ಡಿ.26 ರಂದು ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ 32 ನೇ ವಾರ್ಷಿಕೋತ್ಸವ, ಕಾಳಭೈರವೇಶ್ವರ ಸ್ವಾಮಿ ಹೋಮ

 

ಮೈಸೂರು:22 ಡಿಸೆಂಬರ್ 2021

ನಂದಿನಿ

ಮೈಸೂರು ನಗರದ ರೇಲ್ವೆ ನಿಲ್ದಾಣದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಸ್ಥಾನದ 32 ನೇ ವರ್ಷದ ವಾರ್ಷಿಕೋತ್ಸವವು ಡಿ . 26 ರಂದು ಭಾನುವಾರ ವಿಜೃಂಭಣೆಯಿಂದ ನೆರವೇರಲಿದೆ ಎಂದು ಪ್ರಧಾನ ಅರ್ಚಕ ರಾದ ಕೆ.ಎಸ್ . ನಾಗೇಶ್ ದೀಕ್ಷಿತ್ ಹಾಗೂ ಅರ್ಚಕ ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ .

ಈ ಬಾರಿ ವಾರ್ಷಿಕೋ ತ್ಸವದ ವಿಶೇಷವಾಗಿ ಕ್ಷೇತ್ರ ಪಾಲಕ ( ಶ್ರೀ ಕಾಲಭೈರವೇ ಶ್ವರ ಸ್ವಾಮಿ ) ಮಾಶ ಅಪೂಪ ( ಉದ್ದಿನ ಬೊಂಡ ) 1,108 ಹೋಮ ನಡೆಯಲಿದೆ . ಅಂದು ಬೆಳಗ್ಗೆ 8 ಕ್ಕೆ ಅವಧೃತಸ್ಸಾ , ಶ್ರೀ ಮಹಾಗಣಪತಿ ಹೋಮ , ಶ್ರೀ ಸುಬ್ರಹ್ಮಣ್ಯ ಹೋಮ , ಶ್ರೀ ಧರ್ಮಶಾಸ್ತ್ರ ಹೋಮ , ಶ್ರೀ ಗುರುದತ್ತಾತ್ರೇಯ ಹೋಮ , ಶ್ರೀ ಆಂಜ ನೇಯ ಹೋಮ , ಶ್ರೀ ನವಮಗ್ರಹೋಮ , ನಾಗದೇವತಾ ಹೋಮ ನೆರವೇರಲಿದೆ . ಬೆಳಗ್ಗೆ 11 ಮಹಾಪೂರ್ಣಾಹುತಿ , ಮಧ್ಯಾಹ್ನ 12 ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಾಗಲಿದೆ . ಹೆಚ್ಚಿನ ಮಾಹಿತಿಗಾಗಿ ನಾಗೇಂದ್ರ ಪ್ರಸಾದ್ , ಮೊ . 9845836983 ಸಂಪರ್ಕಿಸಬಹುದು .

Leave a Reply

Your email address will not be published. Required fields are marked *