ಚಂದನವನದಲ್ಲೀಗ ಮತ್ತೆ “ಶುಭ ಮಂಗಳ” ಹೊಸ “ಶುಭ ಮಂಗಳ’ ಸಿನಿಮಾಕ್ಕೂ ಪುಟ್ಟಣ್ಣ ಕಣಗಾಲರ “ಶುಭ ಮಂಗಳ’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ

ನಂದಿನಿ ಮೈಸೂರು

“ಶುಭ ಮಂಗಳ’ ಎಂಬ ಹೆಸರು ಕೆರಳಿದ ಕೂಡಲೇ ನೆನಪಾಗೋದು ಪುಟ್ಟಣ್ಣ ಕಣಗಾಲ್‌ ನಿರ್ದೇಶನದಲ್ಲಿ ಮೂಡಿಬಂದ “ಶುಭಮಂಗಳ’ ಸಿನಿಮಾ. ಕಥೆ ಮತ್ತು ಹಾಡುಗಳ ಬಗ್ಗೆ ಇಂದಿಗೂ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ “ಶುಭ ಮಂಗಳ’ ಹೆಸರಿನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ.

ಈ ಹಿಂದೆ “ಸಿಲ್ಕ್ ಬೋರ್ಡ್‌’, “ಮಹಾ ಸಂಪರ್ಕ’ ಸೇರಿದಂತೆ 20ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್‌ಗೋಪಾಲ್‌ ನಿರ್ದೇಶನದಲ್ಲಿ “ಶುಭ ಮಂಗಳ’ ತಯಾರಾಗಿದೆ.

ಸಿನಿಮಾ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿದ ಚಿತ್ರದ  ನಿರ್ದೇಶಕ ಸಂತೋಷ್ ಗೋಪಾಲ್ ,
ಸಿದ್ದಾರ್ಥ್ ಮಾಧ್ಯಮಿಕಾ ,ಹಿತಾ ಚಂದ್ರಶೇಖರ್ ,ದೀಪ್ತಿ ನಾಗೇಂದ್ರ ಸುದ್ದಿಗೋಷ್ಠಿ ನಡೆಸಿದರು.

ಅಂದಹಾಗೆ, ಈಗ ಬರುತ್ತಿರುವ ಹೊಸ “ಶುಭ ಮಂಗಳ’ ಸಿನಿಮಾಕ್ಕೂ ಪುಟ್ಟಣ್ಣ ಕಣಗಾಲರ “ಶುಭ ಮಂಗಳ’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಹೊಸ ಸಿನಿಮಾಕ್ಕೆ “ಶುಭ ಮಂಗಳ’ ಅಂಥ ಟೈಟಲ್‌ ಇಟ್ಟುಕೊಂಡಿದೆ.ಇದೇ ಅ. 14 ರಂದು ಶುಭ ಮಂಗಳ ಬಿಡುಗಡೆಯಾಗಲಿದೆ.ಮದುವೆ ಮನೆಯಲ್ಲಿ ನಡೆಯುವ ಕಥೆ ಇದಾಗಿದೆ.ಮದುವೆಯ ಕೊನೆ ಕ್ಷಣದಲ್ಲಿ ಮತ್ತೊಂದು ಹುಡುಗಿ ನನ್ನ ಮದುವೆ ಆಗುತ್ತಿಯಾ ಎಂದು ಕೇಳಿದಾಗ ಆ ಕ್ಷಣ ಏನಾಗುತ್ತದೆ ವರ‌ ಅವಳ ಬೇಡಿಕೆ ಈಡೇರಿಸುತ್ತಾನಾ ? ಇಲ್ಲವಾ ? ಎಂಬ ಕುತೂಹಲ ಶುಭ ಮಂಗಳ ಚಿತ್ರದಲ್ಲಿದೆ
ಎನ್ನುತ್ತಾರೆ ನಟಿ ಮೇಘನಾ ಗಾಂವ್ಕರ್ .

 

ಸಿನಿಮಾ ಒಂದು ಮದುವೆ ಮನೆಯಲ್ಲಿ ನಡೆಯುವ ಚಿತ್ರವಾಗಿದೆ.ವಧು ವರರ ಮುಖ್ಯ ಕಥೆಯ ಜೊತೆ ಬೇರೆ ಕಥೆಗಳನ್ನೂ ಹೇಳುತ್ತದೆ.ನಗುವಿನ ರಸದೌತಣ ನೀಡಲು
ಕಾಮಿಡಿ, ಪ್ರೀತಿಯ ಮಹತ್ವ ,ಕುಂಟುಬ ಸಂಭಂಧಿಕರ ನಡುವಿನ ಸೆಂಟಿಮೆಂಟ್‌ ಇಟ್ಟುಕೊಂಡು ತೆರೆಮೇಲೆ ತರಲಾಗಿದೆ.ಇತ್ತೀಚೆಗಷ್ಟೇ “ಶುಭ ಮಂಗಳ’ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಗೋಪಾಲ್ ತಿಳಿಸಿದರು.

Leave a Reply

Your email address will not be published. Required fields are marked *