ಮಾಹಿತಿ ಕಣಜ ಯೋಜನೆಯ ಕುರಿತು ಅರಿವು ಮೂಡಿಸುವ ವಿಶೇಷ ಗ್ರಾಮಸಭೆ

ಹೆಚ್ ಡಿ ಕೋಟೆ:22 ಡಿಸೆಂಬರ್ 2021

ಸಂಜಯ್ ಕೆ ಬೆಳತೂರು
ಸರಗೂರು ವರದಿಗಾರರು

ಇಂದು ತಾಲೂಕಿನ ಅಂತರಸಂತೆಯಲ್ಲಿ ಮಾಹಿತಿ ಕಣಜ ಯೋಜನೆಯ ಕುರಿತು ಅರಿವು ಮೂಡಿಸುವ ವಿಶೇಷ ಗ್ರಾಮಸಭೆ ನಡೆಯಿತು.

ಅಂತರಸಂತೆ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ಕಣಜ ಯೋಜನೆಯ ಕುರಿತು ಪಿಡಿಒ ಆರ್.ಕೆ.ಚಿದಾನಂದಸ್ವಾಮಿ ಅವರು ಮಾತನಾಡಿದರು.ಸಾರ್ವಜನಿಕರು ಇನ್ನೂ ಮುಂದೆ ಯಾವುದೇ ಇಲಾಖೆಯಿಂದ ಮಾಹಿತಿಯನ್ನು ಪಡೆದುಕೊಳ್ಳಲು ಇಲಾಖೆಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ.ಬದಲಿಗೆ ಮಾಹಿತಿ ಕಣಜ ಎಂಬ ನೂತನ ತಂತ್ರಾಂಶದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಿಂದ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.ಈ ಹಿಂದೆ ಮಾಹಿತಿಗಾಗಿ ಇಲಾಖೆಗಳಿಂದ ಇಲಾಖೆಗಳಿಗೆ ಅಲೆದಾಡುವ ಅನಿರ್ವಾತೆ ಎದುರಾಗಿತ್ತು. ಆದರೆ ಇದೀಗಾ ರಾಜ್ಯ ಸರ್ಕಾರ ಮಾಹಿತಿ ಕಣಜ ತಂತ್ರಾಂಶದ ಮೂಲಕ ಕುಳಿತಲ್ಲಿಯೇ ಎಲ್ಲಾ ಇಲಾಖೆಯ ಮಾಹಿತಿಯನ್ನು ಪಡೆದುಕೊಳ್ಳವ ಅವಕಾಶವನ್ನು ಕಲ್ಪಿಸಿದೆ.ಈ ಒಂದು ತಂತ್ರಾಂಶದ ಮೂಲಕ ನಾವು ಆರ್.ಟಿ.ಸಿ, ವಸತಿ ಯೋಜನೆ, ನೈಸರ್ಗಿಕ ವಿಕೋಪದ ಬೆಳೆಹಾನಿ ಪರಿಹಾರ ಸೇರಿದಂತೆ ಸುಮಾರು 50 ಇಲಾಖೆಯ 150ಕ್ಕೂ ಹೆಚ್ಚಿನ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆಯ ಬಹುದಾಗಿದೆ.ಇದೇ ವೇಳೆ ಮಾಹಿತಿ ಕಣಜ ತಂತ್ರಾಂಶದ ಬಗ್ಗೆ ವಿಡಿಯೋ ಭಿತ್ತರಿಸುವ ಮೂಲಕ ಅದರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲೀಂಪಾಷ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಸುಬ್ರಮಣ್ಯ, ಶಿವಲಿಂಗನಾಯಕ ಹಾಗೂ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *