ಮೈಸೂರು:21 ನವೆಂಬರ್ 2021
ನಂದಿನಿ
ಚಾಮುಂಡಿಬೆಟ್ಟದ ನಂದಿಗೆ ಇಂದು ಮಹಾಮಸ್ತಕಾಭಿಷೇಕ ನೆರವೇರಿದ್ದು ,16 ನೇ ವರ್ಷದ ಮಹಾಮಸ್ತಕಭಿಷೇಕಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.
ಹಾಲು,ತುಪ್ಪ, ಅರಿಶಿಣ,ಕುಂಕುಮ, ಎಳನೀರು,ಜೇನುತುಪ್ಪ ಸೇರಿದಂತೆ 38 ದ್ರವ್ಯಗಳಿಂದ ಮಜ್ಜನ ನೆರವೇರಿಸಲಾಯಿತು.ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರನೇ ಭಾನುವಾರ ಬೆಟ್ಟದ ಬಳಗದಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ,ಹೊಸ ಮಠದ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಅಭಿಷೇಕ ನೆರವೇರಿತು.ಅಭಿಷೇಕದ ನಂತರ ನಂದಿಗೆ ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು