ಫ್ರೆಂಡ್ಸ್ ಮೆಲೋಡಿಸ್ ಆರ್ಕೆಸ್ಟ್ರಾ ತಂಡದ ವತಿಯಿಂದ ಅಗಲಿದ ಗಣ್ಯರ ಪುಣ್ಯ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎದೆ ತುಂಬಿ ಹಾಡುವೆನು ಸಾಂಸ್ಕೃತಿಕ ಕಾರ್ಯಕ್ರಮ

ನಂದಿನಿ ಮೈಸೂರು

ಎಚ್ ಡಿ ಕೋಟೆ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್ ಮೆಲೋಡಿಸ್ ಆರ್ಕೆಸ್ಟ್ರಾ ತಂಡದ ವತಿಯಿಂದ ಅಗಲಿದ ಗಣ್ಯರ ಪುಣ್ಯ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎದೆ ತುಂಬಿ ಹಾಡುವೆನು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸೌಮ್ಯ ಅನಿಲ್ , ಚಿಕ್ಕಮಾದು ರವರು ಶಾಸಕರಾಗಿದ್ದ ವೇಳೆ ಎಲ್ಲಾ ಧರ್ಮದ ಎಲ್ಲಾ ಜಾತಿಯ ಎಲ್ಲಾ ಪಕ್ಷದ ಮುಖಂಡರೊಂದಿಗೂ ಕೂಡ ಉತ್ತಮ ಬಾಂಧವ್ಯ ಹೊಂದಿದ್ದು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಇದೀಗ ಅವರ ಆಶೀರ್ವಾದದಿಂದ ಅನಿಲ್ ಚಿಕ್ಕಮಾದು ಅವರು ಶಾಸಕರಾಗಿ ಅವರ ದಾರಿಯಲ್ಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮುಂದೆ ಕೂಡ ಮತ್ತಷ್ಟು ಕೆಲಸಗಳನ್ನು ಮಾಡಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು. ನಾನು ಭೇಟಿ ಮಾಡಿದ ಕೆಲವು ಅಭಿಮಾನಿಗಳ ದೇವರ ಮನೆಯಲ್ಲಿ ದೇವರಫೋಟೋಗಳೊಂದಿಗೆ ನಮ್ಮ ಮಾವ ಚಿಕ್ಕಮಾದು ರವರ ಫೋಟೋ ಇಟ್ಟಿರೋದನ್ನ ನೋಡಿ ಖುಷಿಯೂ ಆಗುತ್ತದೆ, ಅವರು ನಮ್ಮೊಟ್ಟಿಗಿಲ್ಲವಲ್ಲ ಎನ್ನುವ ನೋವೂ ಕೂಡಾ ಕಾಡುತ್ತದೆ ಎಂದರು.

ಇನ್ನು , ನಟ ದಿವಂಗತ ರಾಜ್ ಕುಮಾರ್ , ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ ಅನೇಕ ಗಣ್ಯರು ನಾಡುನುಡಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಅವರೆಲ್ಲರ ಜೀವನವೇ ನಮಗೆ ಆದರ್ಶ ಎಂದು ತಿಳಿಸಿದರು.

ಈ ವೇಳೆ ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯ ಅನಿಲ್ ಮತ್ತು ತಾಯಿ ನಾಗಮ್ಮ ಚಿಕ್ಕಮಾದು ಅವರಿಗೆ ಗ್ರಾಮಸ್ಥರು ಹಾರ ಶಾಲು ಹಾಕಿ ಸನ್ಮಾಸಿದರು.

ಕಾರ್ಯಕ್ರಮದಲ್ಲಿ ನಾಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು, ಚರ್ಚ್ ಫಾದರ್ ಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *