ನಂದಿನಿ ಮೈಸೂರು
ಹೆಚ್ ಡಿ ಕೋಟೆಯ ಜೆ ಡಿ ಎಸ್ ನಾಯಕ ಜಯಪ್ರಕಾಶ್ ಚಿಕ್ಕಣ್ಣ ರವರು
ಆಯತಪ್ಪಿ ಬೈಕ್ ನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿ ಮಾನವೀಯತೆ ಮೆರೆದಿದ್ದಾರೆ.
ಹಲಸೂರು ಗ್ರಾಮದ ನಿವಾಸಿಗಳು ಬೈಕ್ ಸವಾರಿ ವೇಳೆ ಅಪಘಾತವಾಗಿತ್ತು. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಜಯಪ್ರಕಾಶ್ ರವ ರು ಸಂಕಷ್ಟ ದಲ್ಲಿರುವ ಗಾಯಳುಗಳಿಗೆ ಆರ್ಥಿಕ ನೆರವು ನೀಡಿದರು.ಅದಲ್ಲದೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಜಯಪ್ರಕಾಶ್ ಚಿಕ್ಕಣ್ಣರವರ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.