Alagud Revanna.
ತಿ.ನರಸೀಪುರ.ಮಾ.07:-ಸಂವಿಧಾನದ ಮೂಲ ಸ್ವರೂಪ, ಆಶಯಗಳಿಗೆ ಧಕ್ಕೆ ಬಾರದಂತೆ ಕೆಲವೊಂದನ್ನು ತಿದ್ದುಪಡಿ ಮಾಡಬಹುದೇ ವರೆತು. ಸಂವಿಧಾನದ ಮೂಲ ಸ್ವರೂಪ ಬದಲಾವಣೆ
ಯಾರಿಂದಲೂ ಸಾಧ್ಯವಿಲ್ಲ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ರೇವಣ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಉಮಾ ಮಹದೇವ್ ನೇತೃತ್ವದಲ್ಲಿ ಆಯೋಜಿಸಿದ್ದ ನಮ್ಮ ಹೆಮ್ಮೆಯ ಭಾರತ ಸಂವಿಧಾನ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಸಂವಿಧಾನದ ಸಂಕ್ಷಿಪ್ತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಮಾತನಾಡಿದ ಅವರು,
ಶೋಷಿತರು,ಹಿಂದುಳಿದವರು ಹಾಗೂ ದಲಿತರು ಸೇರಿದಂತೆ ಎಲ್ಲಾ ಬಡವರ್ಗದ ಸ್ವತ್ತಾಗಿರುವ ಸಂವಿಧಾನವನ್ನು ಬದಲಿಸಲು ಅಸಾಧ್ಯವಾದ ಮಾತು ಎಂದರು.
ಪುರಸಭೆ ಅಧ್ಯಕ್ಷ ಮದನ್ ರಾಜ್ ಮಾತನಾಡಿ ಬಾಬಾಸಾಹೇಬರು ಸಂವಿಧಾನ ರಚಿಸಿದ್ದರ ಫಲ ಎಸ್ಸಿ,ಎಸ್ಟಿ,ಒಬಿಸಿ ಜನಾಂಗ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬೆಳೆದು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಿದೆ.ನಾನು ಜನಪ್ರತಿನಿಧಿಯಾಗಿ,ಪುರಸಭೆ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿರುವುದು ಬಾಬಾ ಸಾಹೇಬರು ರಚಿಸಿದ ಸಂವಿಧಾನದಿಂದ ಹಾಗಾಗಿ ವಿದ್ಯಾರ್ಥಿಗಳು ಸಂವಿಧಾನವನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡು ಸಂವಿಧಾನ ಬದ್ದ ಬದುಕು ನೆಡಸುವ ಮೂಲಕ ದೇಶದ ಸತ್ರ್ರಜೆಗಳಾಗಬೇಕೆಂದರು.
ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ರಾಜಶೇಖರ್ ಕೆ.ಯಡಹಳ್ಳಿ ಮಾತನಾಡಿ , ಸ್ವಾತಂತ್ರ್ಯ ಹಾಗೂ ಸಂವಿಧಾನದ ದೆಸೆಯಿಂದ ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ.
ಇತ್ತೀಚೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ಬದಲಾಯಿಸಲು ಉತ್ಸುಕತೆ ತೋರುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಿ ದ್ದು,ಇದಕ್ಕೆ ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ ಸಂವಿಧಾನದ ಮೂಲತತ್ವಗಳು ಅಂತರ್ಗತ ವಾಗಿವೆ.ಆದ್ದರಿಂದ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದೆ.ಭಾರತದ ಸಾರ್ವಭೌಮತ್ವ ಸಂವಿಧಾನ. ಜನರ ಒಳಿತಿಗಾಗಿ ಮಾಡಿರುವ ಸಂವಿಧಾನ. ಶಾಸಕಾಂಗ-ಕಾರ್ಯಾಂಗ-ನ್ಯಾಯ್ಯಾಂಗದ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ
ಸಂವಿಧಾನದ ವಿಷಯದಲ್ಲಿ ನಾವು,ನೀವು ಮಾಡಬೇಕಾದ ಕೆಲಸವೆಂದರೆ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಮನನ ಮಾಡಿಕೊಂಡು ಜಾತ್ಯಾತೀತ ಮನೋಭಾವದ ಸಂವಿಧಾನವನ್ನು ಉಳಿಸಲು ಕಟಿ ಬದ್ದರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ನಾಗರತ್ನಮ್ಮ, ಮೈಸೂರು ಮಾನಸ ಗಂಗೋತ್ರಿ ವಿಶ್ವ ವಿಧ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಬಿ.ಆರ್.ಮಾರುತಿ, ಮೂಡಳ್ಳಿ ಮಹದೇವ್, ಆಲತ್ತೂರುಶಿವರಾಜು,ಪ್ರೊ. ಡಾ.ಮಾಧವಿ, ಪ್ರೊ.ಪ್ರೇಮಕುಮಾರಿ ಸೇರಿದಂತೆ ಕಾಲೇಜಿನ ಅದ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.