ಮಲಬಾರ್ ಗೋಲ್ಡ್ ನ ಪುನರ್ ನವೀಕೃತ ಮಳಿಗೆ ಉದ್ಘಾಟನೆ

ಮೈಸೂರು:16 ಏಪ್ರಿಲ್ 2022

ನಂದಿನಿ ಮೈಸೂರು

ನೂತನವಾಗಿ ನವೀಕೃತಗೊಂಡ ಕಟ್ಟಡದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆ ಪುನರ್ ಆರಂಭಗೊಂಂಡಿದೆ.

ಮೈಸೂರು ಬಸ್ ನಿಲ್ದಾಣದಲ್ಲಿರುವ ಪುನರ್ ಮಳಿಗೆಯನ್ನು ಶಾಸಕ ಎಲ್.ನಾಗೇಂದ್ರ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಚಿನ್ನಾಭರಣ ಮಾರಾಟದಲ್ಲಿ ಹೆಸರು ವಾಸಿಯಾದ ಮಲಬಾರ್ ಗೋಲ್ಡ್ ನನ್ನ ಕ್ಷೇತ್ರದಲ್ಲಿ ನೂತನ ನವೀಕೃತ ಮಳಿಗೆ ಆರಂಭಿಸಿರುವುದು ಸಂತಸ ವಿಷಯವಾಗಿದೆ. ಮಲಬಾರ್ ಗೋಲ್ಡ್ ನೊಂದಿಗೆ ನಮ್ಮ ಸಂಬಂಧ ಅವಿರತವಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಲಿ. ಮಲಬಾರ್ ಗೋಲ್ಡ್ ಕೋವಿಡ್ ಸಂದರ್ಭದಲ್ಲಿ ನೂರಾರು ಮಂದಿಗೆ ಆಹಾರದ ಕಿಟ್ ನೀಡಿ ತನ್ನ ಸಾಮಾಜಿಕ ಕಾಳಜಿ ತೋರಿರುವುದಕ್ಕೆ ಎಂದೆಂದಿಗೂ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಮಲಬಾರ್ ಗೋಲ್ಡ್ 350 ಮಂದಿ ಹೆಣ್ಣು ಮಕ್ಕಳ ಪದವಿಪೂರ್ವ ಶಿಕ್ಷಣದ ವಿದ್ಯಾಭ್ಯಾಸ ಕ್ಕೆ ತಲಾ 10 ಸಾವಿರ ರೂ. ನೀಡಿರುವ ಕಾರ್ಯ ಶ್ಲಾಘನೀಯ. ಕೇವಲ ಇದನ್ನು ವ್ಯಾಪಾರವಾಗಿ ನೋಡದೆ ಇದರೊಟ್ಟಿಗೆ ಸಾಮಾಜಿಕ ಕಾಳಜಿ ತೋರಿರುವ ಈ ಮಳಿಗೆ ಜತೆಗೆ ಸರ್ಕಾರ ಜನಪ್ರತಿನಿಧಿಗಳಾಗಿ ಇರುತ್ತೇವೆ ಎಂದರು.

ಮಲಬಾರ್ ಗೋಲ್ಡ್ ನ ಕರ್ನಾಟಕ ಹೆಡ್ ಫಿಲ್ಸರ್ ಬಾಬು ಮಾತನಾಡಿ, ಕೋವಿಡ್ ಬಳಿಕ ಉದ್ಯಮದಲ್ಲಿ ಸಾಕಷ್ಟು ಬೆಳೆವಣಿಗೆ ಆಗಿದೆ. ಗ್ರಾಹಕರ ಅಭಿರುಚಿ ಗೆ ಅನುಗುಣವಾದ ಚಿನ್ನಾಭರಣವನ್ನು ಒದಗಿಸಿಕೊಡುವಲ್ಲಿ ಹಾಗೂ ಗುಣಮಟ್ಟ ದ ಚಿನ್ನಾಭರಣ ನೀಡುವಲ್ಲಿ ನಮ್ಮ ಸಂಸ್ಥೆ ಸದಾ ಸಿದ್ಧ ಇರುತ್ತದೆ ಎಂದು ಹೇಳಿದರು.

ಉಪಮಹಾಪೌರ ಅನ್ವರ್ ಬೇಗ್, ನಗರಪಾಲಿಕೆ ಸದಸ್ಯರಾದ ಸತೀಶ್, ರಂಗಸ್ವಾಮಿ, ಮೃಗಾಲಯ ಪ್ರಾಧಿಕಾರದ ಸದಸ್ಯೆ ಜ್ಯೋತಿ, ಮಲಬಾರ್ ಗ್ರೂಪ್ ನ ಎಂ.ಪಿ.ಅಹಮ್ಮದ್, ಗಜೇಂದ್ರ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *