ಜಲ ಸಾಹಸ ಕ್ರೀಡೆ ಬಿತ್ತಿ ಪತ್ರ ಬಿಡುಗಡೆ

 

 

ನಂದಿನಿ ಮೈಸೂರು

ಮೈಸೂರು,ಸೆ.29: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಹಾಸ ಅಕಾಡೆಮಿ ಸಹಯೋಗದಲ್ಲಿ ದಸರಾ ಸಾಹಸೋತ್ಸವ ಸಮಿತಿ ಹಮ್ಮಿಕೊಂಡಿರುವ ವಿವಿಧ ಕ್ರೀಡೆಗಳ ಬಿತ್ತಿಪತ್ರವನ್ನು ಕ್ರೀಡಾ ಉಪಸಮಿತಿ ವಿಶೇಷಾಧಿಕಾರಿಯಾಗಿರುವ ಎಸ್ಪಿ ಆರ್.ಚೇತನ್ ಅನಾವರಣ ಮಾಡಿದರು.

ನಗರದ ಎಸ್ಪಿ ಕಚೇರಿಯಲ್ಲಿ ಬಿತ್ತಿಪತ್ರ ಅನಾವರಣ ಮಾಡಿ ಮಾತನಾಡಿದ ಅವರು, ಸೆ.30 ರಿಂದ ಅಕ್ಟೋಬರ್ 6 ರವರೆಗೆ ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಜಲ ಸಾಹಸ ಕ್ರೀಡೆ ನಡೆಯಲಿವೆ ಎಂದರು.

ಕೆ.ಆರ್.ಎಸ್ ಹಿನ್ನೀರು, ಉಂಡವಾಡಿ ಹಿನ್ನೀರಿನಲ್ಲಿ ನಡೆಯುವ ಜಲಸಾಹಸ ಕ್ರೀಡೆಯಲ್ಲಿ ರ್ಯಾಪ್ಟಿಂಗ್ ರೂ. 50, ಜೆಟ್ ಸ್ಕಿ ರೂ. 250, ಸ್ಪೀಡ್ ಬೋಟ್ ರೂ.150, ಬನಾನ ರೈಡ್ ರೂ. 200, ಬಂಪರ್ ರೈಡ್ ರೂ.250, ಕಯಾಕಿಂಗ್ ರೂ.100, ಚಾಲೆಂಜ್ ರೋಪ್ ಚಟುವಟಿಕೆಗಳು ರೂ.50 ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : ಶಬ್ಬೀರ್ .ಎಫ್(8971553337)ಸಂಪರ್ಕಿಸಬಹುದಾಗಿದೆ.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರೋಪ್ ಚಟುವಟಿಕೆಗಳಾದ ಜುಮರಿಂಗ್, ರ್ಯಾಪಲಿಂಗ್, ಜಿಪ್ ಲೈನ್ ಮುಂತಾದ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 2 ರಂದು
ಚಾಮುಂಡಿ ಬೆಟ್ಟ ಮೆಟ್ಟಿಲು ಹತ್ತುವ ಸ್ಪರ್ಧೆಯನ್ನು ನಾಲ್ಕು ವಿಭಾಗದಲ್ಲಿ ಆಯೋಜಿಸಲಾಗಿದೆ‌. ಅಂದು ಬೆಳಗ್ಗೆ 6 ರಿಂದ 7 ಗಂಟೆಗೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು, ಮೂರು ಹಂತದ ನಗದು ಪ್ರಶಸ್ತಿ ಇರಲಿದೆ. ಹೆಚ್ಚಿನ ಮಾಹಿತಿಗೆ ಮುನಿರಾಜು(7899941661) ಸಂಪರ್ಕಿಸಬಹುದು.
ಕಾರ್ಯಕ್ರಮದಲ್ಲಿ ಕ್ರೀಡಾ ಉಪಸಮಿತಿ ಅಧ್ಯಕ್ಷ ಸುಬ್ಬಣ್ಣ ಕುಬ್ರಳ್ಳಿ, ಉಪಾಧ್ಯಕ್ಷರಾದ ಶಿವರಾಜ್, ನಾಗಣ್ಣಗೌಡ, ಸದಸ್ಯರಾದ ವಿನಯ್ ಕುಮಾರ್, ಚೇತನ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *