ಮೈಸೂರು:22 ಡಿಸೆಂಬರ್ 2021
ನಂದಿನಿ
ದಿ.ನಟ ಪುನೀತ್ ರಾಜ್‌ಕುಮಾರ್ ರವರ ದೇವಸ್ಥಾನದ ಕಡೆಗೆ ಪಾದಯಾತ್ರೆ ಶಿರ್ಷಿಕೆಯಡಿ ಮೊದಲನೇ ವರ್ಷದ ಪಾದಯಾತ್ರೆ ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಸಮಿತಿವತಿಯಿಂದ ಮೊದಲನೇ ವರ್ಷದ ಪಾದಯಾತ್ರೆ ಕೈಗೊಂಡಿದ್ದಾರೆ.
ಡಿ. 25 ರಂದು ಮೈಸೂರಿನ ಡಾ .ರಾಜ್‌ಕುಮಾರ್ ಉದ್ಯಾನವನದಿಂದ ಪಾದಯಾತ್ರೆ ಹೊರಟು ಡಿ 29- ರಂದು ಪುನೀತ್‌ರಾಜ್‌ಕುಮಾರ್ ರವರ ಸಮಾಧಿ ದರ್ಶನ ಮಾಡಲಾಗುವುದು .
ಮಾರ್ಗ ಇಂತಿದೆ : ಶ್ರೀರಂಗಪಟ್ಟಣ , ಮಂಡ್ಯ , ಮದ್ದೂರು , ಚೆನ್ನಪಟ್ಟಣ , ರಾಮನಗರ , ಬಿಡದಿ ಕೆಂಗೇರಿ ಮಾರ್ಗವಾಗಿ ಕಂಠೀರವ ಸ್ಟುಡಿಯೋ ತಲುಪುವುದು. ಆಸಕ್ತಿಯುಳ್ಳ ಅಭಿಮಾನಿಗಳು ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು : ರಾಜು ಎನ್ . ಅಧ್ಯಕ್ಷರು , ಪುನೀತ್‌ರಾಜ್‌ಕುಮಾರ್ ಸಮಾಜ ಸೇವಾ ಸಮಿತಿ ಸೂರಿ ಕ್ಯಾಟ್ , ಮೋಹನ್ – ಸಿಂಧುವಳ್ಳಿ , ರಾಜು ಜಿ . , ಸಂತೂ – ಅರತಿ ಉಕ್ಕಡ , ಮಂಜ – ಸಿ.ವಿ . ರಸ್ತೆ 9448787111 9008229950 ಇವರನ್ನ ಸಂಪರ್ಕಿಸಬಹುದಾಗಿದೆ.