ತೊಳಸಿ ಜ್ಯುವೆಲ್ಸ್ ಅದೃಷ್ಠಶಾಲಿ ಗ್ರಾಹಕರನ್ನ ಆಯ್ಕೆ ಮಾಡಿದ ನಟ ಡಾಲಿ ಧನಂಜಯ್

ನಂದಿನಿ ಮೈಸೂರು

ಲಕ್ಷಾಂತರ ಗ್ರಾಹಕರ ಮನಗೆದ್ದಿರುವ ತೊಳಸಿ ಜ್ಯುವೆಲರ್ಸ್ ಇದೀಗ ಗ್ರಾಹಕರಿಗೆ ಬಂಪರ್ ಡ್ರಾ ಎಂಬ ಹೊಸ ಉಡುಗೊರೆ ನೀಡಲು‌ ಬಯಸಿದೆ.

ಮೈಸೂರಿನ ಅತ್ಯಂತ ವಿಶ್ವಾಸಾರ್ಹ “ತೊಳಸಿ ಜ್ಯುವೆಲ್ಸ್” ತಾಲೂಕುಗಳಿಗೂ ಹೆಜ್ಜೆ ಹಾಕಿದ್ದು ದಕ್ಷಿಣ ಕಾಶಿ” ನಂಜನಗೂಡಿನಲ್ಲಿ ಜುಲೈ 2022 ರಲ್ಲಿ ತನ್ನ ನೂತನ ಶಾಖೆ ಪ್ರಾರಂಭಿಸಿತ್ತು.
50000 ಕ್ಕೂ ಹೆಚ್ಚು ವಿಶಿಷ್ಟ ವಿನ್ಯಾಸದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಹೊಂದಿದೆ.

 

ನೂತನ ಶಾಖೆ ಆರಂಭದ ನೆನಪಿಗಾಗಿ ಗ್ರಾಹಕರಿಗೆ ಕೊಡುಗೆ ನೀಡಿತು.
ಉದ್ಘಾಟನೆಗೊಂಡ ದಿನದಿಂದ ಅಕ್ಟೋಬರ್ ಅಂತ್ಯದವರೆಗೂ ಚಿನ್ನ,ಬೆಳ್ಳಿ ಖರೀದಿಸಿದ ಪ್ರತಿಯೊಬ್ಬ ಗ್ರಾಹಕರಿಗೂ ಕೂಪನ್ ನೀಡಲಾಗಿತ್ತು.
ಇಂದು ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಬಂಪರ್ ಡ್ರಾ ಅದೃಷ್ಟ ವಿಜೇತರನ್ನು ಆಯ್ಕೆ ಮಾಡಿದರು.

ಚಾಮರಾಜ ನಗರದ ಅದೃಷ್ಟಶಾಲಿ ಗ್ರಾಹಕರಾದ ಸಘೀರ್ ಅಹಮದ್ ರವರಿಗೆ ಹೊಚ್ಚ ಹೊಸ “ಮಾರುತಿ ಸೆಲೆರಿಯೊ” ಸಿಕ್ಕಿದೆ.ಇದಲ್ಲದೇ
10 ಅದೃಷ್ಟಶಾಲಿ ಗ್ರಾಹಕರಿಗೆ ಬಂಗಾರಲಕ್ಷ್ಮಿ ಚಿನ್ನದ ಉಳಿತಾಯ ಯೋಜನೆಯ ಕಂತುಗಳಿಗೆ 5 ತಿಂಗಳ ಮನ್ನಾ ಮಾಡಿದ್ದಾರೆ.ಉಳಿತ ತಿಂಗಳ ಕಂತನ್ನು ವಿಜೇತರೇ ಕಟ್ಟಬೇಕಾಗುತ್ತದೆ.
10 ವಿಜೇತ ಗ್ರಾಹಕರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮನೋಹರ್ ಬಾಬು, ಅಶೋಕ್ ಕುಮಾರ್, ಶಾಂತಿ ಕಿರಣ್, ಹರ್ಷನಂದನ, ತಿಲಕ್ ಸೇರಿದಂತೆ ನೂರಾರು ಗ್ರಾಹಕರು ಭಾಗಿಯಾಗಿದ್ದರು.

ನೆಚ್ಚಿನ ನಟ ಡಾಲಿ ಧನಂಜಯ ನೋಡಲು ಗ್ರಾಹಕರಲ್ಲದೇ ನಂಜನಗೂಡಿನ ಅಭಿಮಾನಿಗಳು ಕಾದುಕುಳಿತಿದ್ದರು.ಸಾವಿರಾರೂ ಅಭಿಮಾನಿಗಳನ್ನು ಕಂಡ ಡಾಲಿ ಧನಂಜಯ್ ತಮ್ಮ ಕಾರಿನ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಹೊರಟರು.

Leave a Reply

Your email address will not be published. Required fields are marked *