳ ಗ್ರಾಮದ ಯುವ ನಿರ್ಮಾಪಕ ಹಯಾತ್ ಪೀರ್ ಮತ್ತು ಅಭಿಮಾನಿಗಳು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಮಾಜಿ ಸಚಿವ ಶಿವರಾಜ್ ತಂಗಡಗಿ ಹಾಗೂ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮೊದಲ ಸುತ್ತಿನ ಮಾತುಕತೆ ನೆಡಸಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ರೆ ಅತಿ ಶೀಘ್ರದಲ್ಲಿ ಚಿತ್ರ ಮೂಹರ್ತ ಫೀಕ್ಸ್ ಆಗುತ್ತದೆ. ಕನಕಗಿರಿಯಲ್ಲೇ ಮೂಹರ್ತ ಮಾಡ್ತಿವಿ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ..

-ಶಿವರಾಜ್ ತಂಗಡಗಿ, ಮಾಜಿ ಸಚಿವ

 


ಎಂಎಸ್ ಕ್ರೀಯೆಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಸುಮಾರು 50 ಕೊಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣಕ್ಕೆ ಸಿದ್ದತೆ ನೆಡಸಲಾಗಿದೆಯಂತೆ.ಸಿದ್ದರಾಮಯ್ಯ ಅವರ ಬಯೋಪಿಕ್ ಚಿತ್ರದಲ್ಲಿ ತಮಿಳಿನ ಖ್ಯಾತ ನಾಯಕ ನಟ ವಿಜಯ ಸೇತುಪತಿ ನಟಿಸ ಲ್ಲಿದ್ದಾರೆ ಎನ್ನುವ ಮಾಹಿತಿ ಇದ್ದು, ಇದೊಂದು ಹೈ ಬಜೆಟ್ ಚಿತ್ರವಾಗಲಿದೆಯಂತೆ. ಇನ್ನೂ ಸತ್ಯರತ್ನಂ ಎನ್ನುವ ಯುವ ನಿರ್ದೇಶಕ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, ಯಾವಾಗ ಚಿತ್ರಿಕರಣವಾಗುತ್ತೆ ಎನ್ನುವ ಮಾಹಿತಿ ಸದ್ಯಕ್ಕೆ ಚಿತ್ರತಂಡ ರಹಸ್ಯವಾಗಿರಿಸಿದೆ. ಇನ್ನೂ ಈ ಬಗ್ಗೆ ಖುದ್ದು ಚಿತ್ರದ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ..

-ಹಯಾತ್ ಪೀರ್, ನಿರ್ಮಾಪಕ

ಒಟ್ಟಾರೆ..ಎಲ್ಲಾ ಅಂದುಕೊಂಡತ್ತೆ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ರೆ ಅತಿ ಶೀಘ್ರದಲ್ಲಿ ಸಿದ್ದರಾಮಯ್ಯ ಅವರ ಬಯೋಪಿಕ್ ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಲಿದೆ.

Leave a Reply

Your email address will not be published. Required fields are marked *