ಜಿಮ್‌ನಲ್ಲಿ ರಕ್ತದಾನ ಮಾಡಿ ರಕ್ತದಾನದ ಮಹತ್ವ ಸಾರಿದ ತರಬೇತುದಾರರು

ನಂದಿನಿ ಮೈಸೂರು

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಜೀಮ್ ಗಳಿಗೆ ಬರುವ ಯುವ ಸಮೂಹಕ್ಕೆ ತರಬೇತುದಾರರು ತರಬೇತಿ ನೀಡುವುದರ ಜೊತೆಗೆ ನಾಲ್ಕಾರೂ ಜೀವಗಳನ್ನು ಉಳಿಸುವ ಉದ್ದೇಶದಿಂದ ಸ್ವತಃ ತರಬೇತುದಾರರು
ಜಿಮ್‌ನಲ್ಲಿ ರಕ್ತದಾನ ಮಾಡಿ ರಕ್ತದಾನದ ಮಹತ್ವ ಸಾರಿದರು.

ವಿಜಯನಗರದಲ್ಲಿರುವ ಅರ್ನಾಲ್ಡ್‌ ಫಿಟ್‌ನೆಸ್‌ ಜಿಮ್‌ನಲ್ಲಿ ಯೂತ್‌ ಫಾರ್‌ ಸೇವಾ ಹಾಗೂ ದಿ ಬೆಟರ್‌ ಹ್ಯಾಂಡ್ಸ್‌ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಎಂದು ಜಿಮ್‌ ಹಾಗೂ ಫಿಟ್‌ನೆಸ್‌ ಮಾಲೀಕರ ಸಂಘದ ಅಧ್ಯಕ್ಷ ಹರ್ಷ ಎಂ.ಎಸ್. ಚಾಲನೆ ನೀಡಿದರು.

ಜಿಮ್‌ಗಳಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳುವ ಚಟುವಟಿಕೆಗಳು ಮಾತ್ರವಲ್ಲದೆ ಇತರ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುವ ನಿಟ್ಟಿನಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಕ್ತದಾನ ಶಿಬಿರ ನಡೆಸಿದ್ದೇವೆ
ರಕ್ತದಾನ ಮಹಾದಾನ. ನಮಗೆ ತಿಳಿದಿರುವಂತೆ ನಮ್ಮ ನಡುವೆ ಸಾಕಷ್ಟು ಮಂದಿ ರಕ್ತ ಸಿಗದೆ ಕಷ್ಟಪಡುತ್ತಿರುತ್ತಾರೆ. ಅಂತಹವರಿಗೆ ರಕ್ತ ಒದಗಿಸುವುದು ಸಾರ್ಥಕ ಕೆಲಸ. ಆದ್ದರಿಂದ ನಮ್ಮ ಜಿಮ್‌ನ ಸಿಬ್ಬಂದಿ ಎಲ್ಲರೂ ಸೇರಿ ಒಟ್ಟು 70 ಮಂದಿ ರಕ್ತದಾನ ಮಾಡಿದ್ದೇವೆ. ಜೊತೆಗೆ ಯಾವಾಗ ರಕ್ತದಾನ ಮಾಡಬೇಕು, ಯಾವಾಗ ರಕ್ತದಾನ ಮಾಡಬಾರದು ಎಂಬಿತ್ಯಾದಿ ಅತ್ಯಗತ್ಯ ವಿಷಯಗಳ ಬಗ್ಗೆ ವೈದ್ಯರು ನಮ್ಮ ಸಿಬ್ಬಂದಿಗೆ ಅರಿವು ಮೂಡಿಸಿದ್ದಾರೆ ಎಂದು ತಿಳಿಸಿದರು.

ಹುಟ್ಟುಹಬ್ಬವನ್ನು ಉಪಯುಕ್ತ ರೀತಿಯಲ್ಲಿ ಆಚರಿಸಿಕೊಳ್ಳಬೇಕು. ಆದ್ದರಿಂದ ಅದ್ಧೂರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ರಕ್ತದಾನ ಮಾಡುವ ಮೂಲಕ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ನಮ್ಮ ಸಿಬ್ಬಂದಿ ಮಾತ್ರವಲ್ಲದೆ ಹಲವು ಸಾರ್ವಜನಿಕರು ಸಹ ಆಗಮಿಸಿ ರಕ್ತದಾನ ಮಾಡಿದ್ದಾರೆ. ಎಲ್ಲರಿಗೂ ಸ್ಥಳದಲ್ಲೇ ಪ್ರಮಾಣಪತ್ರ ನೀಡಲಾಯಿತು
ಎಂದರು.

ಸಂಗ್ರಹ ಮಾಡಿದ ರಕ್ತದ ಬಾಟಲ್‌ಗಳನ್ನು ಜೀವಧಾರ ರಕ್ತನಿಧಿ ಕೇಂದ್ರಕ್ಕೆ ಕಳುಹಿಸಲಾಯಿತು. ಅರ್ನಾಲ್ಡ್‌ ಫಿಟ್‌ನೆಸ್‌ನ ವಿಜಯನಗರ ಹಾಗೂ ಸಿದ್ಧಾರ್ಥ ನಗರದ ಎರಡೂ ಶಾಖೆಗಳಲ್ಲಿ ರಕ್ತದಾನ ಶಿಬಿರ ನಡೆಯಿತು. ಜಿಮ್‌ನ ಸಿಬ್ಬಂದಿ ಹಾಗೂ ಹಲವು ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *