ಬಸವ ಮಾರ್ಗ ಪುನರ್ವಸತಿ ಕೇಂದ್ರದಲ್ಲಿ ದಿ.ನಟ ಪುನೀತ್ ಸ್ಮರಣಾರ್ಥ ಮಧ್ಯವರ್ಜನ ಶಿಬಿರ ,ರಕ್ತದಾನ,ನೇತ್ರದಾನ ಶಿಬಿರ

ಮೈಸೂರು:5 ಡಿಸೆಂಬರ್ 2021

ನಂದಿನಿ

ಬಸವ ಮಾರ್ಗ ಪುನರ್ವಸತಿ ಕೇಂದ್ರದಲ್ಲಿ ದಿ.ನಟ.
ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಮಧ್ಯವರ್ಜನ ಶಿಬಿರ ,ರಕ್ತದಾನ ಮತ್ತು ನೇತ್ರದಾನ ಶಿಬಿರ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ರವರು ದೀಪ ಬೆಳಗಿಸಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಹುಟ್ಟು ಉಚಿತ ಸಾವು ಖಚಿತ.ಜೀವನದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಮಹಾತ್ಮ ಗಾಂಧಿ ನಿಧನದ ನಂತರ ಪುನೀತ್ ನಿಧನದಲ್ಲಿ ಹೆಚ್ಚು ಜನ ಸೇರಿದ್ದರು. ಪುನೀತ್ ರವರ ಕೊಡುಗೆ ಅವರ ಸತ್ತ ನಂತರ ಜನರಿಗೆ ತಿಳಿದಿದೆ.ಪುನೀತ್ ಡಾ.ರಾಜ್ ಕುಮಾರ್ ರವರಂತೆ ತಮ್ಮ ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ‌.

ಇವತ್ತಿನ ಕಾರ್ಯಕ್ರಮದಲ್ಲಿ
75 ಜನ ರಕ್ತದಾನ ಮಾಡಲು ಮುಂದಾಗಿದ್ದಾರೆ.ಗೋಪಾಲ್ ಎಂಬ ಅಂಗವಿಕಲ ರಕ್ತದಾನ ಮಾಡಿದ್ದಾರೆ.ನಂತರ ತಮ್ಮ ದೇಹವನ್ನೇ ದಾನವಾಗಿ ಬರೆದುಕೊಟ್ಟಿದ್ದಾರೆ ಹೆಮ್ಮೆ ಎಂದೆನಿಸುತ್ತಿದೆ.ಪುನೀತ್ ರವರ ಜೀವನವನ್ನ ಯುವಕರು ಅಳವಡಿಸಿಕೊಳ್ಳಬೇಕು.
ಬಸವಣ್ಣನವರ 1200 ಜನರಿಗೆ ಕುಡಿತ ಬಿಡಿಸಿದ್ದಾರೆ.ಬಸವಣ್ಣನವರ ಋಣ ತೀರಿಸಬೇಕೆಂದರೇ
ನೀವು ಕುಡಿತದ ಚಟ ಬಿಟ್ಟು ಕುಟುಂಬದ ಜೊತೆ ಒಳ್ಳೆಯ ಜೀವನ ಸಾಗಿಸಿ.ಮತ್ತೊಬ್ಬ ರಿಗೆ ಕುಡಿಯಬೇಡಿ ಎಂದು ಹೇಳಬೇಕು.
ಬಸವಣ್ಣನವರ ಸೇವೆ ಹೀಗೆ ಮುಂದುವರೆಯಲಿ ಎಂದರು.

ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸಂಸ್ಥೆ , ಕೇಂದ್ರದಲ್ಲಿ ಮಾಡಿರುವ ವ್ಯವಸ್ಥೆ ,ಸುತ್ತಮುತ್ತಲಿನ ವಾತಾವರಣ,ವೈದ್ಯಕೀಯ ಸೌಲಭ್ಯ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.ಬಸವಣ್ಣನವರ ಕುರಿತು ತಮ್ಮದೇ ಶೈಲಿಯಲ್ಲಿ ಕವಿತೆ,ಕವನ ಬರೆದು ವೇದಿಕೆ ಮೇಲೆ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಸ್ಥಾಪಕ ಬಸವಣ್ಣ,ವೆಂಕಟೇಶ್, ವೈದ್ಯರು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *