8 ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕ ಮಂಜುಕವಿ ನಿದೇರ್ಶನದ ಟೆಂಪರ್ ಚಿತ್ರ ಡಿ.16 ರಂದು ಬೆಳ್ಳಿತೆರೆಗೆ

ನಂದಿನಿ ಮೈಸೂರು

ಕನ್ನಡ ಚಿತ್ರರಂಗದಲ್ಲಿ ಏಳೆಂಟು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕರಾಗಿರುವ ಮಂಜುಕವಿ ಈಗ ನಿರ್ದೇಶಕನಾಗಿ ಭಡ್ತಿ ಪಡೆದಿದ್ದು, ‘ಟೆಂಪರ್’ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ.

ಶ್ರೀ ಬಾಲಾಜಿ ಎಂಟರ್ಪ್ರೈಸ್ ಬ್ಯಾನರ್ ಅಡಿಯಲ್ಲಿ ಮಂಜು ಕವಿ ನಿರ್ದೇಶನದ ಚೊಚ್ಚಲ ಟೆಂಪರ್ ಚಿತ್ರ
ಕನ್ನಡ ಹಾಗೂ ತೆಲುಗು ಸೇರಿದಂತೆ 2 ಭಾಷೆಗಳಲ್ಲಿ ನಿರ್ಮಾಣವಾಗಿ ಡಿ.16 ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟ್ರೇಲರ್ ಅದ್ಬುತವಾಗಿ ಮೂಡಿಬಂದಿದ್ದು ಇತ್ತೀಚೆಗೆ ಅನಾವರಣಗೊಂಡು ಪ್ರೇಕ್ಷಕರ ಮನಗೆದ್ದಿದೆ.

ನಿರ್ದೇಶಕ ಮಂಜುಕವಿ ಮಾತನಾಡಿ, ಕುಟುಂಬ ಸಮೇತ ನೋಡಬಹುದಾದ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಇದಾಗಿದ್ದು, ಮಾಸ್ ಸ್ಟೋರಿ ಜೊತೆಗೊಂದು ಪ್ರೇಮಕಥೆಯೂ ಇದೆ.ಕೋವಿಡ್ ಮಹಾಮಾರಿಯಿಂದ ಸಂಕಷ್ಟ ಎದುರಾಗಿ ಚಿತ್ರ ಬಿಡುಗಡೆಯಾಗಿರಲಿಲ್ಲ ಇದೀಗ ಟೆಂಪರ್ ಚಿತ್ರ ಡಿ.16 ರಂದು ರಾಜ್ಯದಾದ್ಯಂತ 65 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಲ್ಲರೂ ಚಿತ್ರವನ್ನ ಚಿತ್ರಮಂದಿರಕ್ಕೆ ಬಂದು ನೋಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದರು.

ಟೆಂಪರ್ ಚಿತ್ರದ ನಾಯಕ ಆರ್ಯನ್ ಸೂರ್ಯ,ನಾಯಕನ ಬಾಲನಟನಾಗಿ ಪವನ್ ಮೋರೆ ಅಭಿಯಿಸಿದ್ದಾರೆ. ನಾಯಕಿಯಾಗಿ ಕಾಶಿಮಾ ನಟಿಸಿದ್ದಾರೆ .ವಿನೋದ್ ಕುಮಾರ್ ಹಾಗೂ ಮೋಹನ್ ಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟೆಂಪರ್ ಚಿತ್ರದಲ್ಲಿ ಹಿರಿಯ ಕಲಾವಿದರಾದ ಟೆನಿಸ್ ಕೃಷ್ಣ ತಬಲನಾಣಿ, ಮಿತ್ರ ಮಜಾ ಟಾಕೀಸ್ ಪವನ್,  ಸುಧಾ ಬೆಳವಾಡಿ ,ಪ್ರಿಯಾ ತರುಣ್, ರಾಜ್ ಬಲ್ಲ ರಾಜವಾಡಿ, ಸನತ್ ವಿನೋದ್ ಮಿಥಾಲಿ ಶಶಿ ಅನೇಕ ತಾರಾ ಬಳಗವೇ ಚಿತ್ರದಲ್ಲಿದೆ.   ಅನುರಾಧ ಭಟ್ ,ಆಂಟೊನಿ ದಾಸ್,ಮಹೇಂದರ್,ಸಂತೋಷ್ ವೆಂಕಿ,ಮಂಜು ಕವಿ,ಶರಣ್,ಸುಪ್ರೀಯಾ ರಾಮ್ ,ಶ್ವೇತಾ ಪ್ರಭು ರವರ ಸುಮಧುರ ಕಂಠದಲ್ಲಿ ನಾಲ್ಕು ಹಾಡುಗಳನ್ನ ಕೇಳಬಹುದಾಗಿದೆ.

Leave a Reply

Your email address will not be published. Required fields are marked *