“ಶಾಂತಲಾ ಸೇವಾರತ್ನ ಪ್ರಶಸ್ತಿ” ಮುಡಿಗೇರಿಸಿಕೊಂಡ ವರದಿಗಾರ ಲೋಹಿತ್ ಹನುಮಂತಪ್ಪ

ನಂದಿನಿ ಮೈಸೂರು

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಶಾಂತಲ ವಿದ್ಯಾ ಪೀಠದಲ್ಲಿ ೬೭ ನೇ ಕನ್ನಡ ರಾಜ್ಯೋತ್ಸವ ಹಾಗೂ ಶಾಂತಲಾ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.

ಶಾಂತಲ ಶಾಲೆಯ ವಿಧ್ಯಾರ್ಥಿಗಳು
ಸಿದ್ಧಾರ್ಥನಗರದ ಗಣೇಶ ದೇವಸ್ಥಾನದ ಮುಂಭಾಗದಿಂದ ಶಾಲೆಯವರೆಗೆ ಜಾಥಾ ನಡೆಸಿ ಸಂಭ್ರಮದಿಂದ
ಕನ್ನಡ ರಾಜ್ಯೋತ್ಸವ ಆಚರಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ತಾಲೂಕು ತಹಸೀಲ್ದಾರ್ ರಾದ ಗಿರೀಶ್ ಹಾಗೂ ಅಮೋಘ ಮೈಸೂರು ವಾಹಿನಿಯ ಜಿಲ್ಲಾ ವರದಿಗಾರಾದ ಲೋಹಿತ್ ಹನುಮಂತಪ್ಪ ಅವರಿಗೆ
ಶಾಂತಲಾ ವಿದ್ಯಾಪೀಠದ , ಶಾಂತಾ ಶ್ರೀಕಾಂತ್, ಸಂತೋಷ್ , ಮಹದೇವಮ್ಮ , ಪ್ರಗತಿಶಾಲೆಯ ವೆಂಕಟೇಶ್ , ರವರು “ಶಾಂತಲಾ ಸೇವಾರತ್ನ ಪ್ರಶಸ್ತಿ” ಪ್ರದಾನ ಮಾಡಿದರು.
ತದನಂತರ ಶಾಲೆಯ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದ್ದು ಮಕ್ಕಳು ನೃತ್ಯ ಪ್ರದರ್ಶಿಸಿ ನೆರದಿದ್ದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

Leave a Reply

Your email address will not be published. Required fields are marked *