ನಂದಿನಿ ಮನುಪ್ರಸಾದ್ ನಾಯಕ್

ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯದ ಅತೀ ದೊಡ್ಡ ಮೂರು ದಿನಗಳ(12,13,14-06-2026) ಸೀರೆ ಮೇಳ ಮತ್ತು ಬೆಳ್ಳಿ ಆಭರಣ ಮೇಳವನ್ನು ಚಲನಚಿತ್ರನಟಿ ಕಾರುಣ್ಯಗೌಡ ರವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದು ಖ್ಯಾತ ಚಿತ್ರನಟಿ ತಾರಾ ಅನುರಾಧಾ,ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉದ್ಘಾಟಿಸಿದರು.ಈ ವೇಳೆ ಸೀರೆ ಮೇಳದ ಆಯೋಜಕರಾದ ಕಾರುಣ್ಯಗೌಡ ರವರು ಉಪಸ್ಥಿತರಿದ್ದರು.
