ಮಳೆಯಿಂದ ಹನಿಗೊಳಗಾದ ಮನೆಗಳಿಗೆ ಪರಿಹಾರ ತಲುಪುತ್ತಿದ್ದೀಯಾ ಎಂಬುದನ್ನ ಖುದ್ದು ನಾನೇ ಪರಿಶೀಲನೆ ನಡೆಸುತ್ತಿದ್ದೇನೆ:ಆರ್ ಅಶೋಕ್

30 Views

ಮೈಸೂರು:1 ಡಿಸೆಂಬರ್ 2021

ನಂದಿನಿ ಮೈಸೂರು

ಮಳೆಯಿಂದ ಹನಿಗೊಳಗಾದ ಮನೆಗಳಿಗೆ ಪರಿಹಾರ ತಲುಪುತ್ತಿದ್ದೀಯಾ ಎಂಬುದನ್ನ ಖುದ್ದು ನಾನೇ ಪರಿಶೀಲನೆ ನಡೆಸುತ್ತಿದ್ದೇನೆ.ಎರಡು ಮೂರು ದಿನಗಳಲ್ಲಿ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಹಾಗೂ ತದನಂತರ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕಂದಾಯ ಸಚಿವರಾದ ಆರ್. ಅಶೋಕ್ ಅವರು ಬುಧವಾರ ಮೈಸೂರು ತಾಲ್ಲೂಕು ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ಮಳೆಯಿಂದ ಹಾನಿಗೀಡಾದ ಮನೆ ಜಾಗಗಳನ್ನು ಪರಿಶೀಲಿಸಿ ಮಾತನಾಡಿದರು.

ಇಂದು ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದೇನೆ. ಈ ಬಾರಿ ಅತಿ ಹೆಚ್ಚು ಮಳೆ ಹನಿಯಿಂದ ಬೆಳೆ ಹಾಗೂ ಮನೆ ಹನಿಗೊಳಗಾಗಿದೆ ಈಗಾಗಲೇ ಕೊಡಗು ಹಾಸನ ಮಂಡ್ಯ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಪ್ರವಾಸ ಮಾಡಿದ್ದೇನೆ .
ಮೈಸೂರು ಜಿಲ್ಲೆಯಲ್ಲಿ ಸುಮಾರು 273 ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿದೆ ಈಗಾಗಿ ಹಾನಿಗೊಳಗಾದ ಮನೆಗಳಿಗೆ ಶೀಘ್ರವಾಗಿ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ 318 ಕೋಟಿ ಬೆಳೆ ಪರಿಹಾರ ನೀಡಲಾಗಿದೆ ನೇರವಾಗಿ ಅವರ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು

ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಸಾವಿರಕ್ಕೂ ಹೆಚ್ಚು ಎನ್ ಡಿ ಆರ್ ಎಫ್ ಹಣ ಬರಬೇಕಾಗಿದೆ ಕೇಂದ್ರ ಸರ್ಕಾರ ಎಲ್ಲ ರೀತಿ ಯ ಸಹಾಯ ಮಾಡಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್,ಮೈಸೂರು ತಹಶಿಲ್ದಾರರ ರಕ್ಷಿತ್ ಸೇರಿದಂತೆ ಗ್ರಾಮದ ಮುಖಂಡರು, ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published.