ಬೈಲಕುಪ್ಪೆ:16 ಏಪ್ರಿಲ್ 2022
ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನವೇ ಮಹಾಕಾವ್ಯವಾಗಿದೆ, ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಆಚರಿಸಿದ ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟಪಟ್ಟು, ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ, ಉನ್ನತ ಸ್ಥಾನಕ್ಕೆ ಏರಿದ್ದಾರೆ, ಭಾರತೀಯರಾದ ನಾವು ನಮ್ಮ ಪ್ರತಿಭೆಯಿಂದ ಮಾತ್ರ ಮೀಸಲಾತಿಯನ್ನು ಪಡೆಯಬೇಕೆಂಬ ಅಂಬೇಡ್ಕರ್ ಅವರ ಚಿಂತನೆ ಅತ್ಯಮೂಲ್ಯವಾಗಿದೆ ಅಂಬೇಡ್ಕರ್ ಅವರು ಉನ್ನತ ವ್ಯಾಸಂಗದ ವರೆಗೆ ಯಾವುದೇ ಮೀಸಲಾತಿಯನ್ನು ಪಡೆಯದೆ ತಮ್ಮ ಪ್ರತಿಭೆ ಚಲದಿಂದ ವ್ಯಾಸಂಗವನ್ನು ಮುಗಿಸಿ ಉನ್ನತ ಸ್ಥಾನಕ್ಕೇರಿದರು ಎಂದು ತಿಳಿಸಿದರು.
ಆಚರಣೆ ಕಾರ್ಯಕ್ರಮದಲ್ಲಿ ದೊಡ್ಡ ಹೊನ್ನೂರು ಗ್ರಾಮಸ್ಥರು, ಅಂಬೇಡ್ಕರ್ ಸಂಘದ ಯುವಕರು, ಮಕ್ಕಳು ಇದ್ದರು.