ಟಿ.ನರಸೀಪುರ:5 ಡಿಸೆಂಬರ್ 2021
ನಂದಿನಿ
2023 ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ ನಾನು ಹಾಕಿಕೊಂಡಿರುವ ಪಂಚರತ್ನ ಯೋಜನೆಗಳು ಜಾರಿಯಾಗದಿದ್ದರೆ ಜೆಡಿಎಸ್ ಪಕ್ಷ ಮುಚ್ಚುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಿನ್ನಲೆ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಪರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತುರುಗನೂರು ಗ್ರಾಮದ ಲಕ್ಷ್ಮಿವೆಂಕಟೇಶ್ವರ ಭವನದಲ್ಲಿ ಮತಯಾಚಿಸುದರು.
ರೈತರು ಮಹಿಳೆಯರು ಬಡವರಿಗೆ ಅನೇಕ ಯೋಜನೆಗಳನ್ನ ಹಾಕಿದ್ದೇನೆ.
ಪಂಚರತ್ನ ಯೋಜನೆಯ ಮೂಲಕ ಕರ್ನಾಟಕ ಅಭಿವೃದ್ಧಿಗೆ ಪೂರ್ವ ತಯಾರಿ ನಡೆಸಿದ್ದೇನೆ. ನೀವೆಲ್ಲರೂ ನನಗೆ ಬಹುಮತ ನೀಡಿ.
2023 ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡದಿದ್ದರೆ ಜೆಡಿಎಸ್ ಪಕ್ಷದ ಮುಚ್ಚುತ್ತೇನೆ ಎಂದಿದ್ದಾರೆ.