7.5ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶ್ವಿನ್ ಕುಮಾರ್ ಭೂಮಿ ಪೂಜೆ .

ನಂದಿನಿ ಮೈಸೂರು

7.5ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶ್ವಿನ್ ಕುಮಾರ್ ಭೂಮಿ ಪೂಜೆ .

ತಿ.ನರಸೀಪುರ:ರಸ್ತೆ ,ಚರಂಡಿ,ದೇವಸ್ಥಾನ ಅಭಿವೃದ್ಧಿ ,ಶಾಲಾ ಕೊಠಡಿ,ಸಮುದಾಯ ಮತ್ತು ಬಸ್ ಶೆಲ್ಟರ್ ಸೇರಿದಂತೆ 7.5 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ .ಅಶ್ವಿನ್ ಕುಮಾರ್ ಭೂಮಿ ಪೂಜೆ ಮಾಡಿದರು.

ಬನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಪಿಡಬ್ಲ್ಯೂಡಿಯ 7.25 ಕೋಟಿ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ 35 ಲಕ್ಷ ಅನುದಾನದಲ್ಲಿ
ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಗುದ್ದಲಿ ಪೂಜೆ ನಡೆಸಿದರು.
ಎಸ್.ಎಫ್.ಸಿ ಅನುದಾನದಡಿ
ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ
ಬನ್ನೂರು ಪುರಸಭೆ ವ್ಯಾಪ್ತಿಯ ರತ್ನಮಹಲ್ ರಸ್ತೆಯಿಂದ ಹೌಸಿಂಗ್ ಬೋರ್ಡ್ ರವರೆಗೆ 3.50 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ,ಬಸ್ಸು ಸ್ಯಾಂಡ್ ರಸ್ತೆ ಡಾಂಬರೀಕರಣಕ್ಕೆ 90ಲಕ್ಷ ,1ಕೋಟಿ ವೆಚ್ಚದಲ್ಲಿ ತೇರಿನಬೀದಿಯಲ್ಲಿ ಚರಂಡಿ ಮತ್ತು ರಸ್ತೆ ಡಾಂಬರೀಕರಣ,ಬಿಸಿಲುಮಾರಮ್ಮನ ದೇವಸ್ಥಾನ ನಿರ್ಮಾಣ ಕಾಮಗಾರಿ 50 ಲಕ್ಷ , ಚಾಮನಹಳ್ಳಿ ಬಸ್ ನಿಲ್ದಾಣದಲ್ಲಿ ಶೆಲ್ಟರ್ ಮತ್ತು ಹೈ ಮಾಸ್ಟ್ ದೀಪ ಅಳವಡಿಕೆಗೆ 16 ಲಕ್ಷ ,ಚಾಮನಹಳ್ಳಿ ಹೊನ್ನಲಿಂಗೇಶ್ವರ ದೇವಸ್ಥಾನಕ್ಕೆ ಅಭಿವೃದ್ಧಿ ಕಾಮಗಾರಿ 30 ಲಕ್ಷ ,ಒಕ್ಕಲಿಗ ಸಮುದಾಯದ ಭವನದ ಅಭಿವೃದ್ಧಿ 40 ಲಕ್ಷ
ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಅಭಿವೃದ್ಧಿ ಇಲಾಖೆ ವತಿಯಿಂದ ಪೌರಕಾರ್ಮಿಕರ ಕಾಲೋನಿಯಲ್ಲಿ ಪಟ್ಟಲಮ್ಮದ ದೇವಸ್ಥಾನಕ್ಕೆ 5 ಲಕ್ಷ , ಬನ್ನೂರು ಸಂತೆಮಾಳದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ
ವಿವೇಕ ಶಾಲಾ ಯೋಜನೆಯಡಿ 30 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.

ನಂತರ ಮಾತನಾಡಿದ ಅವರು,ಕಾಮಗಾರಿಗಳ ನಿರ್ಮಾಣದಲ್ಲಿ ಗುತ್ತಿಗೆದಾರರು ಉತ್ತಮ ಗುಣಮಟ್ಟವನ್ನು ಕಾಪಾಡುವುದಲ್ಲದೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುತ್ತಿದ್ದು,ಮುಂದಿನ ದಿನಗಳಲ್ಲಿ ಜನತೆ ಸಹಕಾರ ನೀಡಿದಲ್ಲಿ ಮತ್ತಷ್ಟು ಅನುದಾನ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಜಯಪಾಲಭರಣಿ, ಬನ್ನೂರುಪುರಸಭಾ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ,ಉಪಾಧ್ಯಕ್ಷೆ ಸೌಭಾಗ್ಯಲೋಕೇಶ, ಪುರಸಭೆ ಸದಸ್ಯರುಗಳಾದ ದಿವ್ಯಾಚಂದ್ರು,ಮಹೇಶ,ಮಹಮದ್ಆರೀಫ್,ಸೌಮ್ಯರಾಣಿ,ಶೋಭ,ಶಾಂತರಾಜು,ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೂರವನಹಳ್ಳಿ ನಾಗರಾಜು,ಕೊಡಗಹಳ್ಳಿ ಗ್ರಾಪಂ ಅಧ್ಯಕ್ಷ ಧನಂಜಯ(ಪಾಪಣ್ಣ) ಮಾಜಿ ತಾಪಂ ಅಧ್ಯಕ್ಷ ವೆಂಕಟೇಗೌಡ,ಮಾಜಿ ಎಪಿಎಂಸಿ ಅಧ್ಯಕ್ಷ ಬಸವನಹಳ್ಳಿ ವೆಂಕಟೇಶ,ಗ್ರಾಪಂ ಸದಸ್ಯ ಹೋಟೆಲ್ ರಾಮಸ್ವಾಮಿ , ಮುಖಂಡರುಗಳಾದ ಬನ್ನೂರು ಕುಮಾರ್,ವಿಜಯಕುಮಾರ್ ,ಚಲುವರಾಜು,ಉಮೇಶ್ ,ಕಂಚನಹಳ್ಳಿ ಚಿಕ್ಕ ಈರೇಗೌಡ,ದೀಪು ದರ್ಶನ್,ಚಿಕ್ಕಯ್ಯ,ಎಸ್‌ ಡಿಎಂಸಿ ಅಧ್ಯಕ್ಷ ತಮ್ಮಯ್ಯ,ಅತ್ತಹಳ್ಳಿ ರವಿ ,ಬೇವಿನಹಳ್ಳಿ ಸತೀಶ್ ,ಲೋಕೋಪಯೋಗಿ ಇಲಾಖೆ ಎಇಇ ನಟೇಶ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆ ಎಇಇ ಲಕ್ಷ್ಮಣರಾವ್ ,ಪುರಸಭೆಯ ಮೂಖ್ಯಾಧಿಕಾರಿ ಮಹದೇವ,ಜೆಇಗಳಾದ ರಾಜುನಾಯಕ,ವೀರಭದ್ರಸ್ವಾಮಿ ,ಪುಟ್ಟಸ್ವಾಮಿ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *