ರಸ್ತೆ ಗುಂಡಿ ಮುಚ್ಚಿದ ಎಕ್ಸಿಸ್ ಬ್ಯಾಂಕ್ ಸಿಬ್ಬಂದಿ

ನಂದಿನಿ ಮೈಸೂರು

ಮೈಸೂರು: ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿನ ಎಕ್ಸೆಸ್ ಬ್ಯಾಂಕ್ ಎದುರಿನ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ಇಂದು ಎಕ್ಸಿಸ್ ಬ್ಯಾಂಕ್ ಸಿಬ್ಬಂದಿಗಳೇ ಗುಂಡಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಸಿದರು.

ಎಕ್ಸೆಸ್ ಬ್ಯಾಂಕ್ ಎದುರು ಹಲವು ದಿನಗಳಿಂದ ರಸ್ತೆ ಹೊಂಡಗುಂಡಿಗಳಿಂದ ಕೂಡಿತ್ತು. ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಇದ್ದು ಗುಂಡಿ ಮುಚ್ಚಿಸುವಂತೆ ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಎಕ್ಸೆಸ್ ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರ ಸಹಾಯದಿಂದ ರಸ್ತೆಯಲ್ಲಿರುವ ಗುಂಡಿಗೆ ಮಣ್ಣು ಹಾಕಿಸುವ ಮೂಲಕ ಗುಂಡಿ ಮುಚ್ಚಿದ್ದಾರೆ.

Leave a Reply

Your email address will not be published. Required fields are marked *