ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ:ಎಚ್.ಎಲ್.ಯುಮುನಾ ಕರೆ

ಮೈಸೂರು:2 ಡಿಸೆಂಬರ್ 2021

ನಂದಿನಿ

ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಪ್ರತಿವರ್ಷದಂತೆ ಈ ವರ್ಷವು ಇಬ್ಬರಿಗೆ ‘ ಕನ್ನಡ ವಿಕಾಸ ರತ್ನ’ ಪ್ರಶಸ್ತಿ ನೀಡುತ್ತಿದೆ‌. ಇದರಲ್ಲಿ ಒಂದು ಪ್ರಶಸ್ತಿಯನ್ನು ಸಮುದಾಯದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವುದು. ಮತ್ತೊಂದು ಹೆಸರಿನಲ್ಲಿ ಆಂದೋಲನ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಸ್ಮರಣಾರ್ಥ ಸಮಾಜಕ್ಕಾಗಿ ದುಡಿದವರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಮುನಾ ತಿಳಿಸಿದರು.

ಈ ಬಾರಿ ವಿಶೇಷವಾಗಿ ೧೦ ಸಾವಿರ ನಗದನ್ನು ಸೇರಿಸಿ ಪ್ರಶಸ್ತಿ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಡಿ.೧೨ರೊಳಗೆ ವೇದಿಕೆಯ ವಿಳಾಸಕ್ಕೆ ಸಲ್ಲಿಸಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ ಮೊ.9902698623 ಅನ್ನು ಸಂಪರ್ಕಿಸುವಂತೆ ಕೋರಿದರು.

ಇದೇ ವೇಳೆ ಒಕ್ಕಲಿಗರ ಸಂಘದಲ್ಲಿ ಮಹದೇವು ಅವರು ಅನೇಕ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಜತೆಗೆ ಒಕ್ಕಲಿಗರ ಸಂಘಕ್ಕೆ ಅದರದೇ ಆದ ಗೌರವವಿದೆ. ಹೀಗಾಗಿ ಅಭ್ಯರ್ಥಿ ಗಳು ಈ ಹಿಂದಿನ ಅವಧಿಯ ಲೋಪದ ಬಗ್ಗೆ ಆರೋಪಿಸಯವ ಬರದಲ್ಲಿ ಸಂಘದ ಮೇಲೆ ಅಗೌರವ ತರುವ ಮಾತು ಆಡುವುದು ಬೇಡ ಎಂದರು.

ಜತೆಗೆ ಇಲ್ಲಿ ಆಯ್ಕೆಗೊಂಡವರು ರಾಜ್ಯ ಸಮಿತಿಗೆ ಸೇರುತ್ತಾರೆ. ಅಲ್ಲಿ ನಿರ್ದೇಶಕ ರ ಆಯ್ಕೆ ಆಗಲಿದೆ. ಆದರೆ, ಇಲ್ಲೇ ನಿರ್ದೇಶಕ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದಾರೆ. ಜತೆಗೆ ತಾವು ಆಯ್ಕೆಯಾದರೆ ಇಲ್ಲಿಗೆ ಆಸ್ಪತ್ರೆ ತರುತ್ತೇವೆ ಎಂಬೆಲ್ಲಾ ಮಾಹಿತಿ ಹೇಳುತ್ತಿದ್ದು, ಇಂತಹ ಸುಳ್ಳು ಭರವಸೆಗಳನ್ನು ಕೊಡಬೇಡಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *