ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅನನ್ಯ:ಅನಂತರಾಮು

ಮೈಸೂರು:22 ಡಿಸೆಂಬರ್ 2021

ನಂದಿನಿ

ಚಾಮುಂಡಿಪುರಂನಲ್ಲಿರುವ ಬಾಲಬೋಧಿನಿ ಶಾಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ
ಭಾರತೀಯ ಗಣಿತ ಪ್ರತಿಭೆ ಶ್ರೀನಿವಾಸ್ ರಾಮಾನುಜನ್ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ ಯನ್ನು ಶಾಲಾ ಮಕ್ಕಳಿಗೆ ಓದುವ ಸಾಮಗ್ರಿ ಗಳನ್ನು ನೀಡಿ
ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಣಿತ ಅಧ್ಯಾಪಕರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮೈಸೂರು ಘಟಕದ ಸಂಚಾಲಕರಾದ ಆರ್ ಅನಂತರಾಮು ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅನನ್ಯವಾದುದು. ಭಾರತೀಯರು ವಿಶ್ವಕ್ಕೆ ಸೊನ್ನೆ ಪರಿಚಯಿಸಿದರು.ರಾಮಾನುಜನ್‌,ಭಾಸ್ಕರಾಚಾರ್ಯ,ಆರ್ಯಭಟ ಹಲವಾರು ಗಣಿತಶಾಸ್ತ್ರಜ್ಞರ ಪರಿಚಯ ತಿಳಿಸಿದರು.ಇಂದಿನ ಜಗತ್ತು ಡಿಜಿಟಲ್‌ ಯುಗ ಕಾಣಲು ಗಣಿತದ ಕೊಡುಗೆ ಅಪಾರವಾಗಿದೆ. ನಿತ್ಯ ಜೀವನದಲ್ಲಿಗಣಿತ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ಜಗತ್ತಿನ ಗಣಿತ ಕ್ಷೇತ್ರಕ್ಕೆ ಸೊನ್ನೆ ಪರಿಚಯಿಸಿದ ಭಾರತವು ಆರ್ಯಭಟ, ಶ್ರೀನಿವಾಸ ರಾಮಾನುಜನ್‌ ಅವರಂತಹ ಶ್ರೇಷ್ಠ ಗಣಿತಜ್ಞರನ್ನು ಕೊಡುಗೆಯಾಗಿ ನೀಡಿದೆ’ ಎಂದು ಹೇಳಿದರು .

ನಂತರ ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ ರಾಮಾನುಜನ್‌ರ ಹುಟ್ಟು ಹಬ್ಬವನ್ನು ಇಡೀ ವಿಶ್ವವೇ ಆಚರಿಸುತ್ತಿದೆ.ದೇಶದಲ್ಲಿ ಅನೇಕ ಜಾತಿ, ಧರ್ಮ, ಭಾಷೆಗಳಿದ್ದರೂ ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಭಾರತವು ವಿಶ್ವಮಾನ್ಯವಾಗಲು ರಾಮಾನುಜನ್ ಅವರಂತಹ ಮಹನೀಯರ ಪರಿಶ್ರಮ ಕಾರಣ. 2025ರ ವೇಳೆಗೆ ದೇಶದಲ್ಲಿ ಶೇ 56ರಷ್ಟು ಜನಸಂಖ್ಯೆಯು 18 ವರ್ಷದಿಂದ 28 ವರ್ಷದ ನಡುವಿನ ಯುವಕರಿದ್ದು, ಇಡೀ ಪ್ರಪಂಚ ಅವರ ಶ್ರಮ ಬಯಸುತ್ತದೆ. ಮಾನವ ಸಂಪನ್ಮೂಲದಲ್ಲೂ ದೇಶ ಪ್ರಥಮ ಸ್ಥಾನದಲ್ಲಿರುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,
ಡಿಪ್ಲೊಮಾ ಇನ್ ಆರ್ಟ್ಸ್ ಮಾಸ್ಟರ್ ರವಿಶಂಕರ್,
ಕಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ರಾಕೇಶ್ ಕುಂಚಿಟಿಗ,ಎಸ್ ಎನ್ ರಾಜೇಶ್ , ಸುಚೇಂದ್ರ ,ಬಾಲಬೋಧಿನಿ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *