ಕ್ರಿಸ್‌ಮಸ್ ಹಬ್ಬ ಶುಭ ಸುದ್ದಿ ತರಲಿ,ಸಾಂಕ್ರಾಮಿಕ ರೋಗವು ಕೊನೆಗೊಳ್ಳಲಿ:ಕೆಎ ವಿಲಿಯಂ

ಮೈಸೂರು:22 ಡಿಸೆಂಬರ್ 2021

ನಂದಿನಿ

ಡಿ .25 ರಂದು ಸರ್ಕಾರದ ಕೋವಿಡ್ ಮಾರ್ಗ ಸೂಚಿಯಂತೆ ಕ್ರಿಸ್ ಮಸ್ ಹಬ್ಬವನ್ನು ಸರಳ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಕ್ರೈಸ್ತ ಧರ್ಮಾಧ್ಯಕ್ಷ ಕೆ .ಎ ವಿಲಿಯಂ ತಿಳಿಸಿದರು.

ಮೈಸೂರಿನ ಬಿಷಪ್ ಹೌಸ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕ್ರಿಸ್‌ಮಸ್ ಕ್ರೈಸ್ತರಿಗೆ ಮಾತ್ರವಲ್ಲ , ಮನುಕುಲಕ್ಕೆ ಸಂತೋಷ , ಶಾಂತಿ , ಸಮಾಧಾನ ತರುವ ಹಬ್ಬವಾಗಿದೆ . ಇಂದು ಅತೀ ಅಗತ್ಯವಾಗಿರುವ ಶಾಂತಿಯ ಅರಸರಾಗಿ ಪ್ರಭುಕ್ರಿಸ್ತರನ್ನು ಅವರ ಮುಂಚಿತವಾಗಿಯೇ ಘೋಷಿಸಲಾಗಿತ್ತು .
ಈ ಕ್ರಿಸ್ತ ಜಯಂತಿಯು ಸರ್ವರಿಗೂ ಶಾಂತಿ ಸಹೋದರತೆಯ ಹೊಸ ಭರವಸೆಯನ್ನ ತರಲಿ , ನಿಜ ಮನುಷ್ಯರಾಗಲೂ ಪ್ರೇರಣೆಯಾಗಲಿ ಎಂಬ ಸಂದೇಶ ನೀಡಿದರು.ಈ ಹಬ್ಬವು ಮಹಾಮಾರಿಯ ಕತ್ತಲೆಯ ನಡುವೆ ನಮಗೆ ಸಂತೋಷ , ಶಾಂತಿ ಮತ್ತು ಹೊಸ ಭರವಸೆಯನ್ನು ತುಂಬಲಿ , ಈ ಕ್ರಿಸ್‌ಮಸ್ ಪರಸ್ಪರರಲ್ಲಿ ಕ್ರಿಸ್ತನನ್ನು ಕಂಡುಕೊಳ್ಳುವ ಮತ್ತು ಪ್ರೀತಿ , ಶಾಂತಿ ಮತ್ತು ಸಂತೋಷದ ವಿಶ್ವವನ್ನು ನಿರ್ಮಿಸುವ ಕಾಲವಾಗಲಿ , ಅಸೂಯೆ , ಅಹರಿಕಾರ , ದ್ವೇಷ , ಸೇಡು ತೀರಿಸಿಕೊಳ್ಳುವ ಮನೋಭಾವ , ಸ್ವಾರ್ಥ ಮತ್ತು ಇತರ ದುಷ್ಪ ಪ್ರವೃತ್ತಿಗಳನ್ನು ನಾವು ಬದಿಗಿಟ್ಟು , ನಾವು ಹೊಸ ಮತ್ತು ಉತ್ತಮ ಸಮಾಜಕ್ಕೆ ಅಡಿಪಾಯ ಹಾಕುವ ಅವಕಾಶವನ್ನು ಕಲಿಸಿಕೊಡುವ ಸಂದರ್ಭ ಇದಾಗಿರಲಿ , ಈ ಕ್ರಿಸ್‌ಮಸ್ ಹಬ್ಬ ಶುಭ ಸುದ್ದಿಯನ್ನು ತರಲಿ , ಸಾಂಕ್ರಾಮಿಕ ರೋಗವು ಕೊನೆಗೊಳ್ಳಲಿ ಮತ್ತು ಜನರು ಶೀಘ್ರದಲ್ಲಿ ಸಂಪೂರ್ಣ ಸಹಜ ಸ್ಥಿತಿಗೆ ಹಿಂದಿರುಗಲಿ ಎಂದು ಆಶಿಸುತ್ತೇನೆ ಎಂದರು.

ಸರ್ಕಾರ ನಿನ್ನೆ ಹೊರಡಿಸಿರುವ ಸುತ್ತೋಲೆಯಲ್ಲಿ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧಗಳನ್ನು ಹೇರಿದೆ.ಆದರೆ ಕ್ರಿಸ್ಮಸ್ ಆಚರಣೆಗೆ ಹೆಚ್ಚಿನ ನಿರ್ಬಂಧ ಹೇರಿಲ್ಲ.ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.ಸರ್ಕಾರ ನೀಡಿರುವ ಮಾರ್ಗಸೂಚಿಯ ಪ್ರಕಾರ ಕ್ರಿಸ್ಮಸ್ ಆಚರಣೆ ಮಾಡಲಾಗುವುದು.

ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ.ನಾವು ಆ ರೀತಿಯ ತಪ್ಪುಗಳನ್ನು ಮಾಡ್ತಿಲ್ಲ.ನಾವು ಯಾರನ್ನು ಬಲವಂತವಾಗಿ ಕನ್ವರ್ಟ್ ಮಾಡ್ತಿಲ್ಲ.ಸಮಾಜ ಸೇವೆ ಕ್ರೈಸ್ತ ಧರ್ಮದ ಮೂಲ ಉದ್ದೇಶ ಹೇಳುತ್ತೇವೆ ನಾವು ಯಾರನ್ನು ಬಲವಂತವಾಗಿ ಮತಾಂತರ ಮಾಡಿಲ್ಲ.ಏನೂ ಇಲ್ಲದೇ ಅಪವಾದ, ತೊಂದರೆ ಮಾಡೊದು ಸರಿಯಲ್ಲ.ರಾಜ್ಯದಲ್ಲಿ ಈ ಬಿಲ್ ನ ಅಗತ್ಯತೆ ಇಲ್ಲ.
ಆ ರೀತಿ ಬಲವಂತ ಮತಾಂತರ ಮಾಡಿದ್ರೆ ಕಾಯ್ದೆ ತರದೇ ಅಂತವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ ಕಾಯ್ದೆ ದುರುಪಯೋಗ ಪಡಿಸಿಕೊಂಡು ತೊಂದರೆ ಮಾಡುವ ಸಾಧ್ಯತೆ ಇದೆ.ಕಾಯ್ದೆಯಿಂದ ಒಂದು ಧರ್ಮಕ್ಕೆ ತೊಂದರೆ ಮಾಡಬಾರದು.
ಇದು ಕೇವಲ ಕ್ರೈಸ್ತ ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ.ಈ ಬಗ್ಗೆ ಹೋರಾಟ ಕುರಿತು ಧರ್ಮಾಧ್ಯಕ್ಷರ ಒಕ್ಕೂಟ ತೀರ್ಮಾನ ಮಾಡುತ್ತೆವೆ.
ನಾವು ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಎಂ‌ ಭೇಟಿ ಮಾಡಿಲ್ಲ.ನಮ್ಮ ಸಮುದಾಯಕ್ಕೆ ಸ್ಮಶಾನ, ಇತರೆ ಸವಲತ್ತುಗಳನ್ನ ಕೇಳಲು ಹೋಗಿದ್ವಿ.ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ ಎಂದರು.

Leave a Reply

Your email address will not be published. Required fields are marked *