ನಂದಿನಿ ಮೈಸೂರು
ಮೈಸೂರು ಪ್ರಜ್ಞಾವಂತ ಜಿಲ್ಲೆ ಎಂದುಕೊಂಡಿದ್ದೇನೆ. ಚಿತ್ರದುರ್ಗದಲ್ಲಿ ಜ.8 ರಂದು ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶ ನಡೆಯಲಿದ್ದು ಇಂದು ಒಂದು ಐತಿಹಾಸಿಕ ಸಮಾವೇಶವಾಗಲಿದೆ.ಎಸ್ಸಿ ಎಸ್ಟಿ ಸಮುದಾಯ ಮಾತ್ರವಲ್ಲದೇ ಎಲ್ಲಾ ಸಮುದಾಯ ಜನರು ಸಮಾವೇಶಕ್ಕೆ ಆಗಮಿಸುವಂತೆ ಮಾಜಿ ಮುಖ್ಯಮಂತ್ರಿ ಜಿ.ಪರಮೇಶ್ವರ್ ಮನವಿ ಮಾಡಿದರು.
ಮೈಸೂರು ಕಾಂಗ್ರೆಸ್ ಕಛೇರಿಯಲ್ಲಿ ಎಸ್ಟಿ ಎಸ್ಟಿ ಸಮಾವೇಶ ಕುರಿತು ಪೂರ್ವಭಾವಿ ಸಭೆ ನಡೆಸಿ
ಅವರು ಮಾತನಾಡಿದರು.
ಕರ್ನಾಟಕದಲ್ಲಿ ಶೇ ೨೪.ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಇದೆ.ಇಷ್ಟಿದ್ದರೂ ನಮ್ಮಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದಾವೆ.
ಪ.ಜಾತಿ ೧೦೧ ಜಾತಿಗಳಿವೆ. ಪ.ಪಂಗಡದಲ್ಲಿ ೫೨ ಜಾತಿಗಳಿವೆ.ನಾವೆಲ್ಲ ಒಟ್ಟಾಗಿ ಸೇರಿ ಐಕ್ಯತೆ ಸಮಾವೇಶ ಮಾಡಬೇಕು.
ಇದೇ ಜನವರಿ ೮ ರಂದು ಎಸ್ಸಿ, ಎಸ್ಟಿ ಸಮಾವೇಶವನ್ನು ಚಿತ್ರದುರ್ಗದಲ್ಲಿ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ.
ಬದಲಾವಣೆಗೆ ಈ ಸಮಾವೇಶ ವೇದಿಕೆಯಾಗಲಿದೆ. ಕಾಂಗ್ರೇಸ್ ಪಕ್ಷಕ್ಕೆ ಪ್ಲೆಸ್ ಪಾಯಿಂಟ್ ಆಗಲಿದೆ.ಮೈಸೂರು ಪ್ರಜ್ಞಾವಂತ ಜಿಲ್ಲೆಯಾಗಿದೆ.ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಲಿದ್ದೇವೆ.ಸಂಘರ್ಷಕ್ಕೆ ರೆಡಿಯಾಗಿ ಎಂದು ಕಾಂಗ್ರೆಸ್ ನಾಯಕರು,ಕಾರ್ಯಕರ್ತರಗೆ ಪರಮೇಶ್ವರ್ ಕರೆ ನೀಡಿದರು.ಭಾಷಣ ವೇಳೆ ಆಗಮಿಸಿದ ಸತೀಶ್ ಜಾರಕಿಹೊಳಿಯವರನ್ನ ಪರಮೇಶ್ವರ್ ಹಾಡಿ ಹೊಗಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು 500 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.