ಕೂಡನಹಳ್ಳಿ ಗ್ರಾಮದಲ್ಲಿ ಶ್ರೀ ಶಿವ ಜ್ಯೋತಿ ಪಣ ಗಾಣಿಗ ಸಂಘ ಉದ್ಘಾಟಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ಬಸವರಾಜು | ನಂದಿನಿ ಮೈಸೂರು

 

ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೂಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ಶ್ರೀ ಶಿವಜ್ಯೋತಿ ಪಣ ಗಾಣಿಗ ಸಂಘದ ನಾಮಫಲಕವನ್ನು ಅನಾವರಣ ಗೊಳಿಸುವ ಮೂಲಕ ಸಂಘವನ್ನು ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು ಯಾವುದೇ ಸಮಾಜದವರು ಸಂಘಟನೆ ಮಾಡಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಆಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದು ತಿಳಿಸಿದ ಅವರು ಕ್ಷೇತ್ರದಲ್ಲಿ ಯಾವುದೇ ಸಮಾಜದ ಬಡವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿಕೊಂಡು ಬಂದಿದ್ದೇನೆ ಅದೇ ರೀತಿ ನಿಮ್ಮ ಸಮಾಜದ ಜೊತೆಗೂ ಹಾಗೂ ಹಿಂದುಳಿದ ವರ್ಗದ ಎಲ್ಲ ಸಮಾಜದವರ ಒಳಿತಿಗೆ ನಾನು ಸದಾ ಸಿದ್ದರಿದ್ದೇನೆ ಎಂದು ತಿಳಿಸಿದರು ಇದೇ ವೇಳೆ ರಾಜ್ಯ ಗಾಣಿಗ ಸಮಾಜದ ಸಂಘದ ಉಪಾಧ್ಯಕ್ಷರಾದ ಉಮೇಶ್ ರವರು ಮಾತನಾಡಿ ನಮ್ಮ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿ ಕೊಡಲು ಎಲ್ಲಿಯಾದರೂ ಒಂದು ನಿವೇಶನವನ್ನು ದೊರಕಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೀರಶೈವ ಮುಖಂಡ ವರುಣ ಮಹೇಶ್ ಮಾಜಿ ಮೇಯರ್ ಅನಂತು ರೈಲ್ವೆ ಅಧ್ಯಕ್ಷರು ಗಾಣಿಗರ ಮಹಾಸಭಾ ಡಾ ಕೆ ವಿಜಯ್ ಕುಮಾರ್ ಮಾಜಿನಗರ ಪಾಲಿಕೆ ಸದಸ್ಯರು ನಂದಕುಮಾರ್ ಉಮೇಶ್ ನಂದೀಶ ವೆಂಕಟೇಶ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳ ಮಂಜುನಾಥ್ ಲಲಿತಾದ್ರಿಪುರ ಬಸವರಾಜು ಮಂಡಕಳ್ಳಿ ಸೋಮಶೇಖರ್ ರಾಯಣ್ಣ ಹುಂಡಿ ಪಾಪಣ್ಣ ಮಹಾದೇವ ಗಾಣಿಗ ಗೌರವಾಧ್ಯಕ್ಷರಾದ ಮುದ್ದರಾಮಯ್ಯ ಅಧ್ಯಕ್ಷರಾದ ವೆಂಕಟ ಲಕ್ಷ್ಮಯ್ಯ ಕಾರ್ಯದರ್ಶಿ ರವಿ ಸಹ ಕಾರ್ಯದರ್ಶಿ ಲಕ್ಷ್ಮಣ ಖಜಾಂಚಿ ಪುನೀತ ಹಾಗೂ ಸಂಘದ ಸದಸ್ಯರುಗಳು ಗ್ರಾಮದ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *