ವಿಕಲಚೇತನರ ಮೊಗದಲ್ಲಿ ಮಂದಹಾಸ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ವಿಕಲಚೇತನರಿಗೆ ಉಚಿತ ಕೃತಕ ಕೈ ಕಾಲು ವಿತರಣೆ

 

ನಂದಿನಿ ಮೈಸೂರು

ಅಯ್ಯೋ ದೇವರೇ ನಾನೇನು ಪಾಪ ಮಾಡಿದ್ದೇ .ನನ್ನ ಮೇಲೆ ಯಾಕಿಷ್ಟು ಕೋಪಾ? ನನ್ನ ಕೈ ಕಾಲು ಕಿತ್ತುಕೊಂಡೆ ಎಂದು ಕಣ್ಣೀರಾಕುತ್ತಿದ್ದ ವಿಕಲಚೇತನರಿಗೆ ಕೃತಕ ಕಾಲು ಕೈ ವಿತರಿಸಿ ಮರುಜೀವ ನೀಡಿದ ದೃಶ್ಯ ಕಂಡು ಬಂತು.

ಹೌದು ವೇದಿಕೆಯಲ್ಲಿ ಸಾಲಾಗಿ ಕುಳಿತಿರುವ ವಿಕಲಚೇತನರಿಗೆ
ವಿಶ್ವ ವಿಶೇಷಚೇತನರ ದಿನಾಚರಣೆ ಹಾಗೂ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಉಚಿತವಾಗಿ ಕೃತಕ ಕಾಲು ನೀಡಲಾಯಿತು.

ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್‌ ಆಫ್ ಮೈಸೂರು ಗೋಲ್ಡನ್ ಸಿಟಿ, ಲಯನ್ಸ್ ಕ್ಲಬ್ ಆಫ್ ಕಾಮಧೇನು, ಲಯನ್ಸ್ ಕ್ಲಬ್ ಆಫ್ ಸಿರಿ, ಲಯನ್ಸ್ ಕ್ಲಬ್ ಆಫ್ ಸ್ಯಾಂಡಲ್ ವುಡ್ ಹಾಗೂ ಸ್ತ್ರೀಶಕ್ತಿ ಮಹಿಳಾ ವೇದಿಕೆ ಅಗ್ರಹಾರದ ನಟರಾಜ ಕಲ್ಯಾಣ ಮಂಟಪದಲ್ಲಿ ನಟರಾಜ ಮಠದ ಚಿದಾನಂದ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಎಲ್‌ ಸಿ ಸಿ.ಎನ್. ಮಂಜೇಗೌಡ ಕೃತಕ ಕಾಲುಗಳನ್ನು ವಿತರಿಸಿದರು.

ನಗರ ಪ್ರದೇಶದವರು ಮಾತ್ರವಲ್ಲದೆ ಆರ್ಥಿಕವಾಗಿ ದುರ್ಬಲರಾಗಿರುವ ಗ್ರಾಮೀಣ ಪ್ರದೇಶಗಳವರಿಗೂ ಆದ್ಯತೆ ನೀಡಲಾಗಿತ್ತು. ಇದು ಸುಮಾರು 10 ಮಂದಿಗೆ ಒಂದು ಲಕ್ಷ ರೂ. ಮೊತ್ತದ ಕೃತಕ ಕಾಲುಗಳನ್ನು ನೀಡಲಾಯಿತು. ಮಹಾವೀರ್ ಬನ್ಸಾಲಿ ಎಂಬುವವರು ಪ್ರಮುಖ ದಾನಿಗಳಾಗಿದ್ದರು. ಕೃತಕ ಕಾಲು ಸ್ವೀಕರಿಸಿದ ಫಲಾನುಭವಿಗಳು ದಾನಿಗಳಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೊಂದಷ್ಟು ವಿಶೇಷ ಚೇತನರು ನಮಗೂ ಕೃತಕ ಕಾಲು ಕರುಣಿಸುವಂತೆ ಮನವಿ ಪತ್ರ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಲಯನ್ಸ್ ಕ್ಲಬ್ ಮೈಸೂರು ಮುಂದಿನ ದಿನಗಳಲ್ಲಿ ಮತ್ತೊಂದು ಕಾರ್ತಕ್ರಮದಲ್ಲಿ ನಿಮಗೂ ಕೃತಕ ಕಾಲು ನೀಡುವುದಾಗಿ ಭರವಸೆ ನೀಡಿದೆ.

ಈ ವೇಳೆ ಹೊಸಮಠದ ಶ್ರೀ ಚಿದಾನಂದ ಸ್ವಾಮಿ, ಡಾ.ನಾಗರಾಜ್ ವಿ.ಬೈರಿ, ಜೆಡಿಎಸ್‌ ಮುಖಂಡ ಕೆ.ಆರ್.ಮಿಲ್ ಶಿವಣ್ಣ, ಕ್ಲಬ್ ಅಧ್ಯಕ್ಷ ಗೋಲ್ಡ್ ಸುರೇಶ್, ಡಾ.ಶ್ರೀವಿದ್ಯಾ • ಮಹಾವೀರ ಚಂದ್ ಬನ್ಸಾಲಿ, ಕಾರ್ಯದರ್ಶಿ ಪ್ರಮೀಳಾ, ಆಶಾ ಮಂಜುನಾಥ್‌, ಲಯನ್ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಹುಟ್ಟಿದಾಗಿನಿಂದಲೂ ಕುಟುಂಬದವರ ನೆರವು ಪಡೆದುಕೊಳ್ಳುತ್ತಿದ್ದ ವಿಕಲಚೇತನರು ಸ್ವಯಂ ಪ್ರೇರಿತವಾಗಿ ನಡೆಯಲು ಕೃತಕ ಕೈ ಕಾಲು ದಾನ ಮಾಡಿದ ದಾನಿಗಳಿಗೆ ವಿಕಲಚೇತನರು ಬಾವುಕರಾಗಿ ಧನ್ಯವಾದ ತಿಳಿಸಿದರು.

 

Leave a Reply

Your email address will not be published. Required fields are marked *