ಮಕ್ಕಳಿಲ್ಲದ ದಂಪತಿಗಳಿಗೆ “ಸಂತಸ ” ವುಮೆನ್ಸ್ ಮತ್ತು ಫರ್ಟಿಲಿಟಿ ಕ್ಲಿನಿಕ್ ಉದ್ಘಾಟನೆ‌

ಮೈಸೂರು:2 ಡಿಸೆಂಬರ್ 2021

ನಂದಿನಿ ಮೈಸೂರು

ಸಂತಸ ವುಮೆನ್ಸ್ ಮತ್ತು ಫರ್ಟಿಲಿಟಿ ಕ್ಲಿನಿಕ್‌ನ ಉದ್ಘಾಟನೆ ಹಾಗೂ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ , ಸ್ಕ್ಯಾನಿಂಗ್ ಹಾಗೂ ಸಲಹ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಜಯಲಕ್ಷ್ಮೀಪುರಂನಲ್ಲಿರುವ ಕ್ಲೀನಿಕ್ ಅನ್ನು
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ , ವಿಶ್ವದಏಕೈಕ ಸಂಸ್ಕೃತ ಪತ್ರಿಕೆಯ ಸಂಪಾದಕರಾದ ಜಯಲಕ್ಷ್ಮಿ ಹಾಗೂ ಮೈಸೂರಿನ ಜಿಲ್ಲೆಯ ಪೊಲೀಸ್ ಉಪ ವರಿಷ್ಠಾಧಿಕಾರಿಗಳಾದ
ಗೀತಾ ಪ್ರಸನ್ನ.ಎಂ ಉದ್ಘಾಟಿಸಿದರು.

ಈ ಕ್ಲಿನಿಕ್ ಮಹಿಳೆಯರ ನಾನಾ ಸಮಸ್ಯೆಗಳಿಗೆ ಹದಿಹರಿಯದ ಹೆಣ್ಣುಮಕ್ಕಳ ಏರು – ಪೇರಾದ ಮುಟ್ಟಿನ ಸಮಸ್ಯೆಯಿಂದ , ಮನೋಪಾಸ್ ಹತ್ತಿರದ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸೌಲಭ್ಯದೊಂದಿಗೆ ಸ್ಪಂದಿಸುತ್ತಿದೆ.ದಂಪತಿಗಳು ಚಿಕಿತ್ಸೆ ಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸಂತಸ ಸಂಸ್ಥೆ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ ಸಲಹೆ , ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು , ಈ ಶಿಬಿರದಲ್ಲಿ ನೊಂದಾಯಿಸಿದ ದಂಪತಿಗಳಿಗೆ ರಿಯಾಯಿತಿದರದಲ್ಲಿ ಐ.ವಿ.ಎಫ್ ನೀಡಲಾಗುತ್ತದೆ ಎಂದು ಸಂತಸ ಸಂಸ್ಥೆ ತಿಳಿಸಿದೆ.

ಕ್ಲಿನಿಕ್‌ನ ನಿರ್ದೇಶಕರಾದ ಡಾ.ಪ್ರಕಾಶ್, ಡಾ.ಸೌಮ್ಯ ದಿನೇಶ್‌,ನಿರ್ದೇಶಕರಾದ ಡಾ . ಯೋಗಿತಾ ರಾವ್ , ನಿರ್ದೇಶಕರಾದ ಡಾ.ಮಷ್ಪಲತಾ ಎನ್.ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *