ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆ ವತಿಯಿಂದ ಶ್ರಮದಾನ

ಸರಗೂರು:5 ಮಾರ್ಚ್ 2022

ಇಂದು ಹೆಚ್.ಡಿ. ಕೋಟೆ ತಾಲ್ಲೂಕಿನ ಪ್ರಭಾನಗರ ಹಾಡಿಯಲ್ಲಿ ಶ್ರಮದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆ ವತಿಯಿಂದ ಶ್ರಮದಾನ ಹಮ್ಮಿಕೊಳ್ಳಲಾಯಿತು.

ಸಾದಾ ಒಂದಿಲ್ಲದ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲ್ಗೋಳ್ಳುವ ಸಂಸ್ಥೆ, ಇಂದು ಪ್ರಭಾನಗರ ಹಾಡಿಯಲ್ಲಿ ಶ್ರಮದಾನ ನಡೆಸಿ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ.

ಪ್ರಭಾನಗರ ಹಾಡಿಯ ಮನೆ ಹಾಗೂ ಶಾಲೆಯ ಮುಂಭಾಗ ಬೆಳೆದಿರುವಂತಹ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ. ಗಿಡಗಂಟಿಗಳಿಂದ ಆಗುವಂತಹ ತೊಂದರೆಗಳ ಬಗ್ಗೆ ಹಾಡಿ ಜನರಿಗೆ ಮನವರಿಕೆ ಮಾಡಿದರು.

ಶ್ರಮದಾನ ಮಾಡುವುದರ ಜೊತೆಗೆ ಹಾಡಿ ಜನರ ಯೋಗಕ್ಷೇಮವನ್ನು ವಿಚಾರಿಸಿ, ಆರೋಗ್ಯ ಕಾಪಾಡಿಕೊಳ್ಳುವದರ ಬಗ್ಗೆ ಮಾಹಿತಿ ನೀಡಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಸುಮಾರು ೨೫ ಕ್ಕಿಂತಲೂ ಹೆಚ್ಚು ಸಿಬ್ಬಂದಗಳು ಸೇರಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಪ್ರಭಾ ನಗರ ಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವರಾಂ ಅವರು ಮಾತನಾಡಿದರು.

ನಮ್ಮ ಶಾಲೆಯಲ್ಲಿ ಒಟ್ಟು ೫೮ ಗಿರಿಜನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಹಲವು ತಿಂಗಳುಗಳು ತುಂಬಾ ತೊಂದರೆಪಟ್ಟರು. ಬಳಿಕ ಸಮಸ್ಯೆ ತಿಳಿದು ವಿವೇಕಾನಂದ ಸಂಸ್ಥೆಯು ಶಾಲೆಗೆ ಶೌಚಾಲಯ ನಿರ್ಮಾಣ ಮಾಡಿ. ಇಂದು ಗಿರಿಜನ ಮಕ್ಕಳಿಗೆ ಪ್ರೀತಿ ಪಾತ್ರವಾಗಿದ್ದಾರೆ.

ಶೌಚಾಲಯ ನಿರ್ಮಿಸುವುದರ ಜೊತೆಗೆ, ಶೌಚಾಲಯದ ನಿರ್ವಹಣೆಗೊ ಸಹ. ಪ್ರತಿ ವರ್ಷ ಹಣ ನೀಡುತ್ತಿರುವುದು ಬಹಳ ಸಂತಸತಂದಿದೆ.

ಸಂಸ್ಥೆಯ ಇಂತಹ ಗಣನೀಯ ಸೇವೆಗೆ ಹಾಡಿ ಜನತೆ ಹಾಗೂ ಶಾಲೆಯ ಪ್ರಯುಕ್ತ ಧನ್ಯವಾದ ಕೋರಿ. ವಿವೇಕನಂದ ಸಂಸ್ಥೆಯು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ಸು ಕಾಣಲಿ ಎಂದು ಆಶಿಸಿದರು.

ವರದಿ ಸಂಜಯ್ ಕೆ.ಬೆಳತೂರು.
ಸರಗೂರು ವರದಿಗಾರರು

Leave a Reply

Your email address will not be published. Required fields are marked *