ನಂಜನಗೂಡು ದೊಡ್ಡಜಾತ್ರೆಯಲ್ಲೂ ರಾರಾಜಿಸಿದ ಅಪ್ಪು ಭಾವಚಿತ್ರ

ನಂಜನಗೂಡು:16 ಮಾರ್ಚ್ 2022

ನಂದಿನಿ ಮೈಸೂರು

ನಂಜನಗೂಡು ಪಂಚಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿದೆ.ಲಕ್ಷಾಂತರ ಮಂದಿ ಜಾತ್ರೆಯನ್ನ ವೀಕ್ಷಿಸಿದ್ದಾರೆ.ಆರಾಧ್ಯದೈವನನ್ನ ಸ್ಮರಿಸಿದ್ದಾರೆ.

ಈ ಮಧ್ಯೆ ಇತ್ತೀಚೆಗೆ ಅಪಾರ ಅಭಿಮಾನಿಗಳನ್ನ ಅಗಲಿದ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನೂ ಸಹ ಭಕ್ತರು ಸ್ಮರಿಸಿದ್ದಾರೆ.ರಥೋತ್ಸವದ ಸಂಧರ್ಭದಲ್ಲಿ ಪುನೀತ್ ರವರ ಭಾವಚಿತ್ರ ಪ್ರದರ್ಶಿಸಿ ಅಭಿಮಾನ ಮೆರೆದಿದ್ದಾರೆ.

ಪುನೀತ್ ರವರಿಗೆ ಘೋಷಣೆ ಮೂಲಕ ನಮನ ಸಲ್ಲಿಸಿದ್ದಾರೆ.ನೆಚ್ಚಿನ ಅಭಿಮಾನಿ ಅಗಲಿ ತಿಂಗಳುಗಳೇ ಉರುಳಿದರೂ ಪುನೀತ್ ಇನ್ನೂ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಅಭಿಮಾನಿಯೊಬ್ಬರು ಬಾಳೆಹಣ್ಣಿನ ಮೇಲೆ ಅಪ್ಪು ಅಮರ ಎಂದು ಬರೆಯುವುದರ ಮೂಲಕ ತೇರಿಗೆ ಎಸೆಯುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.

Leave a Reply

Your email address will not be published. Required fields are marked *