ಜನಾಂದೋಲ ಮಹಾಮೈತ್ರಿ ವತಿಯಿಂದ ಮಾ.15 ರಂದು ಜನಜಾಗೃತಿ ಜಾಥಾ ಹಾಗೂ ಸಮಾವೇಶ

Alagud Revanna

ತಿ.ನರಸೀಪುರ ಮಾ.07:- ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಂತೆ 3 ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ 24 ಕ್ಕೂ ಹೆಚ್ಚೂ ಸಂಘಟನೆಗಳ ಜನಾಂದೋಲ ಮಹಾಮೈತ್ರಿ ವತಿಯಿಂದ ಮಾ.15 ರಂದು ಜನಜಾಗೃತಿ ಜಾಥಾ ಹಾಗೂ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಮೈತ್ರಿಯ ಸಂಚಾಲಕ ಉಗ್ರ ನರಸಿಂಹೇಗೌಡ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಜಾಥಾದ ಪೂರ್ವಭಾವಿ ಸಭೆಯಲ್ಲಿ ಭಿತ್ತಿ ಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ರೈತರಿಗೆ ಮತ್ತು ಸಾಮಾನ್ಯ ಬಡ ಕುಟುಂಬಗಳಿಗೆ ಮಾರಕವಾಗಿರುವ 3 ಕೃಷಿ ಕರಾಳ ಕಾಯ್ದೆ ವಾಪಸ್ಸಾಗಬೇಕು. ಎಂಎಸ್ ಹಾಗೂ ಕಾಯ್ದೆಬದ್ಧ ಖಾತರಿ ಒತ್ತಾಯಿಸಿ ರಾಜ್ಯದಾದ್ಯಂತ ಮಾ.01 ರಿಂದಲೇ ಬಸವ ಕಲ್ಯಾಣದಲ್ಲಿ ಜನಜಾಗೃತಿ ಜಾಥಾ ಆರಂಭವಾಗಿಲಿದೆ. ಮಾ.09 ರಿಂದ ಶಿವಮೊಗ್ಗದ ಕಾಗೋಡು ಹಾಗೂ ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಜಾಥಾ ಹೊರಡಲಿದ್ದು, 15 ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿದಿದರು.

ರೈತರ ಬದುಕು ಹಾಗೂ ಸಾಮಾನ್ಯ ಕುಟುಂಬಗಳ ಜೀವನದ ಅರಿವಿಲ್ಲದೆ ಆಡಳಿತರೂಢ ಬಿಜೆಪಿ ಸರ್ಕಾರ ರೈತ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಇಂತಹ ಅವೈಜ್ಞಾನಿಕ ಕ್ರಮದಿಂದ ಹೈನುಗಾರಿಕೆ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ರೈತ ಸೇರಿದಂತೆ ವಾಹನದ ಚಾಲಕ ಹಾಗೂ ಮಾಲೀಕ ಮೂವರು ಪೊಲೀಸರಿಂದ ಕಾನೂನು ತೊಂದರೆಗೆ ಸಿಲುಕಿ ತಲೆ ಮರೆಸಿಕೊಂಡರು. ಸ್ಥಳೀಯ ಸೋದರರಂತೆ ಇರುವ ಪೊಲೀಸರೊಂದಿಗೆ ಸಂಘರ್ಷ ನಡೆಸಿ, ಲಕ್ಷಾಂತರ ಹಣವನ್ನು ಖರ್ಚು ಮಾಡಿ ಜಾಮೀನು ಪಡೆಯಬೇಕಾಯಿತು. ಇಂತಹ ಸರ್ಕಾರವನ್ನು ಮುಂದಿನ ದಿನಗಳಲ್ಲಿ ಅಧಿಕಾರದಿಂದ ದೂರವಿಡಲು ಜನಜಾಗೃತಿ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಪ್ರತಿಯೊಬ್ಬರ ಮುಂದೆ ಇರುವುದರಿಂದ. ನಮ್ಮ ಹೋರಾಟವನ್ನು ಬೆಂಬಲಿಸಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರಲ್ಲಿ ಉಗ್ರನರಸಿಂಹೇಗೌಡ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ‌ ಸಹ ಸಂಚಾಲಕರಾದ ಗಣೇಶ್, ಬಿ.ಕರುಣಾಕರ್, ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಬಿಪಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ದಂಸಂಸ ಜಿಲ್ಲಾ ಸಂಚಾಲಕರಾದ ಆಲಗೂಡು ಡಾ.‌ಚಂದ್ರ ಶೇಖರ್‌, ಬನ್ನಹಳ್ಳಿ ಸೋಮಣ್ಣ, ಸೋಸಲೆ ರಾಜಶೇಖರಮೂರ್ತಿ, ನಯ ನಜಕ್ಷತ್ರೀಯ ಸಂಘದ ಅಧ್ಯಕ್ಷ ನಾಗೇಂದ್ರ, ಸೇವಾಶ್ರಯ ಫೌಂಡೇಷನ್‌ ಅಧ್ಯಕ್ಷ ಆರ್.ಮಣಿಕಂಠರಾಜ್ ಗೌಡ, ಮುಖಂಡರಾದ ಈ.ರಾಜು, ಯಡದೊರೆ ಮಹದೇವಯ್ಯ, ಆಲಗೂಡು ಶಿವಣ್ಣ, ಚೌಹಳ್ಳಿ ಶಾಂತಕುಮಾರ್, ಮನೋಜ್ ಕುಮಾರ್, ಬಸವರಾಜು, ಸೋಸಲೆ ನಂಜುಂಡಯ್ಯ, ನಂಜುಂಡಸ್ವಾಮಿ, ಗಂಗಾಧರ, ಕನ್ನಾಯಕನಹಳ್ಳಿ ಮರಿಸ್ವಾಮಿ, ನಿಂಗರಾಜು ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *