ಎಚ್.ಡಿ.ಕೋಟೆ:14 ಡಿಸೆಂಬರ್ 2022
ಕಬಿನಿ ಶಿವಲಿಂಗು / ನಂದಿನಿ ಮೈಸೂರು
ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ನಿರಂತರವಾಗಿ ಸಾರ್ವಜನಿಕರನ್ನು ಕಾಡುತ್ತಿದ್ದ ನಾಲ್ಕು ಚಿರತೆಗಳಲ್ಲಿ ಒಂದು ಮರಿ ಚಿರತೆ ಅರಣ್ಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ.
ಹೌದು
ಎಚ್‍ಡಿ ಕೋಟೆ ತಾಲೂಕಿನ ಅಂತರಸಂತೆ ಹೋಬಳಿಯ ಬದನಕುಪ್ಪೆ ಗ್ರಾಮಸ್ಥರ ನಿದ್ದೇಗೆಡಿಸಿದ್ದ ಚಿರತೆ ಮರಿ ಸೆರೆಯಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ
ಗ್ರಾಮದ ಯುವಕರು ಚಿರತೆ ಮರಿ ಸಾಗಿಸದಂತೆ ಮಾತಿನ ಸಮರ ನಡೆಯಿತು.
ಇಷ್ಟು ದಿನಗಳ ಕಾಲ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಂದಿರುವುದಕ್ಕೆ ಪರಿಹಾರದ ಚೆಕ್ಕನ್ನ ಇಲ್ಲೇ ವಿತರಣೆ ಮಾಡಿ ನಿಮ್ಮ ಚಿರತೆಯನ್ನು ತೆಗೆದುಕೊಂಡು ಹೋಗಿ ಎಂದು ಗ್ರಾಮದ ಯುವಕರು ಪ್ರತಿಭಟನೆ ನಡೆಸಿದರು.
ಅರಣ್ಯ ಅಧಿಕಾರಿಗಳು
ಗ್ರಾಮದ ಮುಖಂಡರು ಹಾಗೂ ಊರ ಯಜಮಾನರು ಮದ್ಯ ಪ್ರವೇಶ ಮಾಡಿ ಶಾಂತಿಯುತವಾಗಿ ನಡೆದುಕೊಳ್ಳಲು ತಿಳಿಸಿದರಯ.ನಂತರ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಡೆ ತೆಗೆದುಕೊಂಡು ಹೋಗಿದ್ದಾರೆ.
ಒಂದು ಚಿರತೆ ಮರಿ ಏನೋ ಸೆರೆಯಾಗಿದೆ ಉಳಿದ ಚಿರತೆ ಅದ್ಯಾವಾಗ ಬೋನಿಗೆ ಬೀಳುತ್ತೋ ನಾವು ಯಾವಾಗ ನೆಮ್ಮದಿಯ ನಿಟ್ಟುಸಿರು ಬಿಡುತ್ತೇವೋ ಎಂದು ಬೋನಿಗೆ ಬಿದ್ದ ಚಿರತೆ ನೋಡಿ ಜನ ಮಾತನಾಡಿಕೊಳ್ಳುವ ದೃಶ್ಯ ಕಂಡುಬಂತು.