ಜನನಿ ಸೇವಾ ಟ್ರಸ್ಟ್ನಿಂದ ಮಹಿಳಾ ಸಾಧಕಿಯರಿಗೆ ಸನ್ಮಾನ 5 ಲಕ್ಷ ಮೌಲ್ಯದ ವಿಮೆ ಬಾಂಡ್ ವಿತರಣೆ

ಮೈಸೂರು:7 ಮಾರ್ಚ್ 2022

ನಂದಿನಿ ಮೈಸೂರು

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -2022 ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದಿವಂಗತ ಕೆ . ಕಮಲಮ್ಮನವರ 12 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನನಿತ್ಯ ಸಾರ್ವಜನಿಕ ವಲಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಮಂದಿ ದಿಟ್ಟ ಮಹಿಳೆಯರಿಗೆ ಗೌರವ ಸಮರ್ಪಣೆ ಮತ್ತು ರೂ . 5-00 ಲಕ್ಷ ಮೌಲ್ಯದ ಅಪಘಾತ ವಿಮೆ ಬಾಂಡ್ ವಿತರಣೆ ಮಾಡಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಅಶೋಕ್ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ
ಮಡ್ಡಿಕೆರೆ ಗೋಪಾಲ್ ,ಖ್ಯಾತ ಸಾಹಿತಿ ಲೀಲಾಪ್ರಕಾಶ್,ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,ಸಿ ಎಸ್ ಐ ಚರ್ಚ್ ಫಾಧರ್ ರೆವರೆಂಟ್ ವಿಕ್ಟರ್,ಮೌಲಿ ಮಹಮದ್ ಜಿಯಾಉಲ್ಲಾಕ್, ಆದಮ್ ಖಾನ್ವಮಜ್ಜೇದ್ದ್
ಸೇರಿದಂತೆ ವೇದಿಕೆಯ ಗಣ್ಯರು
ಕೆ.ಕಮಲಮ್ಮ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಮನ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಟ್ರಸ್ಟಿನ ಆರ್ ಸೌಮ್ಯ ಮತ್ತು ರಮ್ಯ ಕಹಳೆ ಊದುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಡಾ . ಮಾಣಿಕ್ ಬೆಂಗೇರಿ, ಶಶಿಕಲಾ ಅಶೋಕ್ , ಮಲ್ಲಿಗೆ ಮಾಚಮ್ಮ , ಪ್ರಮೀಳ ಕುನವರ್ , ರಮಾಮಣಿ , ಬಿ . ಮಂಜುಳ , ಕವಿತ , ಗಾಯತ್ರಿ, ನೀಲಮ್ಮ,ಅಶ್ವಿನಿ ಹೆಳವರ್ ,
ಎಸ್ . ಲಕ್ಷ್ಮಿ , ಶೋಭಾ ರವರನ್ನು ಮೈಸೂರು ಮಲ್ಲಿಗೆ ಗಿಡ ನೀಡಿ ಸನ್ಮಾನಿಸಿ ಗೌರವಿಸಿ ಅಪಘಾತ ವಿಮೆ ಬಾಂಡ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಂ,ವೀಣಾಶ್ರೀ,ನೇವಲ್,ನೇಹ,ಕುಮಾರ್ ಗೌಡ,ಸಂಜಯ್,ಶ್ರೀನಿವಾಸ್ (ರಾಶಿ),ಉದ್ಯಮಿ ನಂದೀತ ಕುಮಾರ್,ಸೇರಿದಂತೆ ಟ್ರಸ್ಟ್ ನ ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *