ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು

ಪಿರಿಯಾಪಟ್ಟಣ:20 ನವೆಂಬರ್ 2021

ನಂದಿನಿ

ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜು ಬೆಟ್ಟದಪುರ, ಪಿರಿಯಾಪಟ್ಟಣ ತಾ॥
ಎಸ್ ಎಂಎಸ್ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ 122 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 
19-11-2021 ಮತ್ತು 20-11-2021 ರಂದು ಪಿರಿಯಾಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ ಪಡೆದಿದೆ.
ಬಾಲಕಿಯರು 80 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಹಾಗೆಯೇ ಬಾಲಕರ ವಿಭಾಗದಲ್ಲಿ 72ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುತ್ತಾರೆ.

  • ವೈಯಕ್ತಿಕ ಚಾಂಪಿಯನ್ ಆಗಿ ಬಾಲಕಿಯರ ವಿಭಾಗದಲ್ಲಿ ಸಹನ ಎಂ.ಆರ್ 3000 ಮೀಟರ್ ಓಟ ಪ್ರಥಮ, 1500ಮೀಟರ್ ಓಟ ಪ್ರಥಮ, 800 ಮೀಟರ್ ಓಟ ಪ್ರಥಮ(15ಅಂಕ).
    ಬಾಲಕರ ಥ್ರೋಬಾಲ್ ಪ್ರಥಮ, ಕೋಕೋ ಪ್ರಥಮ ,ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ವಾಲಿಬಾಲ್ ದ್ವಿತೀಯ.
    ಬಾಲಕಿಯರ ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, ವಾಲಿಬಾಲ್ ಪ್ರಥಮ, ಕೋಕೋ ದ್ವಿತೀಯ.
    ಅಥ್ಲೆಟಿಕ್ಸ್ ವಿಭಾಗದಲ್ಲಿ ಬಾಲಕರ 3000 ಮೀಟರ್ ಓಟ ಪ್ರಥಮ, 1500ಮೀಟರ್ ಓಟ ಪ್ರಥಮ, 800 ಮೀಟರ್ ಓಟ ದ್ವಿತೀಯ, 400 ಮೀಟರ್ ಓಟ ದ್ವಿತೀಯ,200 ಮೀಟರ್ ಓಟ ಪ್ರಥಮ, 4*100 ಮೀಟರ್ ರಿಲೇ ಪ್ರಥಮ, 4*400 ಮೀಟರ್ ರಿಲೇ ಪ್ರಥಮ, ಭರ್ಜಿ ಎಸೆತ ಪ್ರಥಮ.
    ಬಾಲಕಿಯರ ವಿಭಾಗದ ಅಥ್ಲೆಟಿಕ್ಸ್ ವಿಭಾಗದಲ್ಲಿ 3000 ಮೀಟರ್ ಓಟ ಪ್ರಥಮ, 1500ಮೀಟರ್ ಓಟ ಪ್ರಥಮ, 800 ಮೀಟರ್ ಓಟ ಪ್ರಥಮ, 200 ಮೀಟರ್ ಓಟ ಪ್ರಥಮ, 100ಮೀಟರ್ ಓಟ ಪ್ರಥಮ, ಪ್ರಥಮ, 4*400 ಮೀಟರ್ ರಿಲೇ ಪ್ರಥಮ, ಉದ್ದ ಜಿಗಿತ ದ್ವಿತೀಯ, ತ್ರಿವಿಧ ಜಿಗಿತ ದ್ವಿತೀಯ, ಭರ್ಜಿ ಎಸೆತ ದ್ವಿತೀಯ.
    ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಟಿ.ಸಿ ವಸಂತ್ ರಾಜೇ ಅರಸ್, ಆಡಳಿತಾಧಿಕಾರಿಯಾದ ಬಿ.ವಿ ಮಂಜುನಾಥ್, ಕಾರ್ಯದರ್ಶಿಗಳಾದ ಛಾಯಾ ಮಂಜುನಾಥ್, ಪ್ರಾಂಶುಪಾಲರಾದ ರಾಜಾ, ಮುಖ್ಯಶಿಕ್ಷಕರಾದ ಗೋವಿಂದ್, ವೆಂಕಟೇಶ್ ಕ್ರೀಡಾಧಿಕಾರಿಯಾದ ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಭಾಸ್ಕರ್, ತಮ್ಮೇಗೌಡ ಮತ್ತು ಉಪನ್ಯಾಸಕರಾದ ಕುಬೇರ, ಸತೀಶ್, ವಸಂತ್, ಸುನೀಲ್, ಬಸವರಾಜ್, ನಟರಾಜ್, ಇಂದುಶ್ರೀ ಅಭಿನಂದಿಸಿ ಪುರಸ್ಕರಿಸಿದರು.

Leave a Reply

Your email address will not be published. Required fields are marked *