ಪಾಠದ ಜೊತೆ ನವರಾತ್ರಿ ಬೊಂಬೆ ಕಥೆ ಹೇಳಲು ಹೊರಟ ಶಾಲೆ ಬೊಂಬೆ ಲೋಕಕ್ಕೆ ಮನಸೋತ ಚಿಣ್ಣರು

 

ಸ್ಪೇಷಲ್ ಸ್ಟೋರಿ: ನಂದಿನಿ ಮೈಸೂರು

                ಆ ಟದೊಂದಿಗೆ ಪಾಠದ ಪ್ರಪ್ರಥಮ ರೂಪ ಬೊಂಬೆ. ಮಾನವಕುಲದ ಹಾದಿಯಿಂದಲೂ ಬೊಂಬೆಗಳಿಗೂ ಮನುಷ್ಯನಿಗೂ ಅಪಾರ ಸಂಬಂಧವಿದೆ. ಚೊಚ್ಚಲ ನಾಗರೀಕತೆಗಳ ಪಳೆಯುಳಿಕೆಯಿಂದ ಇಂದಿನ ಆತ್ಯಾಧುನಿಕ ತಂತ್ರಜ್ಞಾನದ ಗಣಕೀಕೃತ ಆಟಿಕೆಗಳವರೆಗೂ ಮನುಷ್ಯನ ಒಡನಾಡಿ ಇದೆ.
ಕ್ಷೀಣಿಸುತ್ತಿರುವ ಬೊಂಬೆ ಕಲೆಗಳನ್ನು ಪುನರುಜ್ಜೀವನಗೊಳಿಸಲು ಬೊಂಬೆ ಪ್ರೀಯರಿಗೆ ಮರು ಪರಿಚಯಿಸುವ ದೃಷ್ಟಿಯಿಂದ ಬೊಂಬೆ ಪ್ರದರ್ಶನಗೊಂಡಿದೆ.

ದಟ್ಟಗಳ್ಳಿಯಲ್ಲಿರುವ ಕೇಂ ಬ್ರೀಡ್ಜ್ ಮಾಂಟೇಸರಿ ಶಾಲೆಯೊಳಗೆ ಕಾಲಿಟ್ಟರೇ ಸಾಕು ಒಂದು ಹೊಸ ವಿಸ್ಮಯ ಲೋಕವನ್ನೇ ಪ್ರವೇಶಿಸಿದಂತೆ ಕಾಣುತ್ತದೆ.ಎತ್ತ ನೋಡಿದರತ್ತ ಬೊಂಬೆಗಳ ಸಾಲು,
ನೆಲದಿಂದ ಸೂರಿನವರೆಗೆ ಜೋಡಿಸಿರುವ ಬಣ್ಣಬಣ್ಣದ ಬೊಂಬೆಗಳು ತಮ್ಮದೇ ಒಂದು ಮುಗ್ಧ ಸಂಸ್ಕೃತಿಯನ್ನು ಸೃಷ್ಠಿಮಾಡಿದೆ. ದಸರೆಯ ಬೊಂಬೆ ಹಬ್ಬದ ಮೂಲಾಧಾರ.

ಹೌದು ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಅದ್ಬುತ ಗೊಂಬೆಗಳು ಪ್ರದರ್ಶನಗೊಂಡಿದೆ. ಕುಳಿತಿರುವ,ನಿಂತಿರುವ,ನಗುತ್ತಿರುವ,ನಗಿಸುತ್ತಿರುವ, ಹಾಡುತ್ತಿರುವ, ವಯ್ಯಾರದ ಬೊಂಬೆಗಳು ಎಲ್ಲೆಡೆಗಳಿಂದ ತಮ್ಮ ಮಾಯಾಜಾಲವನ್ನು ಪಸರಿಸುತ್ತಿವೆ.

ಮಣ್ಣು,ಮರ,ಪಿಂಗಾಣಿ,ಲೋಹಗಳಿಂದ ರಚಿಸಲಾಗಿರುವ ಬೊಂಬೆಗಳು ವೈವಿಧ್ಯಮಯ ಬೊಂಬೆ ಲೋಕವನ್ನು ತೆರೆದಿಟ್ಟಿದೆ.

ಬೊಂಬೆ ಮನೆಯಲ್ಲಿ ದಸರಾ ಬಂಬೂ ಸವಾರಿ,ಒಡೆಯರ್ ದರ್ಬಾರ್, ರಾಮಾಯಣ, ಮಹಾ ಭಾರತ,ಹಳ್ಳಿ ಸೊಗಡು, ಕಥೆಗಳು,ಪಗಡೆ ಆಟ ಸೇರಿದಂತೆ ಹಳೆಯ ಸಾಂಪ್ರದಾಯ,ಸಂಸ್ಕೃತಿ ಸಾರುವ 10 ಸಾವಿರ ಬೊಂಬೆಗಳು ಪ್ರದರ್ಶನಗೊಂಡಿದೆ.

ದಸರಾ ಬೊಂಬೆಗಳ ಜೊತೆ
ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರವರ ಬೊಂಬೆಗಳು ಕಣ್ಮನ ಸೆಳೆಯುತ್ತಿದೆ.

ಪುನೀತ್ ರಾಜ್ ಕುಮಾರ್
ಹುಟ್ಟಿನಿಂದ ಅಂತ್ಯದವರೆಗೂ ಅಂದರೇ 17 ಮಾರ್ಚ್ 1975
29 ಅಕ್ಟೋಬರ್ 2021 ಸಾವುವವರೆಗೂ ಮೊದಲ ಚಿತ್ರ ಪ್ರೇಮದ ಕಾಣಿಕೆ,26 ವರ್ಷಕ್ಕೆ ಅಪ್ಪು ಚಿತ್ರದಲ್ಲಿ ನಾಯಕ ನಟ,ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಫೇಮಸ್ ಸಾಂಗ್,ಬೆಟ್ಟದ ಹೂ ಚಿತ್ರಕ್ಕೆ ಅವಾರ್ಡ್,ಕವಲುದಾರಿ ಪ್ರೋಡಕ್ಷನ್ 2019 ಮಾಹಿತಿ‌ ಪ್ರದರ್ಶಿಸಿದ್ದಾರೆ. ಪುನೀತ್ ಹೆಗಲ ಮೇಲೆ ಪಾರಿವಾಳ ಕುಳಿತಿರುವ ಪ್ರತಿಮೆಯನ್ನ ಮೈಸೂರಿನ ಕಲಾವಿದ ರೇವಣ್ಣ ತಯಾರಿಸಿರೋದು ವಿಶೇಷ.

ನವರಾತ್ರಿಯಲ್ಲಿ ದಸರಾ ಬೊಂಬೆಗಳನ್ನ ಕೂರಿಸಿ ಆಚರಿಸುವ ಪದ್ದತಿ ಬೆಳೆದು ಬಂದಿದೆ.ಕಳೆದ 16 ವರ್ಷಗಳಿಂದ ಮನೆಯಲ್ಲಿ ಬೊಂಬೆ ಕೂರಿಸುತ್ತಿದ್ದೇವು ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಈ ನವರಾತ್ರಿ ಬೊಂಬೆ ಪ್ರದರ್ಶಿಸುತ್ತಾ ಬಂದಿದ್ದೇವೆ.412 ನಾಡ ಹಬ್ಬ ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುತ್ತಿರುವ ಜೊತೆಗೆ ಸಿಎಂ ಬಸವರಾಜು ಬೊಮ್ಮಾಯಿರವರು ಬೊಂಬೆ,
ಕಾಳಿ ಅವತಾರ,ಮಹಿಷಾಸುರ ಸಂಹಾರ,12 ಜ್ಯೋತಿರ್ಲಿಂಗ,ಒಂಬತ್ತು ಹಂತದಲ್ಲಿ ಬೊಂಬೆಗಳ
ಮದುವೆ ದಿಬ್ಬಣ, ಕರಗ,ಕಲ್ಯಾಣೋತ್ಸವ,ವಿವಾಹ ಭೋಜನ,ಅಶ್ವಮೇದ ಯಾಗ,ಗೋಕುಲ,ಕೃಷ್ಣ ಲೀಲಾ,ಮಾರುವೇಶ,ಮಾಯಾ ಕನ್ನಡಿ,ದ್ರೌಪತಿ ಸ್ವಯಂವರ,ದ್ರೌಪತಿ ವಸ್ತ್ರಾಪಹರಣ ,ಶಕುನಿ ಪಗಡೆಯಾಟ,ನವ ದುರ್ಗೆಯರು,ದಶಾವತಾರ,ಕೃಷ್ಣ ಸಂಧಾನ,ವೈಭವ ಲಕ್ಷ್ಮೀ ಪೂಜೆ,
ವೀಣೆ,ಗಿಟಾರ್, ಪಿಟೀಲ್,ಟಮರುಗಾ,ಶೃತಿ ಪೆಟ್ಟಿಗೆ ,ವಾಧ್ಯ ಪರಿಕರಗಳು,
ಕ್ರೀಡಾ ಬೊಂಬೆ ಮೈಸೂರಿನ ಅರಮನೆಯಲ್ಲಿ
ವಿಶ್ವ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಐಪಿಎಲ್,ಪಗಡೆ,ಲುಡೋ,ಹಾವು ಎಣಿ ಆಟ,ಕೇರಂ, ಅಳಿಗುಳಿ ಮನೆ,ಚೌಕಾಭಾರ,ದೇಸೀ ಆಟ ಅನಾವರಣಗೊಂಡಿದೆ.ದಸರಾ ವೈಭವದ ಬಗ್ಗೆ ಮಕ್ಕಳಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ
ಎಂದು‌ ಶಾಲೆಯ ಪ್ರಾಂಶುಪಾಲರಾದ ವರ್ಷ ಮಾಹಿತಿ ನೀಡಿದರು.

ಒಟ್ಟಾರೆ ಹೇಳೋದಾದರೇ ದಸರಾ ಸಂದರ್ಭದಲ್ಲಿ ರಾಜಮನೆತನದ ಒಡೆಯರು ಹೇಗೆ ದರ್ಬಾರ್ ಮಾಡುತ್ತಾರೋ ಅದೇ ರೀತಿ ಮೈಸೂರಿನ ಶಾಲೆಯಲ್ಲಿ ಜಂಬೂ ಸವಾರಿಯ ಬೊಂಬೆಗಳೆ ದರ್ಬಾರ್ ಮಾಡುತ್ತಿವೆ.

 

Leave a Reply

Your email address will not be published. Required fields are marked *