ಚುನಾವಣೆಯಲ್ಲಿ ಹಣದ ಹೊಳೆ ಅಣೆ, ಪ್ರಮಾಣಕ್ಕೆ ಹಿಂದೇಟು ಹಾಕಿ 3 ಪಕ್ಷದ ಅಭ್ಯರ್ಥಿಗಳು,ಅಣೆ ಮಾಡಿಯೇ ಬಿಟ್ಟ ವಾಟಾಳ್ ನಾಗರಾಜ್

ಮೈಸೂರು:3 ಡಿಸೆಂಬರ್ 2021

ನಂದಿನಿ

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಹಣ ನೀಡುವುದಿಲ್ಲ ಎಂದು ದೇವರ ಮೇಲೆ ಅಭರ್ಥಿಗಳೆಲ್ಲರೂ ಪ್ರಮಾಣ ಮಾಡುತ್ತೀರಾ ಎಂಬ ಮಾದ್ಯಮದ ಪ್ರಶ್ನೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಮೌನ ಕ್ಕೆ ಶರಣಾಗಿ ಅಣೆ, ಪ್ರಮಾಣಕ್ಕೆ ಹಿಂದೇಟು ಹಾಕಿದ ಘಟನೆ ನಡೆಯಿತು.

ನಗರದ ಪತ್ರಕರ್ತರ ಭವನದಲ್ಲಿ ವಿಧಾನ ಪರಿಷತ್ ಅಭ್ಯರ್ಥಿಗಳೊಂದಿಗೆ ಮಾದ್ಯಮ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಯಾವುದೇ ಮತದಾರರಿಗೆ ಹಣ ನೀಡುವುದಿಲ್ಲ ಎಂದು ಅಣೆ ಮಾಡುವಿರಾ ಎಂಬ ಮಾದ್ಯಮದ ಪ್ರಶ್ನೆಗೆ
ನಾನು ಯಾವ ದೇವರ ಮುಂದೆ ಬೇಕಾದರೂ ಮತದಾರರಿಗೆ ಹಣ ಹಂಚೋದಿಲ್ಲವೆಂದು ಪ್ರಮಾಣ ಮಾಡುತ್ತೇನೆಂದು ವಾಟಾಳ್ ನಾಗರಾಜ್ ಹೇಳಿದರು.

ಇನ್ನೂ ಬಿಜೆಪಿಯ ಕೌಟಿಲ್ಯ ರಘು ಮಾತನಾಡಿ, ವ್ಯವಸ್ಥೆಯನ್ನು ಮೀರಿ ಆತ್ಮ ವಂಚನೆ ಮಾಡಿಕೊಂಡು ಅಣೆ ಪ್ರಮಾಣ ಮಾಡಲ್ಲ. ಬದಲಿಗೆ ನಾವೆಲ್ಲರೂ ನಾಮಪತ್ರ ಸಲ್ಲಿಕೆ ವೇಳೆ ಸಂವಿಧಾನದ ಆಶಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದು, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದರು.
ಇನ್ನೂ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಗ್ಗೆ ಉತ್ತರಿಸಲು ನಿರಾಕರಿಸಿದರು.
ಇದಕ್ಕೂ ಮೊದಲು ಪ್ರಾರಂಭಿಕವಾಗಿ ಮಾತನಾಡಿ,
ನನಗಿದು ಮೊದಲನೇ ಚುನಾವಣೆಯಾಗಿದ್ದು,
ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಗುರ್ತಿಸಿ ಮತ ನೀಡಿ ಎಂದು ಮನವಿ ಮಾಡುತ್ತಿದ್ದೇನೆಂದು ಕಾಂಗ್ರೆಸ್ ಅಭ್ಯರ್ಥಿ ಡಾ ಡಿ ತಿಮ್ಮಯ್ಯ ತಿಳಿಸಿದರು.
ಹಣದ ಖರ್ಚು ವೆಚ್ಚಗಳಿಲ್ಲದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ.
ಮತ ಬಿಕರಿಗಿಲ್ಲವೆಂಬ ಸಂದೇಶವನ್ನು ಮತದಾರರು ನೀಡಲೆಂದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಕೋರಿದರು.

ಬಿಜೆಪಿಯ ಕೌಟಿಲ್ಯ ರಘು

ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಸ್ತಾಪಿಸಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ.
ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂದರು.
ಬಿಜೆಪಿ ಅಭ್ಯರ್ಥಿ ಕೌಟಿಲ್ಯ ರಘು ಮಾತನಾಡಿ,
ನಾನು ತಳ ಹಂತದಿಂದ ಬಂದಿದ್ದೇನೆ.
ಬಹಳ ಕಷ್ಟಪಟ್ಟು ಹಂತ ಹಂತವಾಗಿ ಮುಂದೆ ಬಂದಿದ್ದೇನೆ.
ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದೇನೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ‌.
ಪ್ರಮುಖವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯತಿ ಸದಸ್ಯರಿಗೆ ಕೇಂದ್ರ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನ ಮನವರಿಕೆ ಮಾಡಿಕೊಡುತ್ತಿದ್ದೇನೆ.
ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತೇನೆ.
ನಾನು ಆಯ್ಕೆಯಾದರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪರವಾಗಿ ಧ್ವನಿಯಾಗುತ್ತೇನೆ ಎಂದು ಹೇಳಿದರು.
ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ‌.
ಸೋತರೂ ಕಳೆದ ಆರು ವರ್ಷಗಳಿಂದಲೂ ಗ್ರಾಮ ಪಂಚಾಯತಿ ಸದಸ್ಯರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ.
ಕಳೆದ ಬಾರಿಯ ಸೋಲಿನ ಕಹಿಯನ್ನು ಈ ಬಾರಿ ದೂರ ಮಾಡುವ ಮೂಲಕ ನನ್ನನ್ನು ಆಯ್ಕೆ ಮಾಡಿ.
ಪ್ರತಿ ಗ್ರಾಮ ಪಂಚಾಯತಿ ಸದಸ್ತರು ಚಲಾಯಿಸುವ ಒಂದು ಮತ 600 ಮತಗಳಿಗೆ ಸಮನಾಗಿದೆ.
ಅಷ್ಟು ಮೌಲ್ಯವುಳ್ಳ ಮತವನ್ನು ನನಗೆ ನೀಡುವ ಮೂಲಕ ಮತ ಬಿಕರಿಗಿಲ್ಲ ಎಂಬ ಸಂದೇಶವನ್ನು ನೀಡಲು ಗ್ರಾಮ ಪಂಚಾಯತಿ ಸದಸ್ಯರು ಮುಂದಾಗಲಿ ಎಂದರು.

ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮಾತನಾಡಿ, ನಾನು ಗ್ರಾಮ ಪಂಚಾಯತಿ ಮಟ್ಟದಿಂದ ಕೆಲಸ ಮಾಡುತ್ತಾ ರಾಜಕೀಯಕ್ಕೆ ಬಂದಿದ್ದೇನೆ.
ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ, ಎಪಿಎಂಸಿ ಅಧ್ಯಕ್ಚನಾಗಿ ಸೇವೆ ಸಲ್ಲಿಸಿರುವ ಅನುಭವ ನನಗಿದೆ.
ನನಗೆ ರಾಜಕೀಯ ಅನುಭವದ ಕೊರತೆಯಿಲ್ಲ.
ಹಾಗಾಗಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅನುದಾನ ಬರಲು ಶ್ರಮಿಸುತ್ತೇನೆ‌.
ನಾನು ಸೈನಿಕನಾಗಿ ಗಡಿಯಲ್ಲಿ ದೇಶವನ್ನು ಕಾಯ್ದಿದ್ದೇ‌ನೆ.
ಅನ್ನ ನೀರು ಇಲ್ಲದೇ ದಿನಗಳನ್ನು ದೂಡಿದ್ದೇನೆ‌.
ನಾನು ಆಯ್ಕೆಯಾದರೆ ದೇಶದ ಗಡಿ ಕಾಯ್ದಿರುವಂತೆಯೇ, ಗ್ರಾಮಪಂಚಾಯತಿಗಳ ಹಿತ ಕಾಯುತ್ತೇನೆ ಎಂದರು.

ಸಂವಾದದಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಮಾತನಾಡಿ, ನಾನು 1967ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದೆ. ಆಗ ನನ್ನ ವಯಸ್ಸು ಕೇವಲ 25 ವರ್ಷ ಆಗಿತ್ತು.
ನನ್ನ ಇದುವರೆಗಿನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇ‌ನೆ.
ನನ್ನಂತಹವನು ಶಾಸನ ಸಭೆಯಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಗ್ರಾಮ ಪಂಚಾಯತಿ ಸದಸ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅವರಿಗೆ ನೀಡುತ್ತಿರುವ ಗೌರವ ಧನ ಯಾತಕ್ಕೂ ಸಾಕಾಗುತ್ತಿಲ್ಲ.
ಆದರೆ ಶಾಸಕರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಸಂಸದರು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರಿಗೆ 5 ಸಾವಿರ ಗೌರವ ಧನ ಕೊಟ್ಟರೆ ಸಾಕು. ಚುನಾವಣೆಯಲ್ಲಿ ಒಂದೇ ಓಟ್ ಕೊಡಿ ಎನ್ನುತ್ತಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳು ಕೇಳುತ್ತಿರುವ ಒಂದು ಓಟಿ‌ನ ಜೊತೆಗೆ ಎರಡನೇ ಓಟನ್ನು ವಾಟಾಳ್ ನಾಗರಾಜ್ ಗೆ ಕೊಡಿಸಿ ಎಂದು ಹೇಳಿದರು.

ವಾಟಾಳ್ ನಾಗರಾಜ್ ಆಡಿದ ಮಾತಿಗೆ ಉಳಿದ ಮೂವರು ಅಭ್ಯರ್ಥಿ ಗಳು ನಕ್ಕರು.
ವಾಟಾಳ್ ಮಾತಿನಿಂದ ನಗೆಗಡಲಲ್ಲಿ ತೇಲಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ ಡಿ ತಿಮ್ಮಯ್ಯ, ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ, ಜೆಡಿಎಸ್ ಅಭ್ಯರ್ಥಿ ಸಿ ಎನ್ ಮಂಜೇಗೌಡ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್ ನಾಗರಾಜ್ ಸಂವಾದದಲ್ಲಿ ಭಾಗಿಯಾಗಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಟಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *