ಪಿರಿಯಾಪಟ್ಟಣ:-15 ಏಪ್ರಿಲ್ 2022
ಭಾರತರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಿರುವ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದರೆ ಒಡೆದು ಹೋಗಿರುವ ಹಲವಾರು ಸಂಘಟನೆಗಳು ಒಂದಾಗಬೇಕು ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಹಾಗೂ ದಲಿತ ಮುಖಂಡರಾದ ಟಿ ಈರಯ್ಯ ತಿಳಿಸಿದರು.
ತಾಲೂಕಿನ ತಾತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮೂಲ ನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಭಾರತರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಮೂಲಕ ಪ್ರಜೆಗಳು ಯಾವ ರೀತಿ ಕಾನೂನು ಬದ್ಧವಾಗಿ ದೇಶದಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಸಲಹೆ-ಸೂಚನೆ ನೀರಿದ್ದರೆ ಹಾಗೆ ಎಲ್ಲರೂ ಅವರ ಆದರ್ಶ ಪಾಲನೆ ಮಾಡಬೇಕು ಇದರೊಂದಿಗೆ ಪ್ರತಿಯೊಂದು ಜಾತಿ-ಧರ್ಮದ ಬಾಂಧವ ರೂ ಎಲ್ಲರೂ ಒಂದೇ ಸಮಾನರು ಬಾಳಬೇಕು ಎಂಬ ಸಂದೇಶವನ್ನು ಜಾರಿ ಮಾಡಿದ್ದಾರೆ ಅದೇ ರೀತಿ ಮೂಲನಿವಾಸಿ ಅಂಬೇಡ್ಕರ್ ಸಂಘದ ಎಲ್ಲಾ ಪದಾಧಿಕಾರಿಗಳು ನಮ್ಮ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ ವಿತರಿಸುವ ಮೂಲಕ ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಪಾಲಿಸಿದ್ದಾರೆ ಅದೇ ರೀತಿ ಸಾಧಕರಿಗೆ ಸನ್ಮಾನಿಸಿ ಗೌರವಿಸಿರುವುದು ತುಂಬಾ ಹೆಮ್ಮೆಯ ವಿಷಯ ಅದೇ ರೀತಿ ಎಲ್ಲಾ ಸಂಘಟನೆಗಳು ಒಂದಾಗಿದ್ದಾರೆ ಸೂರ್ಯ ಚಂದ್ರನಂತೆ ಒಂದು ದೊಡ್ಡ ಶಕ್ತಿ ಉದ್ದವಾಗುತ್ತದೆ ಎಂದರು ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಎಲ್ಲರೂ ಮುಂದುವರೆಯಬೇಕು ಹಾಗೂ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು, ಈ ಸಂದರ್ಭ ತಾತನಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದ ಮುದ್ದು ಬೀರಪ್ಪ ಮಾತಾಡಿ ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸ್ಪಶತೆ ಬಗ್ಗೆ ಹೋರಾಟ ಮಾಡಿ ಬಂದವರು ಈ ದೇಶದಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದು ಇದನ್ನು ತೊಡೆದು ಹಾಕಬೇಕೆಂದು ದಿಟ್ಟ ನಿರ್ಧಾರ ಕೈಗೊಂಡ ಮಹಾನ್ ವ್ಯಕ್ತಿ ಅವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಖಂಡನೀಯ ಇಡೀ ಪ್ರಪಂಚವೇ ತಿರುಗಿ ನೋಡುವಂತಹ ನಮ್ಮ ದೇಶಕ್ಕೆ ಒಂದು ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಮಹಾನಾಯಕರ ಪ್ರೇರಣೆಯಿಂದ ಮಕ್ಕಳು ಅವರಂತೆಯೇ ಉನ್ನತ ಮಟ್ಟಕ್ಕೆ ಬರಬೇಕು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಅವರ ಕೊಡುಗೆ ಈ ದೇಶಕ್ಕೆ ಒಂದು ಶಕ್ತಿಯಾಗಿ ಮಾರ್ಪಟ್ಟಿದೆ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಮಕ್ಕಳ ವಿದ್ಯಾಭ್ಯಾಸವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕೊಂಡೊಯ್ಯುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಎಂದರು, ಈ ಸಂದರ್ಭ ಮುಖ್ಯಮಂತ್ರಿ ಪದವಿ ಪಡೆದ ಸನ್ಮಾನಿತರಾದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಅಸ್ಲಮ್ ಪಾಶ ಮಾತನಾಡಿದರು.
ಕಾರ್ಯಕ್ರಮದಲ್ಲಿ 110 ಶಾಲಾ ಮಕ್ಕಳಿಗೆ ಉಚಿತವಾಗಿ ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಪೆನ್ ಪೆನ್ಸಿಲ್ ನೋಟ್ಬುಕ್ ವಿತರಿಸಲಾಯಿತು. ಹಾಗೆ ಮುಖ್ಯ ಶಿಕ್ಷಕರಾದ ಮುದ್ದು ವೀರಪ್ಪ ನವರಿಗೆ ಹಾಗೂ ಮುಖ್ಯಮಂತ್ರಿ ಪದಕ ಪಡೆದ ಪೊಲೀಸ್ ಇಲಾಖೆಯ ಅಸ್ಲಮ್ ಪಾಶ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕಿರ್ನ ಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ನಂಜುಂಡೇಗೌಡ, ಮೂಲನಿವಾಸಿ ಅಂಬೇಡ್ಕರ್ ಸಂಘದ ಜಿಲ್ಲಾ ಉಸ್ತುವಾರಿ ಚನ್ನಬಸವ ,ಜಿಲ್ಲಾಧ್ಯಕ್ಷ ಸಿಎಸ್ ವೆಂಕಟೇಶ್, ಉಪಾಧ್ಯಕ್ಷ ಚೆಲುವರಾಜ್, ಪ್ರಧಾನ ಕಾರ್ಯದರ್ಶಿ ಅಶೋಕ್ ಎಸ್, ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ, ತಾಲೂಕು ಅಧ್ಯಕ್ಷ ಕುಮಾರ್ ,ಉಸ್ತುವಾರಿ ಸುಂದರಯ್ಯ ,ಗೌರವಾಧ್ಯಕ್ಷ ಚಿಕ ಮಾದೇವ್ ,ಉಪಾಧ್ಯಕ್ಷ ಹರೀಶ್ ,ಪ್ರಧಾನ ಕಾರ್ಯದರ್ಶಿ ಗೋವಿಂದ ,ಸಂಘಟನಾ ಕಾರ್ಯದರ್ಶಿ ಭೈರವ, ಸದಸ್ಯರಾದ ಬಸವರಾಜ್, ಶ್ರೀನಿವಾಸ್ ಶೇಖರ್ ಟಿ ಎಂ, ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ, ಸದಸ್ಯರಾದ ಗಣೇಶ್, ಮುಖೇಶ್, ಪೊಲೀಸ್ ಇಲಾಖೆ ಎ ಎಸ್ ಐ ಗಳಾದ ರಾಜಣ್ಣ, ಸುರೇಶ್, ಇದ್ದರು.