ಮೈಸೂರು:25 ಸೆಪ್ಟೆಂಬರ್ 2021
ನ@ದಿನಿ
ಪೌರಕಾರ್ಮಿಕರ ದಿನಾಚರಣೆ ಯಾಗಿದ್ದು, ಮೈಸೂರಿನ ಸಿಲ್ಕ್ ಫ್ಯಾಕ್ಟರಿ ವೃತ್ತದಲ್ಲಿರುವ ರಾಜೀವ್ ಗಾಂಧಿ ಕಾಲೋನಿಯ ಹತ್ತಿರ ಹಲವಾರು ಮಹಿಳಾ ಹಾಗೂ ಪುರುಷ ಪೌರಕಾರ್ಮಿಕರಿಗೆ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ನವೀನ್ ಕುಮಾರ್ ಅವರು,ಹೆಂಗಸರಿಗೆ ಸೀರೆಗಳನ್ನು ಹಾಗೂ ಗಂಡಸರಿಗೆ ಉಡುಪುಗಳನ್ನು ನೀಡಿ, ಗೌರವ ಸಲ್ಲಿಸಿದರು.
ಮೈಸೂರಿಗೆ ಸ್ವಚ್ಚತೆಯ ಗರಿ ಸಿಕ್ಕಿದೆ ಎಂದರೆ ಅದು ಪೌರ ಕಾರ್ಮಿಕರ ಶ್ರಮದಿಂದ , ಅವರನ್ನು ಮೈಸೂರಿನಲ್ಲಿ ಪೌರ ಕಾರ್ಮಿಕರ ದಿನದಂದೆ ಬಿಜೆಪಿಯ ಮಹಾಪೌರ ರಿದ್ದು, ಪೌರಕಾರ್ಮಿಕರಿಗೆ ಯಾವುದೇ ಕಾರ್ಯಕ್ರಮ ಮಾಡದೆ,ಕಡೆಗಣಿಸಿರುವುದು ಅತ್ಯಂತ ನೋವಿನ ವಿಚಾರ ಎಂದರು.
ಮುಂದುವರೆದು,ಇವತ್ತಿನ ಕೊರೊನಾ, ಡೆಂಗ್ಯೂ ಹಾಗೂ ಮತ್ತಿತರ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವ ಮತ್ತು ಶ್ಲಾಘನೀಯವಾಗಿದೆ. ಪೌರಕಾರ್ಮಿಕರ ಕೊಡುಗೆಯಿಂದ ಇಂದು ಮೈಸೂರು ಸ್ವಚ್ಛನಗರಿ ಎಂದು ಬಿರುದು ಪಡೆದಿದ್ದ ಹೊರತು ಬಾಯಲ್ಲಿ ಸ್ವಚ್ಛಭಾರತ್ ಎಂದು ಘೋಷಣೆ ಮಾಡಿ ಪೌರಕಾರ್ಮಿಕರನ್ನು ನಿರ್ಲಕ್ಷಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಇದೇ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಎಂ ರಾಜೇಶ್, ಮೈಸೂರು ಬಸವಣ್ಣ,ದೇವರಾಜ ಅರಸು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೈಲ್ವಾನ್ ಸುನಿಲ್, ಮಹೇಶ್, ಕಿರಣ್ ಇನ್ನಿತರರು ಉಪಸ್ಥಿತರಿದ್ದರು.