ಅಂಗವಿಕಲರಿಗೆ ಪರಿಕರಗಳನ್ನು ವಿತರಿಸಿದ ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ

ಮೈಸೂರು:5 ಡಿಸೆಂಬರ್ 2021

ನಂದಿನಿ 

ಬನ್ನೂರಿನ ಸಮಾಜ ಸೇವಕರು ,ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಅರಕೆರೆ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕಡು ಬಡ ಕುಟುಂಬದ ಅಂಗವಿಕಲರಾದ ಕಿರಣ್ ರವರಿಗೆ ಮತ್ತು ಕೊಡುಗಳ್ಳಿಯ ಮಹಾದೇವು ರವರಿಗೆ ಹೊಸ ಬಟ್ಟೆ,ಧನ ಸಹಾಯ,ಅಂಗವಿಕಲರಿಗೆ ಪರಿಕರಗಳನ್ನು ವಿತರಣೆ ಮಾಡಿದ್ದರು.

ಇಂದು ವಿಶ್ವ ಅಂಗವಿಕರ ದಿನಾಚರಣೆ ಪ್ರಯುಕ್ತ ಕಿರಣ್ ಮತ್ತು ಕೊಡುಗಳ್ಳಿ ಮಹದೇವ ರವರ ಕಷ್ಟವನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದರಿಂದ ಅವರಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಮಹೇಂದ್ರ ಸಿಂಗ್ ಕಾಳಪ್ಪ ನವರು ಅವರಿಗೆ ಸಹಾಯ ಮಾಡಿದ್ದಾರೆ.

ಕಿರಣ್ ರವರು 6ನೇ ವಯಸ್ಸಿನಲ್ಲೇ ಅಪಘಾತದಲ್ಲಿ ತಮ್ಮ ಕಾಲನ್ನು ಕಳೆದು ಕೊಂಡರು ಆಗ ಅವರಿಗೆ ಯಾರು ಸಹಾಯಕ್ಕೆ ಬರಲಿಲ್ಲ ಅವರ ಮನೆಯ ಪರಿಸ್ಥಿತಿಯನ್ನು ಮನಗಂಡ ಕಾಳಪ್ಪ ನವರು ಸಹಾಯ ಮಾಡಿದ್ದಾರೆ.ಇನ್ನು ಮಹಾದೇವು ರವರು ಚಿಕ್ಕವಯಸ್ಸಿನಲ್ಲೇ ಕಾಲುಗಳ ಸ್ವಾಧೀನ ಕಳೆದುಕೊಂಡು ದೇವಸ್ಥಾನಗಳಿಗೆ ತೆರಲ್ಲಿ ಭಿಕ್ಷಾಟಣೆ ಮಾಡುತಿದ್ದರು.ಇಂತವರಿಗೆ ಕಳೆದ 5ವರ್ಷಗಳಿಂದ ಕಾಳಪ್ಪ ನವರು ಸಹಾಯಮಾಡಿ ಕೊಂಡು ಬರುತಿದ್ದರೇ.
ಬಳಿಕ ಮಾತನಾಡಿದ ಕಾಳಪ್ಪ ನವರು ಇಂದು ವಿಶ್ವ ಅಂಗವಿಕರ ದಿನಾಚರಣೆ ಪ್ರಯುಕ್ತ ನಾನು ಕಿರಣ್ ಮತ್ತು ಕೊಡುಗಳ್ಳಿ ಮಹಾದೇವು ರವರನ್ನು ಗುರುತಿಸಿ ಅವರಿಗೆ ಅರ್ಥಿಕವಾಗಿ ಬೇಕಾದ್ದಂತಹ ಪರಿಕರಗಳು,ಬಟ್ಟೆ,ಅವರ ಜೀವನೋಪಾಯಕ್ಕೆ ಬೇಕಾಗುವಂತಹ ಆರ್ಥಿಕ ಧನ ಸಹಾಯವನ್ನು ಮಾಡಿದ್ದೇನೆ ಭಗವಂತ್ ಇವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಆರ್ಥಿಕ ನೆರವನ್ನು ಕರುಣಿಸಲಿ ನನ್ನತೆ ಇನ್ನು ಅನೇಕರು ಇಂತಹ ಕುಟುಂಬಗಳಿಗೆ ಸಹಾಯವನ್ನೂ ಮಾಡಲಿ ಇವರ ಕುಟುಂಬ
ಪರಿಸ್ಥಿತಿಯನ್ನು ಕಂಡು ನಾನು ಇವರಿಗೆ ಸಹಾಯ ಮಾಡುತ್ತಿದ್ದೇನೆ ಎಂದರು.

ಇನ್ನೂ ಇದೇ ಸಂದರ್ಭದಲ್ಲಿ ಅಂಗವಿಕರದ ಕಿರಣ್ ಮತ್ತು ಕೊಡುಗಳ್ಳಿ ಮಹಾದೇವು,ದೇವೇಗೌಡ,ದೇವಮ್ಮ,ರಮೇಶ್ ಸಿರಾವಿ, ರವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *