ಒಡೆಯರ ಮನೆತನಕ್ಕೂ ತಟ್ಟಿದ ಲಾಕ್ ಡೌನ್ ಬಿಸಿ,ಏರಿಕೆ ಕಂಡ ಅರಮನೆ ಪ್ರವೇಶ ದರ

 

ಮೈಸೂರು:25 ಸೆಪ್ಟೆಂಬರ್ 2021

ಸ್ಟೋರಿ ಬೈ:ನ@ದಿನಿ

                ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೆ ಇನ್ನೂ 12 ದಿನಗಳಿವೆ.ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ
ಅರಮನೆ ಪ್ರವೇಶ ದರ ಏರಿಕೆ ಬಿಸಿ ತಟ್ಟಿದೆ.

                 ಹೌದು ,ಪ್ರವಾಸಿಗರಿಗೆ ಪ್ರೀಯವಾದ ಮೈಸೂರು ಅರಮನೆ ಪ್ರವೇಶ ದರ ಹೆಚ್ಚಿಸಲಾಗಿದೆ ಎಂದು ಅರಮನೆ ಮಂಡಳಿ ತಿಳಿಸಿದೆ.ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಇದೀಗ ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.

                     ಅರಮನೆ ಪ್ರವೇಶ ಟಿಕೆಟ್ ದರವನ್ನ ಅರಮನೆ ಮಂಡಳಿ ಹೆಚ್ಚಳ ಮಾಡಿದ್ದು ದರ ಪಟ್ಟಿ ಇಂತಿದೆ.

ಅರಮನೆ ಪ್ರವೇಶ ದರ 70 ರೂ. ನಿಂದ 100 ರೂ.ಗೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೇಯ ದರ 30 ರೂಇದುದ್ದನ್ನು  ಮಕ್ಕಳಿಗೆ ಹೊಸ ದರ 50 ರೂ ಮಾಡಲಾಗಿದೆ.ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50ರೂ ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂಗೆ  ನಿಗದಿ ಮಾಡಲಾಗಿದೆ.

                ಒಟ್ಟಾರೆ ಹೇಳೋದಾದರೇ ಕೊರೋನಾ ಲಾಕ್ ಡೌನ್ ಜನ ಸಾಮಾನ್ಯರಿಗಲ್ಲದೇ ಅರಸರ ಮನೆತನಕ್ಕೂ ಬಿಸಿ ತಟ್ಟಿದೆ.ಲಾಕ್ ಡೌನ್ ನಿಂದ ಅರಮನೆ ಮಂಡಳಿಯ ಆದಾಯ ಕುಸಿತ ಕಂಡಿದ್ದನ್ನು ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *