ಮೈಸೂರು:22 ಡಿಸೆಂಬರ್ 2021
ನಂದಿನಿ
ಕುವೆಂಪು ನಗರ ಪೊಲೀಸ್ ಠಾಣೆ ವತಿಯಿಂದ ಎಸಿಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ “ಅಪರಾಧ ತಡೆ ಮಾಸಾಚರಣೆ” ಪ್ರಯುಕ್ತ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಯಿತು.
ಜ್ಞಾನಗಂಗಾ ಶಾಲೆ ವಿದ್ಯಾರ್ಥಿಗಳ ಜೊತೆ ಕುವೆಂಪು ನಗರದ ವಿವಿಧ ರಸ್ತೆಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅಪರಾಧ ತಡೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಅಪರಾಧ ತಡೆಯ ಬಗ್ಗೆ ಎಸಿಪಿ ಪೂರ್ಣಚಂದ್ರ ತೇಜಸ್ವಿ ಹಾಗೂ ಪೊಲೀಸ್ ನಿರೀಕ್ಷಕರಾದ ಷಣ್ಮುಗ ವರ್ಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀ ಮುರುಳಿಗೌಡ , ಮಂಜುನಾಥ , ಯೋಗೇಶ್ ,ಬಸವರಾಜು , ಕುಮಾರ್, ನವೀನ್ ,ಸಿದ್ದರಾಮ ಪೂಜಾರಿ, ಹಸನ್ ಸಾಬ್ ನದಾಫ್ ,ಯುವರಾಜ್, ಮಹದೇವ್, ಮತ್ತು ಶಾಲಾ ಆಡಳಿತ ಮಂಡಳಿಯ ಶ್ರೀಮತಿ ವಿಜಯಲಕ್ಷ್ಮಿ ಮೇಡಂ ಮತ್ತು ಪ್ರಾಂಶುಪಾಲರಾದ ಶ್ರೀ ಸುಧೀರ್ ಮತ್ತು ಶಾಲೆಯ ಇತರ ಪ್ರಾಧ್ಯಾಪಕರು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.