ನಾಡ ಹಬ್ಬ ಮೈಸೂರು ದಸರಾ 2022 ಕ್ಕೆ ೧೭ ಲಕ್ಷ ಪ್ರಾಯೋಜಕತ್ವ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

 

ನಂದಿನಿ ‌ಮೈಸೂರು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮೈಸೂರು ದಸರಾಕ್ಕೆ ೧೭ ಲಕ್ಷ ಪ್ರಾಯೋಜಕತ್ವ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನಡೆಯಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ೧೭ ಲಕ್ಷ ರೂ. ಮೊತ್ತದ ವಿವಿಧ ಕಾರ್ಯಕ್ರಮಗಳ ಪ್ರಾಯೋಜಕತ್ವ ನೀಡಿದೆ ಎಂದು ಎಸ್‌ಬಿಐ A.O ಕಛೇರಿ ಡಿಜಿಎಂ ರಾಜೇಶ್ ಕುಮಾರ್ ಚೌಧರಿ ತಿಳಿಸಿದರು.

ಜಂಬೂಸವಾರಿ ಮೆರವಣಿಗೆ ನಡೆಯುವ ನಗರದ ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಕಾಲೇಜ್ ವೃತ್ತದಲ್ಲಿ ವಿದ್ಯುತ್ ಅಲಂಕಾರ, ಕೆ.ಆರ್.ಸರ್ಕಲ್‌ನಲ್ಲಿ ಮಹಾರಾಜರ ಪುತ್ಥಳಿಗೆ ತ್ರಿಡಿ ಲೇಸರ್ ಶೋ, ದಸರಾ ಮೆರವಣಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳು ಧರಿಸುವ ಆಭರಣಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮತ್ತು ವಿದ್ಯುತ್ ಅಲಂಕಾರಕ್ಕೆ ಎಸ್‌ಬಿಐ ಪ್ರಾಯೋಕತ್ವ ನೀಡಿದೆ ಎಂದರು.
ಅಲ್ಲದೇ ಆಯುರ್ವೇದ ಸರ್ಕಲ್‌ನಲ್ಲಿ ೧೦ ವರ್ಷದಿಂದ ಕೆಟ್ಟುಹೋಗಿದ್ದ ನೀರಿನ ಚಿಲುಮೆಯನ್ನೂ ಸಹಾ ನಾವು ಸರಿಪಡಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿದ್ದೇವೆ. ನಾಡ ಹಬ್ಬವನ್ನು ವೈಭವಯುತವಾಗಿ ಆಚರಿಸಲು ಎಸ್‌ಬಿಐ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದರು. ಅಸತ್ಯವನ್ನು ಅಳಿಸಿ ಸತ್ಯವನ್ನು ಬೆಳಕಿಗೆ ತರುವ ದಸರಾ ಹಬ್ಬ ನಾಡಿನ ಜನತೆಗೆ ಶುಭವನ್ನುಂಟು ಮಾಡಲಿ ಎಂದು ದಸರಾ ಶುಭಾಶಯ ಕೋರಿದರು.
ಎಸ್‌ಬಿಐ ಎಲ್ಲಾ ರೀತಿಯ ಸಾಲಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಹತ್ತಿರವಾಗಿದೆ. ಅದರಲ್ಲೂ ವಿಶೇಷವಾಗಿ ಅತ್ಯಂತ ಕಡಿಮೆ ಬಡ್ಡಿಯಲ್ಲಿ
ನಮ್ಮ ಬ್ಯಾಂಕ್ ಕಾರ್‌ಲೋನ್ ನೀಡುತ್ತಿದೆ ಎಂದರು.

ವಲಯ ಕಛೇರಿ ಮುಖ್ಯ ವ್ಯವಸ್ಥಾಪಕ ದಿನೇಶ್, ಕುಮಾರಸ್ವಾಮಿ, ಸತ್ಯನಾರಾಯಣ, ಶರತ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *