ಮೈಸೂರು:5 ಮಾರ್ಚ್ 2022
ನಂದಿನಿ ಮೈಸೂರು
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 1998ರ ಬ್ಯಾಚ್ ನ ಅಧಿಕಾರಿಗಳನ್ನು ಐಎಎಸ್ ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು 1998,1999,2004 ನೇ ಸಾಲಿನ ನೇಮಕಾತಿಯಲ್ಲಿ ಅಕ್ರಮ ಕಂಡುಬಂದಿದೆ.ಅಕ್ರಮ ಅಭ್ಯರ್ಥಿಗಳಿಗೆ ಕೆ ಎ ಎಸ್ ಹುದ್ದೆಯಿಂದ ಐಎಎಸ್ ಹುದ್ದೆಗೆ ಪದೋನ್ನತಿ ನೀಡಲು ಕೇಂದ್ರ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮವಹಿಸಬೇಕು.ಅರ್ಹ ಅಭ್ಯರ್ಥಿಗಳಿಗೆ ಸುಮಾರು 15 ವರ್ಷಗಳಿಂದ ಆಗಿರುವ ಅನ್ಯಾಯ ಸರಿಪಡಿಸಿ ನ್ಯಾಯಾಲಯದ ತೀರ್ಪಿನಂತೆ ನ್ಯಾಯ ಒದಗಿಸಿಕೊಡಲು ಆಗ್ರಹಿಸಿ ಮಾರ್ಚ್ 7ರಂದು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಅಂಚೆಪೆಟ್ಟಿಗೆಯ ಹತ್ತಿರ ಮುಖ್ಯಮಂತ್ರಿಗಳಿ
ಪತ್ರ ಚಳುವಳಿ ನಡೆಸಲಿದ್ದೇವೆ.ನ್ಯಾಯ ಸಿಗದಿದ್ದಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾಗೇಶ್,ಯೋಗೀಶ್ ಉಪ್ಪಾರ್,ಲೋಕೇಶ್ ಕುಮಾರ್,ಪ್ರಕಾಶ್,ಆರ್.ಕೆ.ರವಿ ,ಬಸವಣ್ಣ ಹಾಜರಿದ್ದರು.