ಸವಾಲಿನ_ಸಾಧನೆಗೆ_ತಾಳ್ಮೆಯೇ_ಭೂಷಣ

 

#ಟಿಕೆಟ್_ಟು_ಕ್ರಿಕೆಟ್ ..!

#Ticket_To_Cricket…!

#ಸವಾಲಿನ_ಸಾಧನೆಗೆ_ತಾಳ್ಮೆಯೇ_ಭೂಷಣ..!
#pks

                  ಕೆಲವು ನಾಯಕರೇ ಹಾಗೆ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿಬಿಡುತ್ತಾರೆ.. ಇದಕ್ಕೆ ಕಾರಣ ಅಂತಹವರ ಪಾರದರ್ಶಕ ಸಾಧನೆಯ ಬದುಕು.. ಇಂತಹ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿದ್ದರೂ ಅಂತಹ ವ್ಯಕ್ತಿತ್ವಕ್ಕೆ ಗೌರವಪೂರ್ವಕ ಹಾರೈಕೆ ಇದ್ದೇ ಇರುತ್ತೆ.. ಅಂತಹ ಮಹಾನ್ ಸಾಧಕರಲ್ಲಿ ಒಬ್ಬ ಕ್ರಿಕೆಟ್ ಲೋಕದ ನಕ್ಷತ್ರ… ಆತನೇ ಮಹೇಂದ್ರ ಸಿಂಗ್ ದೋನಿ..

                  ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಅರಿದುಕೊಡುತ್ತಿದ್ದ ಯುವಕ ಆದಾಗಲೆ ಕ್ರಿಕೆಟ್ ಆಡುವ ಕನಸು ಕಂಡಿದ್ದ.. ಇದಕ್ಕೆ ಅವನು ಬಾಲ್ಯದಲ್ಲೇ ಬ್ಯಾಟ್ ಹಿಡಿದ ಶೈಲಿಯೇ ಪ್ರೇರೆಪಿಸಿತ್ತು ಅನ್ನುತ್ತೆ.. ಕನಸು ಕಂಡಷ್ಟಕ್ಕೆ ಎಲ್ಲಾ ಮುಗಿಯಿತು ಅಂತಲ್ಲ ಅದಕ್ಕೆ ಪರಿಶ್ರಮದ ಬೆವರನ್ನ ದೇಣಿಗೆಯಾಗಿ ನೀಡಬೇಕಿತ್ತು..

                  ಕ್ರಿಕೆಟ್ನ ಚುಟುಕು ಆಟಗಳಿಂದ ಎಲ್ಲರ ಗಮನಸೆಳೆದಿದ್ದ ಮಹೇಂದ್ರ 2004 ಡಿಸೆಂಬರ್ 24ರಲ್ಲಿ ಬ್ಲೂ ಜೆರ್ಸಿ ಧರಿಸಿ ಬಾಂಗ್ಲಾದೇಶದ ವಿರುದ್ಧ ಸೆಣಸಲು ಬ್ಯಾಟ್ ಹಿಡಿದೇ ಬಿಟ್ಟ.. ಆವತ್ತು ಹಿಡಿದ ಬ್ಯಾಟ್ ಸಾಧನೆಯ ಶಿಖರವನ್ನ ಏರಿಸಿ ವಿಶ್ವವಿಖ್ಯಾತಿ ಗಳಿಸಿಕೊಟ್ಟಿದ್ದು ಈಗ ಇತಿಹಾಸ..

              2004ರಲ್ಲಿ ಜೆರ್ಸಿ ನಂಬರ್ 7 ಅನ್ನ ತೊಟ್ಟು ಅಂತರಾಷ್ಟ್ರೀಯ ಕ್ರಿಕೆಟ್ ಯಾನ ಆರಂಭಿಸಿದಾಗ ಮಹೇಂದ್ರ ಸಿಂಗ್ ಗೆ ಅಭಿನಂದನೇ ಕೋರಿದ್ದು.. ಕ್ರಿಕೆಟ್ ದಿಗ್ಗಜರಾದ ದಾದಾ ಗಂಗೂಲಿ, ಗೋಡೆ ದ್ರಾವಿಡ್, ಮೈಸೂರು ಎಕ್ಸ್‌ಪ್ರೆಸ್ ಅನಿಲ್ ಕುಂಬ್ಳೆ, ಮಾಸ್ಟರ್ ಬ್ಲಾಸ್ಟರ್ ಸಚಿನ್, ಬಜ್ಜಿ ಹರ್ಭಜನ್, ಸಿಕ್ಸರ್ ಕಿಂಗ್ ಯುವರಾಜ್, ಜಾಹಿರ್ ಖಾನ್ ಹಾಗೂ ಎಂಟೆದೆ ಬಂಟ ಸೆಹ್ವಾಗ್.. ಇಂತ ಧುರಿಣರ ಹಾರೈಕೆ ಏನೋ ದೋನಿಯ ಅಂಗಳ ಯುದ್ಧದಲ್ಲಿ ದಾಖಲೆಯ ಮಾಲೆ ಧರಿಸಲು ಕಾರಣವಾಯ್ತು ಅನ್ಸುತ್ತೆ.. ಅದು ಯಾವ ಮಟ್ಟಿಗೆ ಎಂದರೆ 2011 ರಲ್ಲಿ ನಡೆದ ವಿಶ್ವಕಪ್ ನಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆಯೋ ಮೂಲಕ 30 ವರ್ಷಗಳಿಂದ ಭಾರತದ ಪಾಲಿಗೆ ಮರಿಚಿಕೆಯಾಗಿದ್ದ ವಿಶ್ವಕಪ್ ಅನ್ನ ಎತ್ತಿ ಹಿಡಿಯುಷ್ಟಾಗಿತ್ತು ಎನ್ನಬಹುದು..

                  2005 ರಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಭಾರಿದಾಕ್ಷಣ ರಾತ್ರೋರಾತ್ರಿ ದೋನಿ ಹೆಸರು ಎಲ್ಲರ ಬಾಯಲ್ಲೂ ಹರಿದಾಡುವಂತೆ ಮಾಡಿತು.. ಬ್ಯಾಟ್ ಬೀಸುತ್ತಲೆ. ಕೀಪರ್ ಆಗಿ ಸ್ಟಂಪ್ ಹೊಡೆಯುತ್ತಲೇ ಎಲ್ಲರ ಮನದ ನದಿಯಲ್ಲಿ ದೋನಿ ತೇಲಾಡಿದ್ದಂತು ಸುಳ್ಳಲ್ಲಾ..

                  ದೋನಿ ತನ್ನ 16 ವರ್ಷದ ವೃತ್ತಿ ಜೀವನದಲ್ಲಿ 350 ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದಾರೆ.. ಇದರಲ್ಲಿ 332 ಪಂದ್ಯಗಳಲ್ಲಿ ನಾಯಕನಾಗಿ ಆಡಿದ ಕೀರ್ತಿ ದೋನಿಗೆ ಸಲ್ಲುತ್ತದೆ.. ಇನ್ನ ಗಂಗೂಲಿ, ಅನಿಲ್ ಕುಂಬ್ಳೆ, ದ್ರಾವಿಡ್ ನಾಯಕತ್ವವನ್ನ ತೆಜಿಸಿದ ಮೇಲೆ ಯಾರೂ ನಾಯಕತ್ವವನ್ನ ವಹಿಸಿಕೊಳ್ಳಲು ಸಿದ್ಧರಿಲ್ಲದ ಸಮಯದಲ್ಲಿ ಟೀಂ ಇಂಡಿಯಾದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದು ನಿಜಕ್ಕೂ ಅಚ್ಚರಿಯ ಜತೆಗೆ ಸಾಹಸವೇ ಸರಿ.. ಈ ನಡುವೆ ಸೆಹ್ವಾಗ್, ಸಚಿನ್ ರಂತ ಅನುಭವಿ ಆಟಗಾರರನ್ನ ನಿಭಾಯಿಸಿದ ಪರಿ ಸುಲಭವಾಗಿ ಹೇಳಿಬಿಡಬಹುದಾದ ಮಾತಂತು ಅಲ್ಲ..

                ದೋನಿ ತನ್ನ ನಾಯಕತ್ವದ ಸುಧೀರ್ಘ ಪಯಣದಲ್ಲಿ ಮಾಡಿದ ದಾಖಲೆಗಳು ಎಲ್ಲರ ಎದೆ ಝಲ್ ಎನಿಸದೆ ಇರದು.. 2007 ರಲ್ಲಿ ಐಸಿಸಿ ಟಿಟ್ವಂಟಿ ವಿಶ್ವಕಪ್, 2011 ರಲ್ಲಿ ಏಕದಿನ ವಿಶ್ವಕಪ್ ಹಾಗು 2013 ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯನ್ನ ಗೆದ್ದು ಟೀಂ ಇಂಡಿಯಾ ಕೀರ್ತಿ ಪತಾಕೆಯನ್ನ ಜಗದ್ವಿಖ್ಯಾತಿ ಗಳಿಸಿದರು.. ವಿಕೆಟ್ ಕೀಪರ್ ಆಗಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 195 ಸ್ಟಂಪ್ ಮಾಡಿದ್ದಾರೆ.. ದೋನಿ ವಿಕೆಟ್ ಹಿಂಭಾಗ ನಿಂತರೆ ಸಾಕು ಯಾರೆ ಬ್ಯಾಟ್ ಮಾಡಲು ಬೆಚ್ಚದೆ ಇರುತ್ತಿರಲಿಲ್ಲ.. ಇವರ ಸ್ಟಂಪ್ ವೇಗ ಹೇಗಿತ್ತು ಎಂದರೆ.. ಉಸ್ಸೆನ್ ಬೋಲ್ಟ್ ಓಟದ ವೇಗಕ್ಕೆ ಕಂಪೇರ್ ಮಾಡ್ತಿದ್ದರು.. ಇನ್ನ, 183 ರನ್ ಗಳಿಸೋ ಮೂಲಕ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.. ಹಾಗೆ ಟಿ20ಯಲ್ಲಿ ನಾಯಕನಾಗಿ 150 ಪಂದ್ಯಗಳನ್ನ ಗೆದ್ದ ಕೀರ್ತಿ ಇವರದ್ದೇ ಆಗಿದೆ.. ಇದೆಲ್ಲದರ ನಡುವೆ 2009ರಲ್ಲಿ ನಂಬರ್ 1 ಪಟ್ಟಕೆ ಏರಿಸಿದ್ದು ಮಹೇಂದ್ರ ಬಲಿಷ್ಠ ನಾಯಕತ್ವಕ್ಕೆ ಕನ್ನಡಿ ಎನ್ನಬಹುದು…

                  ಮಹೇಂದ್ರ ಸಿಂಗ್ ದೋನಿ ಆಟದ ವೈಖರಿಗೆ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಗೌರವಗಳು ಸಂದಿವೆ.. 2007-08ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ.. 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 2018ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ..

                 ಇಷ್ಟೆಲ್ಲಾ ದಾಖಲೆಗಳ ನಡುವೆ ದೋನಿಗೆ ವಿವಾದಗಳು ಸುತ್ತಿಕೊಳ್ಳದೆ ಬಿಡಲಿಲ್ಲ.. ತಂಡದಲ್ಲಿ ಸೆಹ್ವಾಗ್ , ಗಂಭೀರ್, ಯುವರಾಜ್ ಸಿಂಗ್ ಅವರಿಗೆ ಮಾನ್ಯತೆ ನೀಡಲಿಲ್ಲ ಎಂಬ ಕಳಂಕ ಅಂಟಿಕೊಂಡು ಅವರ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು.. ಇನ್ನ, 2009ರಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ಗೆ ದ್ವಿಶತಕ ಭಾರಿಸಲು ಕ್ರೀಸ್ ಬಿಡುತ್ತಿರಲಿಲ್ಲ ಎಂಬ ಕಪ್ಪುಚುಕ್ಕೆಯೂ ದೋನಿಯನ್ನ ಆವರಿಸಿತು.. ಈ ಒಂದು ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.. ಇನ್ನ ಸುರೇಶ್ ರೈನಾ, ರವೀಂದ್ರ ಜಡೆಜಾ ದೋನಿಯ ಹಿಂಬಾಲಕರೂ ಎಂದು ಹೀಯಾಳಿಸುತ್ತಿದ್ದರು.. ಹೀಗೆ ಸಾಕಷ್ಟು ವಿವಾದಗಳು ದೋನಿ ಬೆನ್ನಿಗೆ ಬಿದ್ದಿದ್ದು ಸುಳ್ಳಲ್ಲ..

              ಒಟ್ಟಾರೆ ಅಚಾನಕ್ ಆಗಿ ಟೀಂ ಇಂಡಿಯಾ ಪ್ರತಿನಿಧಿಸಿದ ದೋನಿ ಅಚ್ಚರಿಯಾಗಿ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.. ಕಾಕತಾಳೀಯವೆಂದರೆ ಮೊದಲ ಆಟದಲ್ಲಿ ದೋನಿ ರನ್ ಔಟ್ ಆಗಿದ್ದರು.. ಈಗ ಕೊನೆ ಪಂದ್ಯದಲ್ಲೂ ರನ್ ಔಟಾಗೊ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಘೋಷಿಸಿದ್ದಾರೆ.. ಏನೇ ಆದರೂ ಕ್ರಿಕೆಟ್ ನ ಎಲ್ಲಾ ರಂಗದಲ್ಲೂ ತಮ್ಮ ಚಾಕಚಕ್ಕತೆಯನ್ನ ಮೆರೆದ ದೋನಿ ಮುಂಬರುವ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ..

                    ಯಾವುದೇ ಆಡಂಬರವಿಲ್ಲದೆ ಅಂಗಳಕ್ಕೆ ಬಂದ ದೋನಿ.. ಯಾವುದೇ ಆಡಂಬರವಿಲ್ಲದೆ 74ನೇ ಸ್ವತಂತ್ರ ದಿನಾಚರಣೆಯಂದು ವಿದಾಯ ಹೇಳಿರುವುದು ಅವರ ಸರಳವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿದೆ.. ಲಾಕ್ ಡೌನ್ ಸಂದರ್ಭದಲ್ಲಿ ಸುಮ್ಮನೆ ಕೂರದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳೋ ಮೂಲಕ ಯುವ ಕೃಷಿಕರಿಗೆ ಚೈತನ್ಯ ತುಂಬಿದ್ದಾರೆ.. ಸಾಧಕನಾದವನಿಗೆ ಯಾವುದೆ ಹಮ್ಮುಬಿಮ್ಮು ಇರಬಾರದು ಎಂಬುದಕ್ಕೆ ನಿದರ್ಶನವಾಗಿದ್ದಾರೆ.. ಸಧ್ಯ ಕ್ರಿಕೆಟ್ ಗಷ್ಟೇ ವಿದಾಯ ಹೇಳಿರುವುದು.. ಆದರೆ ಅವರ ತಾಯಿ ಭಾರತಾಂಬೆ ಸೇವೆ ಮಾಡಲು ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.. ಅದೇನೆ ಇರಲಿ ಭಾರತೀಯ ಕ್ರಿಕೆಟ್ ರಂಗದ ನಾಯಕರಲ್ಲಿ ಕಪಿಲ್ ದೇವ್ ಬಿಟ್ಟರೆ ಮಹೇಂದ್ರ ಸಿಂಗ್ ದೋನಿಯ ಹೆಸರು ಚಿರಸ್ತಾಯಿಯಾಗಿ ಉಳಿಯಲಿದೆ.. ದೋನಿಯವರ ಕ್ರಿಕೆಟ್ ವಿದಾಯದ ಜೀವನ ಸುಖಕರವಾಗಿರಲಿ ಎಂಬುದು 130 ಕೋಟಿ ಭಾರತೀಯರ ಹಾಗೂ ವಿಶ್ವ ಕ್ರಿಕೆಟ್ ಪ್ರೇಮಿಗಳ ಹಾರೈಕೆಯಾಗಿದೆ..

#ಪ್ರಕಾಶ್_ಎಸ್_ನಂಜನಗೂಡು..

Leave a Reply

Your email address will not be published. Required fields are marked *